
CHITRADURGA NEWS | 10 JANUARY 2026
ಚಿತ್ರದುರ್ಗ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ರಿಂದ ಕಲಬುರಗಿ-ಚಿತ್ರದುರ್ಗ ಹಾಗೂ ಕಲಬುರಗಿ-ಮೈಸೂರು ಎ/ಸಿ ಸ್ಲೀಪರ್ ಬಸ್‍ಗಳ(ಅಮೋಘವರ್ಷ) ಕಾರ್ಯಾಚರಣೆ ಆರಂಭಿಸಲಾಗಿದೆ.
ಇದನ್ನೂ ಓದಿ: ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ದಾದಾಪೀರ್ ಆಯ್ಕೆ

ಕಲಬುರಗಿ-ಚಿತ್ರದುರ್ಗ ಬಸ್ ಪ್ರತಿದಿನ ರಾತ್ರಿ 10:45ಕ್ಕೆ ಕಲಬುರಗಿಯಿಂದ ಹೊರಟು ಜೇವರ್ಗಿ,ಶಹಾಪೂರ, ಲಿಂಗಸೂರು, ಸಿಂಧನೂರು,ಗಂಗಾವತಿ,ಹೊಸಪೇಟೆ ಮಾರ್ಗವಾಗಿ ಮುಂಜಾನೆ 8 ಗಂಟೆಗೆ ಚಿತ್ರದುರ್ಗ ತಲುಪಲಿದೆ. ಮರಳಿ ಚಿತ್ರದುರ್ಗದಿಂದ ರಾತ್ರಿ 7:30 ಹೊರಟು ಮುಂಜಾನೆ 5:20ಕ್ಕೆ ಕಲಬುರಗಿ ತಲುಪಲಿದೆ.
ಕಲಬುರಗಿ-ಮೈಸೂರು ಬಸ್ ಪ್ರತಿದಿನ ಸಂಜೆ 5 ಗಂಟೆಗೆ ಕಲಬುರಗಿಯಿಂದ ಹೊರಟು ಜೇವರ್ಗಿ,ಶಹಾಪೂರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು, ನಾಗಮಂಗಲ ಹಾಗೂ ಪಾಂಡವಪುರ ಮಾರ್ಗವಾಗಿ ಮುಂಜಾನೆ 7 ಗಂಟೆಗೆ ಮೈಸೂರು ತಲುಪಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 9 ಜನವರಿ | ಯಾವ ಅಡಿಕೆಗೆ ಎಷ್ಟು ರೇಟ್
ಮರಳಿ ದಮೈಸೂರಿನಿಂದ ಸಂಜೆ 5:30 ಹೊರಟು ಮುಂಜಾನೆ 7:30ಕ್ಕೆ ಕಲಬುರಗಿ ತಲುಪಲಿದೆ.
ಸಾರ್ವಜನಿಕರು ಸದರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
