CHITRADURGA NEWS | 16 NOVEMBER 2026
ಚಿತ್ರದುರ್ಗ: ತಾಲ್ಲೂಕಿನ ತುರುವನೂರು ಹೋಬಳಿ ಚಿಕ್ಕಕಬ್ಬಿಗೆರೆ ಗ್ರಾಮದಲ್ಲಿ ಛಲವಾದಿ ಸಮುದಾಯದ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಮಾರಮ್ಮ ದೇವಿಯ ದೇವಸ್ಥಾನದ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವು 2026ರ ಡಿಸೆಂಬರ್ 03 ಮತ್ತು 04 ರಂದು ವಿಧ್ಯುಕ್ತವಾಗಿ ಜರುಗಲಿದೆ.
ಇದನ್ನೂ ಓದಿ: ಚಿಕಿತ್ಸೆಗಾಗಿ ದಾಖಲಾಗಿದ್ದ ಅನಾಮಧೇಯ ವ್ಯಕ್ತಿ ಸಾವು | ಗುರುತು ಪತ್ತೆಗೆ ಮನವಿ
ಡಿಸೆಂಬರ್ 03ರಂದು ಗುರುವಾರ ಸಂಜೆ 4 ಗಂಟೆಗೆ ಸರಿಯಾಗಿ ಗಂಗಾ ಪೂಜೆ, ಗಣಪತಿ ಪೂಜೆ, ಆಲಯ ಪ್ರವೇಶ, ಪುಣ್ಯಾಹ, ನಾಂದಿ, ಪಂಚಕಲಶ, ನವಗ್ರಹ, ಮೃತ್ಯುಂಜಯ, ವಾಸ್ತು, ನವದುರ್ಗ, ದಶದ್ವಿಕಲಶ, ಸಪ್ತಸಭಾ ದೇವತಾ ಪೂಜೆ, ಶ್ರೀಚಕ್ರ ಮಂಡಲ ಆರಾಧನೆ, ಪ್ರವೇಶ ಬಲಿ, ಶ್ರೀದೇವಿಗೆ ಕಲಶಾರ್ಚಣೆ, ನ್ಯಾಸಗಳು, ಶ್ರೀದೇವಿಗೆ ಪಂಚಗವ್ಯ ಪೂಜೆ, ಬಲಿದಾನಗಳು ಹಾಗೂ ಮಹಾಮಂಗಳ ಆರತಿ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 04ರಂದು ಶುಕ್ರವಾರ ಬೆಳಿಗ್ಗೆ 4.30 ರಿಂದ 6 ರವರೆಗೆ ನೂತನ ಮಾರಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಬೆಳಿಗ್ಗೆ 9.32 ರಿಂದ 10.20 ರವರೆಗೆ ದೇವಸ್ಥಾನದ ಶಿಖರ ಕಲಶ ಪ್ರತಿಷ್ಠಾಪನೆ ಜರುಗಲಿದೆ. ಅದೇ ದಿನ ಮಧ್ಯಾಹ್ನ 12 ಗಂಟೆಗೆ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ತುರುವನೂರು ಹೋಬಳಿ ಚಿಕ್ಕಕಬ್ಬಿಗೆರೆ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಆರಾಧನಾ ವಂಶಸ್ಥರು, ಗ್ರಾಮದ ಮುಖಂಡರು ಮತ್ತು ಭಕ್ತರು ಮನವಿ ಮಾಡಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

