ಚಿತ್ರದುರ್ಗ ನ್ಯೂಸ್.ಕಾಂ: ನಗರದ ಹಳೇ ಬೆಂಗಳೂರು ರಸ್ತೆ ಅಥವಾ ಜೈಲು ರಸ್ತೆಯಲ್ಲಿರುವ ಐದು ಜನರ ಸಾವಿನ ಮನೆಯ ಬಾಗಿಲನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ತೆರೆದೇ ಇಲ್ಲ ಎನ್ನುವುದಕ್ಕೆ ಇಲ್ಲಿ ಮತ್ತೊಂದು ನಿದರ್ಶನವಿದೆ.
ಈ ಮನೆಯ ಎಡಭಾಗದಲ್ಲಿ ಮುಖ್ಯ ದ್ವಾರಕ್ಕೆ ಹೊಂದಿಕೊಂಡಂತೆ ವ್ಯವಸ್ಥಿತವಾದ ಕಾರ್ ಶೆಡ್ ಇದೆ. ಶೆಡ್ಡಿನ ಒಳಗೆ ಕಾರೂ ಇದೆ. ಈ ಗೇಟಿಗೆ ಎರೆಡೆರಡು ಬೀಗ ಹಾಕಿದ್ದಾರೆ.
ವಿಚಿತ್ರ ಅಂದರೆ, ಈಗ ಕಾರನ್ನು ಹೊರ ತೆಗೆಯುವುದು ಅಷ್ಟು ಸಲಭದ ಮಾತಾಗಿಲ್ಲ. ಕಾರಣ ಹಾಕಿರುವ ಬೀಗವಲ್ಲ. ಹೊಸದಾಗಿ ನಿರ್ಮಾಣವಾಗಿರುವ ರಸ್ತೆ.
ಸುಮಾರು ಎರಡು ವರ್ಷಗಳ ಹಿಂದೆಯೇ ಚಳ್ಳಕೆರೆ ಗೇಟ್ನಿಂದ ಜೈಲು ಕಡೆಗೆ ಸಿ.ಸಿ. ರಸ್ತೆ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಜೈಲು ರಸ್ತೆಯ ಮನೆಯಲ್ಲಿ 5 ಜನರ ಮೃತದೇಹಗಳಿರುವ ಶಂಕೆ | ತಡರಾತ್ರಿವರೆಗೆ ಪರಿಶೀಲನೆ ನಡೆಸಿದ ಪೊಲೀಸರು
ಮೊದಲು ರಸ್ತೆಯ ಸಮನಾಂತರವಾಗಿದ್ದ ಮನೆ ಈಗ ರಸ್ತೆಯ ಕಾರಣಕ್ಕೆ ತಗ್ಗಾಗಿದೆ. ಕಾರು ನಿಲ್ಲಿಸಿದಾಗ ಸರಾಗವಾಗಿ ಅದು ಶೆಡ್ಡಿನೊಳಗೆ ಹೋಗಿದೆ. ಆದರೆ, ಹೊಸ ರಸ್ತೆ ಈಗ ಮನೆ ಇರುವ ಜಾಗಕ್ಕಿಂತ ಸುಮಾರು ಮೂರು ಅಡಿ ಎತ್ತರದಲ್ಲಿದೆ.
ಕಾರಿನ ಶೆಡ್ ಗೇಟ್ ಮುಂದೆಯೇ ಒಂದು ಕಟ್ಟೆಯಂತೆ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ. ಇದರಿಂದ ಕಾರು ಹೊರತರುವುದು ಕಷ್ಟವಾಗಲಿದೆ. ಟೈರ್ ಮುಚ್ಚುವಷ್ಟು ಎತ್ತರದವರೆಗೆ ರಸ್ತೆ ಎತ್ತರವಾಗಿದೆ.
ಅಂದರೆ, ಈ ಮನೆಯಲ್ಲಿ ಯಾರಾದರೂ ಇದ್ದಿದ್ದರೆ ಕನಿಷ್ಟ ರಸ್ತೆ ನಿರ್ಮಾಣ ಆಗುವಾಗ ಕಾರನ್ನಾದರೂ ಹೊರಗೆ ತೆಗೆಯುತ್ತಿದ್ದರು. ಆದರೆ, ಆಗಲೂ ಈ ಮನೆ ಅಥವಾ ಕಾರನ್ನು ಯಾರೂ ಗಮನಿಸಿಲ್ಲ. ಹೊರಗಡೆ ರಸ್ತೆ ನಿರ್ಮಾಣ ಆಗುತ್ತಿರುವುದು ಮನೆಯವರಿಗೆ ತಿಳಿದಿಲ್ಲ. ಅಥವಾ ರಸ್ತೆ ನಿರ್ಮಾಣಕ್ಕಿಂತ ಮೊದಲೇ ಮನೆಯಲ್ಲಿದ್ದವರು ಮೃತಪಟ್ಟಿರಬಹುದು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

