
CHITRADURGA NEWS | 20 JUNE 2024
ಚಿತ್ರದುರ್ಗ: ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡಲು ಸರ್ಕಾರ ಇಂಗ್ಷೀಷ್ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹಿರಿಯೂರು ತಾಲ್ಲೂಕಿನಲ್ಲಿ ಈ ವರ್ಷ 10 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಈ ಕುರಿತು ಶಾಲಾ ಮುಖ್ಯಸ್ಥರ ಸಭೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ‘ಹಿರಿಯೂರು ತಾಲ್ಲೂಕಿನಲ್ಲಿ ಈಗಾಗಲೇ 12 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳು ನಡೆಯುತ್ತಿವೆ. ಈ ವರ್ಷದಿಂದ ಮತ್ತೆ ಹೆಚ್ಚುವರಿಯಾಗಿ 10 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಲು ಇಲಾಖೆ ಅನುಮತಿ ನೀಡಿದೆ. ಇಂಗ್ಲಿಷ್ ಮಾಧ್ಯಮ ಆರಂಭವಾಗಿರುವ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು’ ಎಂದು ಸೂಚಿಸಿದರು.
ಕ್ಲಿಕ್ ಮಾಡಿ ಓದಿ: ಮುಚ್ಚುವ ಹಂತದ ಸರ್ಕಾರಿ ಶಾಲೆ ಉಳಿಸಿದ್ದೇನೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಕಳೆದ ವರ್ಷ ಮರಡಿಹಳ್ಳಿ, ಹೊಸ ಯಳನಾಡು, ಯರಬಳ್ಳಿ, ಹಿರಿಯೂರು ನಗರದ ಬಸ್ ನಿಲ್ದಾಣ ಶಾಲೆ, ನೆಹರು ಮೈದಾನ ಮತ್ತು ಆಜಾದ್ ನಗರ, ಹರಿಯಬ್ಬೆ, ಆದಿವಾಲ, ಮಸ್ಕಲ್, ಮ್ಯಾಕ್ಲೂರಹಳ್ಳಿ, ಧರ್ಮಪುರ, ರಂಗೇನಹಳ್ಳಿಗಳಿಗೆ ಇಂಗ್ಲಿಷ್ ಮಾಧ್ಯಮ ಮಂಜೂರಾಗಿತ್ತು.
ಈ ಬಾರಿ ಜವನಗೊಂಡನಹಳ್ಳಿ, ಸೂರಪ್ಪನಹಟ್ಟಿ, ಬಡ ಗೊಲ್ಲರಹಟ್ಟಿ, ವೇಣುಕಲ್ಲುಗುಡ್ಡ, ಕೋಡಿಹಳ್ಳಿ, ಭರಂಪುರ, ಹಿರಿಯೂರು ಪಟ್ಟಣದ ಗೋಪಾಲಪುರ ಬಡಾವಣೆಯ ಶಾಲೆ, ಸೊಂಡೆಕೆರೆ ಮತ್ತು ಹೂವಿನ ಹೊಳೆ ಗ್ರಾಮಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ದೊರೆತಿದೆ.
ಕ್ಲಿಕ್ ಮಾಡಿ ಓದಿ: ಸೋರುತ್ತಿದೆ ನನ್ನಿವಾಳ ಕೆರೆ | ಏರಿ ಆವರಿಸಿದ ಸೀಮೆಜಾಲಿ
ಈ ಶಾಲೆಗಳಲ್ಲಿ ತಕ್ಷಣದಿಂದ ಒಂದನೇ ತರಗತಿಯಲ್ಲಿ ಮಾತ್ರ ಈ ವರ್ಷಕ್ಕೆ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಬೇಕು. ಈ ಸಂಬಂಧ ಇಲಾಖೆ ಸೂಚನೆಯಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
10 ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

