
CHITRADURGA NEWS | 16 MAY 2026
ಚಿತ್ರದುರ್ಗ: ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಸಾರ್ವಜನಿಕರು ತಕ್ಷಣವೇ ದೂರು ನೀಡಲು ಅನುಕೂಲವಾಗುವಂತೆ ಬೆಸ್ಕಾಂ ಅಧಿಕಾರಿಗಳ ಮತ್ತು ಸೇವಾ ಕೇಂದ್ರಗಳ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ. 15 | ಮೆಕ್ಕೆಜೋಳ, ರಾಗಿ ರೇಟ್..
ಇಡೀ ನಗರ ವ್ಯಾಪ್ತಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಮ್ಮಣ್ಣ ಹೆಚ್ ಮೊಬೈಲ್ 9448279037 ಇವರನ್ನು ಸಂಪರ್ಕಿಸಬೇಕು. ಕೆಳಗೋಟೆ, ಮುನ್ಸಿಪಲ್ ಕಾಲೋನಿ, ಸಿ.ಕೆ ಪುರ, ಚನ್ನಕೇಶವ ಬಡಾವಣೆ, ಜೆ.ಸಿ.ಆರ್ ಬಡಾವಣೆ, ವಿ.ಪಿ ಬಡಾವಣೆ, ಗಾಂಧಿನಗರ, ಐ.ಯು.ಡಿ.ಪಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಸಹಾಯಕ ಇಂಜಿನಿಯರ್ ವಿನಯ್.ಟಿ ಮೊಬೈಲ್ ಸಂಖ್ಯೆ 9449876179 ಅಥವಾ ಸೇವಾ ಕೇಂದ್ರ 9449876163 ಸಂಖ್ಯೆಗೆ ಕರೆ ಮಾಡಬಹುದು.
ವಿದ್ಯಾನಗರ, ಎಸ್.ಆರ್ ಲೇಔಟ್, ತರಳಬಾಳು ಬಡಾವಣೆ, ಈಶ್ವರ ಬಡಾವಣೆ, ಜೆ.ಎಂ.ಐ.ಟಿ ಕಾಲೇಜು, ಹೊಳಲ್ಕೆರೆ ರಸ್ತೆ, ಜಯನಗರ, ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜನರು ಸಹಾಯಕ ಇಂಜಿನಿಯರ್ ಜಯಣ್ಣ ಕೆ.ಸಿ ಮೊಬೈಲ್ ಸಂಖ್ಯೆ 9449876202, ಸೇವಾ ಕೇಂದ್ರ ಸಂಖ್ಯೆ 9449876180 ದೂರು ನೀಡಬಹುದು.
ಮದಕರಿಪುರ, ದಂಡಿನಕುರುಬರಹಟ್ಟಿ, ಲಿಂಗಾವರಹಟ್ಟಿ, ಹೊಸಸಿದ್ಧಾಪುರ, ಕೆಳಗಳಹಟ್ಟಿ, ಪಿ.ಸಿ ಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಸಹಾಯಕ ಇಂಜಿನಿಯರ್ ವೆಂಕಟೇಶ್.ಈ ಮೊಬೈಲ್ ಸಂಖ್ಯೆ 9449876221 ಸಂಪರ್ಕಿಸಬಹುದು.
ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಡಿಕೆಶಿ ಬರ್ತ್ ಡೇ | ಕೇಕ್ ಕತ್ತರಿಸಿ ಸಂಭ್ರಮಿಸಿದ ಪಪ್ಪಿ
ಬಸವೇಶ್ವರ ನಗರ, ಏಳುಕೋಟಿ ಬಡಾವಣೆ, ಈರುಳ್ಳಿ ಮಲ್ಲಪ್ಪ ಲೇಔಟ್, ವಸುಂಧರ ಬಡಾವಣೆ, ಪ್ರಗತಿ ಮಾರ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜನರು ಸಹಾಯಕ ಇಂಜಿನಿಯರ್ ಸುನಿಲ್ ಕುಮಾರ್ ಕೆ.ಬಿ. ಮೊಬೈಲ್ ಸಂಖ್ಯೆ 9449876237 ದೂರು ನೀಡಬಹುದು.
ದೂರುಗಳ ವಿಲೇವಾರಿಯಲ್ಲಿ ವಿಳಂಬವಾದಲ್ಲಿ ಅಥವಾ ಯಾವುದೇ ಗಂಭೀರ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜ್ ಎಮ್.ಹೆಚ್ ಮೊಬೈಲ್ 9448279014 ಕ್ಕೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

