CHITRADURGA NEWS | 04 JULY 2026
ಚಿತ್ರದುರ್ಗ: ರಾಜ್ಯ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರು ಇದೇ ಜುಲೈ 5ರಂದು ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 04 | ಹತ್ತಿ ರೇಟ್ ಎಷ್ಟಿದೆ?
ಸಚಿವರ ಪರಿಷ್ಕøತ ಪ್ರವಾಸ ಕಾರ್ಯಕ್ರಮದನ್ವಯ ಜುಲೈ 05ರಂದು ಬೆಳಿಗ್ಗೆ 7ಕ್ಕೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ 12ಕ್ಕೆ ತರೀಕೆರೆ ಮಾರ್ಗ ಮಧ್ಯೆದಲ್ಲಿ ಭದ್ರಾ ಜಲಾಶಯ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಇನ್‍ಟೇಕ್ ಕಾಮಗಾರಿ ಪರಿವೀಕ್ಷಣೆ ಮಾಡುವರು.
ಮಧ್ಯಾಹ್ನ 1ಕ್ಕೆ ಭದ್ರಾ ಜಲಾಯಶದಿಂದ ಹೊರಟು, ಮಧ್ಯಾಹ್ನ 1.30ಕ್ಕೆ ತರೀಕೆರೆ-ಕಡೂರು ಕೆರೆ ತುಂಬಿಸುವ ಯೋಜನೆಯ ಪಂಪ್ ಹೌಸ್-2 ಕಾಮಗಾರಿ ಪರಿವೀಕ್ಷಣೆ ಮಾಡುವರು.
ಮಧ್ಯಾಹ್ನ 2ಕ್ಕೆ ಕಡೂರು ಪಂಪ್‍ಹೌಸ್‍ನಿಂದ ಹೊರಟು ಮಧ್ಯಾಹ್ನ 2.30ಕ್ಕೆ ಅಜ್ಜಂಪುರಕ್ಕೆ ಆಗಮಿಸಿ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯಕಾಲುವೆ ವೈ-ಜಂಕ್ಷನ್ ಮತ್ತು ಚಿತ್ರದುರ್ಗ ಶಾಖಾ ಕಾಲುವೆ ಪ್ಯಾಕೇಜ್-4ರ ಬಾಟಲ್‍ನೆಕ್ಸ್ ಕಾಮಗಾರಿ ಪರಿವೀಕ್ಷಣೆ ಮಾಡುವರು.
ಇದನ್ನೂ ಓದಿ: ಶಾಲಾ ಸಂಸತ್ ಚುನಾವಣೆ | ಉತ್ಸಾಹದಿಂದ ಮತ ಚಲಾಯಿಸಿದ ಮಕ್ಕಳು
ಮಧ್ಯಾಹ್ನ 3.30ಕ್ಕೆ ಚಿತ್ರದುರ್ಗ ಶಾಖಾ ಕಾಲುವೆ ಹೊಸದುರ್ಗ ಮಾರ್ಗ ಗೋನೂರು ಅಕ್ವೆಡಕ್ಟ್‍ನಿಂದ ನಿರ್ಗಮಿಸಿ, ಸಂಜೆ 4.30ಕ್ಕೆ ಗೋನೂರು ಅಕ್ವೆಡಕ್ಟ್‍ಗೆ ಆಗಮಿಸಿ, ಚಿತ್ರದುರ್ಗ ಶಾಖಾ ಕಾಲುವೆಯ ಪ್ಯಾಕೇಜ್-11ರ ಕಾಮಗಾರಿ ವೀಕ್ಷಣೆ ಮಾಡುವರು.
ಸಂಜೆ 5.30ಕ್ಕೆ ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನೆ ವಲಯ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
