CHITRADURGA NEWS | 18 OCTOBER 2025
ಹೊಳಲ್ಕೆರೆ: ನೀವುಗಳು ಯಾವ ಜಾಗದಲ್ಲಿ ಹೇಳುತ್ತೀರೋ ಅಲ್ಲಿ ಗುರುಸಿದ್ದರಾಮೇಶ್ವರರ ಜಯಂತಿ ಅದ್ದೂರಿಯಾಗಿ ಆಚರಿಸೋಣ. ಅದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಬದ್ದನಾಗಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ರಾಜ್ಯದ ತಲಾ ಆದಾಯ ಹೆಚ್ಚಳ | ದಿನೇಶ್ ಗೂಳಿಗೌಡ
ಜ.14 ಮತ್ತು 15 ರಂದು ಹೊಳಲ್ಕೆರೆಯಲ್ಲಿ ನಡೆಯಲಿರುವ ಗುರುಸಿದ್ದರಾಮೇಶ್ವರರ 853 ನೇ ಜಯಂತಿ ಪ್ರಯುಕ್ತ ಸಂವಿಧಾನಸೌಧದಲ್ಲಿ ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗುರುಸಿದ್ದರಾಮೇಶ್ವರರು ಕೇವಲು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ಎಲ್ಲಾ ಜಾತಿಯವರು ಭಕ್ತಿಯಿಂದ ಪೂಜಿಸುತ್ತಾರೆ. 2008 ಎಲ್ಲಿ ಹೊಳಲ್ಕೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಂಡು ಮೆರಗು ಕೊಟ್ಟಿದ್ದರು.
ಅದೇ ರೀತಿ ಗುರುಸಿದ್ದರಾಮೇಶ್ವರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ. ನೀವುಗಳು ನನಗೆ ಸೂಚಿಸುವುದನ್ನು ಚಾಚು ತಪ್ಪದೆ ಪಾಲಿಸುತ್ತೇನೆ. ಜಯಂತಿಗೆ ಯಾವ ಕೊರತೆಯೂ ಆಗದಂತೆ ಆಚರಿಸೋಣ. ಅದಕ್ಕಾಗಿ ನಿಮ್ಮ ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಸಹಾಯ ಮಾಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಜನತೆಯಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ | ಚಿತ್ರದುರ್ಗ ಜಿಲ್ಲೆಗೆ 4ನೇ ಸ್ಥಾನ | ಜಿಲ್ಲಾಧಿಕಾರಿ ಅಭಿನಂದನೆ
ಬೆಟ್ಟದಹಳ್ಳಿ ಚಂದ್ರಶೇಖರ ಮಹಾಸ್ವಾಮೀಜಿ, ಪುಷ್ಪಗಿರಿಯ ಸೋಮಶೇಖರ ಮಹಾಸ್ವಾಮೀಜಿ, ಯಳನಾಡು ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರದ ಮಹಾಸ್ವಾಮೀಜಿ, ಮಾಜಿ ಶಾಸಕ ನಾಗರಾಜ್, ಬಿಜೆಪಿ.ಮುಖಂಡರಾದ ಲಿಂಗಮೂರ್ತಿ, ಪ್ರಭಾಕರ್ಮಾಳ್ಗಿ, ಶಿವಣ್ಣ, ಶಿವರುದ್ರಪ್ಪ, ಚಂದ್ರಶೇಖರಸ್ವಾಮಿ, ಬಿ.ಜೆ.ಚಂದ್ರಶೇಖರ್, ಶಶಿಧರ್, ಎಸ್.ಎಂ.ನಾಗರಾಜ್, ಸಿದ್ದರಾಮಪ್ಪ, ಲೋಕೇಶ್ವರ್, ಮರಿತಿಮ್ಮಪ್ಪ, ನಾಗಭೂಷಣ್, ಅಜ್ಜಪ್ಪ, ಆನಂದಪ್ಪ, ಡಾ.ಕೆ.ಪಿ.ಈಶ್ವರಪ್ಪ, ಶಿವಣ್ಣ, ಶಾಂತರಾಜ್ಪಾಟೀಲ್, ಬಸವರಾಜಪ್ಪ, ನಾಗರಾಜ್, ಮಲ್ಲಿಕಾರ್ಜುನ್, ಮಹೇಶಣ್ಣ, ಹನುಮಂತಣ್ಣ, ಲೋಕಣ್ಣ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

