ಕ್ರೈಂ ಸುದ್ದಿ
34 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳ ಬಂಧನ | ಸೈಬರ್ ಪೊಲೀಸ್ ಕಾರ್ಯಚರಣೆ
CHITRADURGA NEWS | 17 FEBRUARY 2025
ಚಿತ್ರದುರ್ಗ: ಶೇರು ಮಾರುಕಟ್ಟೆಯಲ್ಲಿ9(Share markate) ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ 34 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ ಮೂವರು ಆರೋಪಿಗಳನ್ನು ಸೈಬರ್ ಠಾಣೆ ಪೊಲೀಸರು(cyber police) ಬಂಧಿಸಿದ್ದಾರೆ.
2024 ಅಕ್ಟೋಬರ್‍ನಿಂದ ನವೆಂಬರ್ 14ರ ವೇಳೆ ಗೋಲ್ಡ್ ಸ್ಟಾಕ್ ಇನ್ವೆಸ್ಟರ್ಸ್ ಎಂಬ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಚಿತ್ರದುರ್ಗ ನಗರದ ಸೈಯದ್ ಸಿರಾಜ್ ಬಂಡಿ ಎಂಬ ವ್ಯಕ್ತಿಯ ಬ್ಯಾಂಕ್ ಖಾತೆಗಳಿಂದ ಒಟ್ಟು 34 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಚಳ್ಳಕೆರೆ – ಚಿತ್ರದುರ್ಗ, ಹಿರಿಯೂರು – ಹೊಸದುರ್ಗ ರಸ್ತೆ ಅಭಿವೃದ್ಧಿಗೆ ಅನುದಾನ | ಸಂಸದ ಗೋವಿಂದ ಕಾರಜೋಳ
ಹೂಡಿಕೆ ಮಾಡಿಸಿಕೊಂಡಿದ್ದ ವಾಟ್ಸಪ್ ಗ್ರೂಪ್ (whatsaap group) ಹೆಸರು, ಮೊಬೈಲ್ ನಂಬರ್ ಹಾಗೂ ಮೂರು ಜನರ ಅಪರಿಚಿತರ ಜಾಡು ಹಿಡಿದು ಸಿಇಎನ್ ಠಾಣೆ ಡಿವೈಎಸ್‍ಪಿ ಈಶ್ವರ ನಾಯ್ಕ್, ಸಿಪಿಐ ಎನ್.ವೆಂಕಟೇಶ್, ಎಎಸ್‍ಐ ಅಂಜಿನಪ್ಪ, ಸಿಬ್ಬಂದಿಗಳಾದ ಕೆಂಚಪ್ಪ, ಗಂಗಾಧರಪ್ಪ, ಗಗನ್‍ದೀಪ್ ಅವರ ತಂಡ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ಕಾರ್ಯಾಚರಣೆ ನಡೆಸಿದೆ.
ಈ ವೇಳೆ ಉಡುಪಿ ಜಿಲ್ಲೆ ಕಾರ್ಕಳದ ಪೃಥ್ವೀಶ್ ಪೈ, ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಕೆಳಕುಳಿ ಗ್ರಾಮದ ಕೆ.ಎನ್.ನಂದೀಶ್ ಹಾಗೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಉಮರ್ ಫಾರೂಕ್ ಎಂಬ ಮೂರು ಜನ ಆರೋಪಿಗಳನ್ನು ಬಂದಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದ ದಶಕಗಳ ಸಮಸ್ಯೆಗೆ ಕೊನೆಗೂ ಇತಿಶ್ರೀ | ದಾವಣಗೆರೆ ರಸ್ತೆಯ ರೈಲ್ವೇ ಗೇಟ್ ಬಳಿ ಫ್ಲೈಓವರ್ | ಸಂಸದ ಗೋವಿಂದ ಕಾರಜೋಳ
ಬಂಧಿತರಿಂದ 3 ಮೊಬೈಲ್, 4.50 ಲಕ್ಷ ರೂ. ಮೌಲ್ಯದ ಕಾರು ಅಮಾನತು ಮಾಡಿಕೊಂಡು ತನಿಖೆ ಮುಂದುವರೆಸಲಾಗಿದೆ.
ಪ್ರಕರಣ ಬೇಧಿಸಿದ ಸಿಇಎನ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ತಾಂತ್ರಿಕ ವಿಶ್ಲೇಷಣೆ ನಡೆಸಿದ ಸಿಬ್ಬಂದಿಗಳಾದ ಆಶಾ, ಹರ್ಷವರ್ಧನ್ ಹಾಗೂ ಲೋಕೇಶ್ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.