CHITRADURGA NEWS | 05 October 2026
ಚಿತ್ರದುರ್ಗ: ಕನ್ನಡ ಸಿನಿಮಾಗಳು ಓಡುತ್ತಿಲ್ಲ ಎನ್ನುವ ಮಾತಿನ ಮಧ್ಯೆಯೂ ಇತ್ತೀಚೆಗೆ ವಿಡಿಯೋ, ಸಿಟಿ ಲೈಟ್ಸ್, ಪ್ರೇಮದ ಊರಲ್ಲಿ ಹಾಗೂ ಬೇಲ್‌ನಂತಹ ಸಿನಿಮಾಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ಹವಾ ಹೆಚ್ಚಾಗಿದೆ ಎಂದು ಖ್ಯಾತ ಚಿತ್ರನಟ ಡಾ.ಶಿವರಾಜ್ ಕುಮಾರ್ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 05 | ಶೇಂಗಾ, ರಾಗಿ, ಮೆಕ್ಕೆಜೋಳ ರೇಟ್….
ಇದನ್ನೂ ಓದಿ: ನವೋದಯ ವಿದ್ಯಾಲಯ ಪ್ರವೇಶ | ಅರ್ಜಿ ಸಲ್ಲಿಕೆ ಅ.15 ರವರೆಗೆ ವಿಸ್ತರಣೆ
ನಿಜವಾದ ಸಿನಿಮಾ ಪ್ರೇಮಿಗಳು ಎಂದಿಗೂ ಪೈರಸಿ ನೋಡುವುದಿಲ್ಲ, ಅವರು ಚಿತ್ರಮಂದಿರಗಳಿಗೇ ಬಂದು ಸಿನಿಮಾ ವೀಕ್ಷಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೇಲ್-2 ಚಿತ್ರದ ಮುಂದಿನ ಭಾಗದ ಕಥೆಯ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಪವನ್ ಒಡೆಯರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಅಹೋಬಲ ಟಿವಿಎಸ್ ಶೋ ರೂಂ ಮಾಲೀಕ ಪಿ.ವಿ.ಅರುಣ್‌ಕುಮಾರ್, ಟಿ.ದರ್ಶನ್ ಹಾಗೂ ಚಿತ್ರ ತಂಡದ ಇತರೆ ಸದಸ್ಯರು, ಗಣ್ಯರು, ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹೋಟೆಲ್‌ಗಳಲ್ಲಿ ನೈರ್ಮಲ್ಯ ಪರಿಶೀಲನೆ | ಅಧಿಕಾರಿಗಳ ದಿಢೀರ್ ದಾಳಿ
ಇದಕ್ಕೂ ಮೊದಲು ಬೇಲ್ ಚಿತ್ರ ಪ್ರದರ್ಶನಗೊಳ್ಳುತ್ತಿರುವ ನಗರದ ಬಸವೇಶ್ವರ ಚಿತ್ರಮಂದಿರಕ್ಕೆ ಭೇಟಿ ನೀಡಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

