CHITRADURGA NEWS | 06 JANUARY 2026
ಚಳ್ಳಕೆರೆ: ಮನೆಗಳ್ಳತನ ಮಾಡಿಕೊಂಡು ಹೋಗಿದ್ದ ಖತರ್ನಾಕ್ ಖದೀಮನನ್ನು ಚಳ್ಳಕೆರೆ ಪೊಲೀಸರು ಎಡೆಮುರಿಕಟ್ಟಿದ್ದು, ಬಂಧತನಿಂದ ನಗದು ಹಾಗು ಆಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
2025 ನವೆಂಬರ್ 19 ರಂದು ಚಳ್ಳಕೆರೆ ಟೌನ್ ವಿಠಲ ನಗರದ ಕುಬೇರ ಗ್ಯಾಸ್ ಏಜೆನ್ಸಿ ಎದುರು ಮಲಿಕಾರ್ಜುನ ಎಂಬುವವರ ಮನೆಯಲ್ಲಿ 112.300 ಗ್ರಾಂ ತೂಕದ ಬಂಗಾರದ ಒಡವೆಗಳು, 921.910 ಗ್ರಾಂ ತೂಕದ ಬೆಳ್ಳಿಯ ಒಡವೆಗಳು ಮತ್ತು 24 ಲಕ್ಷ ರೂ ನಗದು ಹಣ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: ಅಮ್ಮ ದುಡ್ಡು ಕೊಡಲಿಲ್ಲ ಅಂತಾ ಬೆಂಕಿ ಹಚ್ಚಿಕೊಂಡ ಮಗ
ಸದರಿ ಪ್ರಕರಣದಲ್ಲಿ ಬೆಂಗಳೂರಿನ ನಾಗಾವಾರ ಸಾರಾಯಿ ಪಾಳ್ಯದ ಆರೋಪಿ 47 ವರ್ಷದ ಮೊಹಮದ್ ಖಾನ್ @ ಪಠಾಣ್ ಮೆಹಬೂಬ್ ಖಾನ್ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ.
ಬಂಧಿತನಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 04 ಲಕ್ಷ 60 ಸಾವಿರ ನಗದು ಹಣ, 103 ಗ್ರಾಂ ಬಂಗಾರದ ಆಭರಣಗಳು, 199 ಗ್ರಾಂ ಬೆಳ್ಳಿ ಗಟ್ಟಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪರಪ್ಪನ ಅಗ್ರಹಾರ ಬಂದೀಖಾನೆಗೆ ಬಿಡಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ – ಮೈಸೂರು ರೈಲ್ವೇ ಮಾರ್ಗಕ್ಕೆ ಬೇಡಿಕೆ | ಸಾರಿಗೆ ಸಂಪರ್ಕಕ್ಕೆ ಕೋಟೆನಾಡು ಕೇಂದ್ರಬಿಂದು
ಸದರಿ ಆರೋಪಿಯನ್ನು ಡಿಸೆಂಬರ್ 31 ರಂದು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಈತನ ಕಡೆಯಿಂದ ಮೊ ನಂ 510/2025 ಕಲಂ: ಕಲಂ: 331(3), 305 ಬಿ.ಎನ್.ಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 01 ಲಕ್ಷ 74 ಸಾವಿರ ನಗದು ಹಣ ಮತ್ತು 01 ಲಕ್ಷ 18 ಸಾವಿರ ಮೌಲ್ಯದ 493 ಗ್ರಾಂ ಬೆಳ್ಳಿಯ ಗಟ್ಟಿ ಒಟ್ಟು 02 ಲಕ್ಷ 92 ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸ್ ಸಿಪಿಐ ಕುಮಾರ್ ಕೆ, ಪಿಎಸ್ಐಗಳಾದ ಈರೇಶ್, ಶಿವರಾಜ್.ಜೆ ಹಾಗೂ ರವಿಕುಮಾರ್.ಬಿ.ವಿ, ಹಾಗೂ ಸಿಬ್ಬಂದಿಗಳಾದ ವಸಂತಕುಮಾರ್, ಶಿವಕುಮಾರ್, ವೆಂಕಟೇಶ್, ಶ್ರೀನಿವಾಸ, ರಂಗನಾಥ, ಪರಶುರಾಮ, ಶ್ರೀಧರ ವಸಂತ ಧರೆಣ್ಯವರ್, ರಮೇಶ್ ಬಾರ್ಕಿ, ಮಂಜುನಾಥ ಎನ್, ಕುಮಾರ, ಸುನಿಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

