CHITRADURGA NEWS | 05 OCTOBER 2026
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಗಣಿ ಲಾರಿಗಳ ವಿರುದ್ಧ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಹೋರಾಟದಲ್ಲಿ ಭಾಗವಹಿಸಿದ್ದ ಎಸ್.ಆರ್.ಹಿರೇಮಠ್ ನನ್ನ ಜೀವ ಇರುವವರೆಗೂ ನೆಲ, ಜಲ ಹಾಗೂ ರೈತರ ಪರವಾಗಿ ಹೋರಾಟ ನಡೆಸುತ್ತೇನೆ ಎಂದರು.
ಇದನ್ನೂ ಓದಿ: ಕೆರೆ ಒತ್ತುವರಿ ತೆರವು, ರಾಗಿ ಹಣ ಬಿಡುಗಡೆಗೆ ಆಗ್ರಹ | ಮಾವಿನಕಟ್ಟೆ ಗೇಟ್ ಬಳಿ ರೈತರ ರಸ್ತೆ ತಡೆ
ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ 60 ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಭಾಗವಹಿಸಿದ್ದ ಎಸ್ಆರ್ ಹಿರೇಮಠ್, ನನಗೆ ಈಗ 80 ವರ್ಷ. ಆದರೂ, ಕೂಡ ಸಾರ್ವಜನಿಕರು ಸಂಘಟನೆಗಳು ಪ್ರೀತಿಯಿಂದ ನಾನು ಆಹ್ವಾನದ ಮೇರೆಗೆ ಅವರ ಸಮಸ್ಯೆಗಳನ್ನು ಆಲಿಸಲು ಅವರ ಬಳಿ ಹೋಗುತ್ತೇನೆ ಜೀವನದಲ್ಲಿ ಹಣಕ್ಕಿಂತ ಹೃದಯವಂತಿಗೆ ಶ್ರೀಮಂತಿಕೆ ಬಹಳ ಮುಖ್ಯವಾಗುತ್ತದೆ.
ನಾವು ಹಣ ಗಳಿಸಬಾರದು ನಾವು ಹೋದ ಮೇಲು ಹೆಸರಿರಬೇಕು ರೈತ ಸಂಘಟನೆಗೆ ಹೆಣ್ಣು ಮಕ್ಕಳು ಈ ರೀತಿ ಬಂದಿರುವುದು ಬಹಳ ಸಂತೋಷಕರ. ಮುಂದಿನ ದಿನಗಳಲ್ಲಿ ಎರಡು ದಿನಗಳ ಕಾಲ ಶಿಬಿರವನ್ನು ಮಾಡುತ್ತೇವೆ ಇದೇ ರೀತಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ಮಾತನಾಡಿ, ಮೂಗು ಮುಚ್ಚಿಕೊಂಡರೆ ಬಾಯಿ ತೆಗೆಯುವ ಪರಿಸ್ಥಿತಿ ಈ ಗ್ರಾಮದಲ್ಲಿ ಉಂಟಾಗಿದೆ. ಅನಾದಿ ಕಾಲದಿಂದಲೂ ಸಂಪನ್ಮೂಲಗಳನ್ನು ಕಟ್ಟಿಕೊಳ್ಳಲು ಕಲ್ಲು ಗಣಿಗಾರಿಕೆ ಇತರೆ ಗಣಿಗಾರಿಕೆ ಮಾಡುತ್ತಿದ್ದರು. ಈಗ ಶ್ರೀಮಂತಿಕೆಯ ವ್ಯಾಪಾರವಾಗಿದೆ. ನಮ್ಮ ಹಿರಿಯರು ಸಂವಿಧಾನವನ್ನು ರಚನೆ ಮಾಡಿ ನಮ್ಮನ್ನು ಉಳಿಸುವಂತ ಕೆಲಸ ಮಾಡಿದ್ದಾರೆ. ಆದರೆ, ಇಂದಿನ ಗಣಿಗಾರಿಕೆ ಸಂವಿಧಾನವನ್ನೇ ಬುಡಮೇಲು ಮಾಡಿದ ದಿಕ್ಕಿನಲ್ಲಿ ಸಾಗುತ್ತಿವೆ ಎಂದರು.
ಇದನ್ನೂ ಓದಿ: ಮಲ್ಟಿಫ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ಹವಾ | ನಟ ಶಿವರಾಜ್‌ಕುಮಾರ್
16 ಕಿ.ಮೀ ದೂಳು, ಎಲೆಗಳ ಮೇಲೆ ಕೂತು ಪ್ರಾಣಿ ಪಕ್ಷಿಗಳು ಬದುಕದ ಹಾಗೂ ಜೇನು ಹುಳಗಳ ಪರಾಗ ಸ್ಪರ್ಶ ಆಗದೆ ರೈತರ ಬೆಳೆ ಆಗುತ್ತದೆ. ಜನರು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಲಕ್ಷಾಂತರ ಕೋಟಿ ಆದಾಯ ತರುವಂತಹ ಈ ಗಣಿಗಾರಿಕೆ ಕೆಲವೇ ಕೆಲವು ಸಾವಿರ ಜನರ ಶ್ರೀಮಂತಿಕೆ ಆಗಿದೆ. ಆದರೆ, ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಆಗುತ್ತಿಲ್ಲ. ರೈತರು ಇಂಥ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ತಿಳಿಸಿದರು.
ಎಐಟಿಯುಸಿ ಮುಖಂಡ ಸೋಮಶೇಖರ್ ಮಾತನಾಡಿ, ಅಕ್ರಮ ಗಣಿಗಾರಿಕೆಯಲ್ಲಿ ಯಾರು ತಪ್ಪು ಮಾಡಿದ್ದರು ಅವರನ್ನು ಜೈಲಿಗೆ ಕಳಿಸುವಲ್ಲಿ
ಎಸ್.ಆರ್.ಹಿರೇಮಠ್ ಯಶಸ್ವಿಯಾಗಿದ್ದಾರೆ. ಗಣಿಗಾರಿಕೆ ಇರುವುದು ಲಾಭ ಮಾಡುವುದಕ್ಕೆ ಅಷ್ಟೇ, ಇಡೀ ದೇಶದ ಸಂಪತ್ತು ಸೃಷ್ಟಿ ಮಾಡುವುದು ರೈತರು ಹಾಗೂ ಕಾರ್ಮಿಕರು. ಆದರೆ, ಅದನ್ನು ಕೊಳ್ಳೆ ಹೊಡೆಯುತ್ತಿರುವುದು ಅದಾನಿ, ಅಂಬಾನಿ, ಟಾಟಾ, ಬಿರ್ಲಾ, ಜಿಂದಾಲ್‌ನಂತಹ ಕಂಪನಿಗಳು ಕೋಟಿಗಟ್ಟಲೆ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಪಾರವಾದ ಹಣ ಇದೆ 30,000 ಕೋಟಿ ಹಣ ಇದ್ದರೂ ಸಾರ್ವಜನಿಕರಿಗೆ ಬಳಸುವುದಿಲ್ಲ. ಆದರೆ, ಕಟ್ಟಡಗಳನ್ನು ನಿರ್ಮಾಣ ಮಾಡಿ ಕಮಿಷನ್ ತೆಗೆದುಕೊಳ್ಳೋಕೆ ನೋಡುತ್ತಾರೆ. ನಿಜವಾಗಲೂ ಜನರಿಗೆ ಹಾಗೂ ಗಣಿಬಾದಿತ ಜನರಿಗೆ ಸೌಲಭ್ಯ ಮಾಡುವ ಮನಸ್ಥಿತಿ ಯಾವ ರಾಜಕಾರಣಿಗಳಿಗೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 05 | ಶೇಂಗಾ, ರಾಗಿ, ಮೆಕ್ಕೆಜೋಳ ರೇಟ್….
ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರಾದ ಮಾಧವ ರೆಡ್ಡಿ ಮಾತನಾಡಿ, ರೈತರು ಹೋರಾಟದಿಂದ ದೇಶದಲ್ಲಿ ಎಲ್ಲೂ ಸೋತಿಲ್ಲ. ನಾವು ಹೋರಾಟ ಮಾಡುತ್ತಿರುವುದು ನಮ್ಮ ನೆಲ ಜಲ ಹಾಗೂ ಸಂಪನ್ಮೂಲಕ್ಕಾಗಿ, ಇಲ್ಲಿರುವ ಜನ ಅಡಿಕೆ ತೆಂಗು ಹಾಗೂ ಮತ್ತಿತರ ಬೆಳೆಗಳನ್ನು ಉಳಿಸಿಕೊಳ್ಳಲು ಹಾಗೂ ಆರೋಗ್ಯಕ್ಕಾಗಿ ಈ ಹೋರಾಟ ಮಾಡುತ್ತಿದ್ದಾರೆ. ನಮ್ಮ ದೇಶ ವ್ಯಾಪಾರದ್ದಲ್ಲ ಕೃಷಿಯ ದೇಶ. ಇಲ್ಲಿನ ಶಾಸಕರು ಹಾಗೂ ಉಸ್ತುವರಿ ಸಚಿವರು , ವೇದಿಕೆಗೆ ಬಂದು ಪ್ರಶ್ನೆ ಮಾಡದಿರುವುದು ವಿಷಾಧಕರ ಸಂಗತಿ. ದಲ್ಲಾಳಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕಿದರು ಹೆದರಬೇಡಿ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದರು .
ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ವಕೀಲರಾದ ಅವಿನಾಶ್, ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜನ ಸಂಗ್ರಾಮ ಪರಿಷತ್ತು ರಾಜ್ಯಾಧ್ಯಕ್ಷ ಕೆ.ಎಂ.ಶಿವಕುಮಾರ್, ಮುಖಂಡರಾದ ಸುಜಾತ, ಶಂಕರಮೂರ್ತಿ, ಡಿ.ನಾಗಲಕ್ಷ್ಮಿ, ನಲ್ಲಿಕಟ್ಟೆ, ಭೀಮಸಮುದ್ರ, ಪಾಳ್ಯ, ಕಡ್ಲೆಗುದ್ದು, ಬೊಮ್ಮೇನಹಳ್ಳಿ, ಬೆಟ್ಟದ ನಾಗೇನಹಳ್ಳಿ ಗ್ರಾಮದ ರೈತರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

