ಮುಖ್ಯ ಸುದ್ದಿ
ಚಳ್ಳಕೆರೆ – ಚಿತ್ರದುರ್ಗ, ಹಿರಿಯೂರು – ಹೊಸದುರ್ಗ ರಸ್ತೆ ಅಭಿವೃದ್ಧಿಗೆ ಅನುದಾನ | ಸಂಸದ ಗೋವಿಂದ ಕಾರಜೋಳ
CHITRADURGA NEWS | 16 FEBRUARY 2025
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗದಿಂದ ಚಳ್ಳಕೆರೆ, ಅಲ್ಲಿಂದ ಪಾವಗಡಕ್ಕೆ ಹೋಗುವ ರಸ್ತೆಗೆ ಸರ್ಕಾರದಲ್ಲಿ ಕುಮಟ ಕಡಮಡಗಿ ರಸ್ತೆ ಎಂದು ಹೆಸರಿದ್ದು, ಇದರ ಅಭಿವೃದ್ಧಿ ಸೇರಿದಂತೆ 6 ತಾಲೂಕುಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ತಲಾ 6 ಕೋಟಿಯಂತೆ ಒಟ್ಟು 48 ಕೋಟಿ ರೂ. ಅನುದಾನ ಕೇಂದ್ರದಿಂದ ಮಂಜೂರಾಗಿದೆ.
ತುರುವನೂರಿನಲ್ಲಿ ವಿಶ್ವದಾಖಲೆಯ ಹನುಮಾನ್ ರೇಖಾಚಿತ್ರ:
ಈ ಸಂಬಂಧ ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 8 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ತಲಾ 6 ಕೋಟಿಯಂತೆ ಒಟ್ಟು 48 ಕೋಟಿ ಅನುದಾನ ಬಿಡಗಡೆಯಾಗಿದೆ.
ಇದನ್ನೂ ಓದಿ: ಚಿತ್ರದುರ್ಗದ ದಶಕಗಳ ಸಮಸ್ಯೆಗೆ ಕೊನೆಗೂ ಇತಿಶ್ರೀ | ದಾವಣಗೆರೆ ರಸ್ತೆಯ ರೈಲ್ವೇ ಗೇಟ್ ಬಳಿ ಫ್ಲೈಓವರ್ | ಸಂಸದ ಗೋವಿಂದ ಕಾರಜೋಳ
ಚಿತ್ರದುರ್ಗ ತಾಲ್ಲೂಕು ಕುಮಟಾ-ಕಡಮಡಗಿ ಹೆದ್ದಾರಿ ಅಭಿವೃದಿಗೆ 6 ಕೋಟಿ, ಚಳ್ಳಕೆರೆ ಕ್ಷೇತ್ರದಲ್ಲಿ ಕುಮಟಾ-ಕಡಮಡಗಿ ಹೆದ್ದಾರಿ ಅಭಿವೃದ್ಧಿಗೆ 6 ಕೋಟಿ, ಹಿರಿಯೂರು ತಾಲ್ಲೂಕು ರಾಜ್ಯ ಹೆದ್ದಾರಿ-24 ತರೀಕೆರೆ-ಹೊಸದುರ್ಗ-ಹಿರಿಯೂರು-ಧರ್ಮಪುರ ರಸ್ತೆ ಅಭಿವೃದ್ಧಿಗೆ 6 ಕೋಟಿ.
ಹೊಳಲ್ಕೆರೆ ತಾಲ್ಲೂಕು ಮಂಡ್ಯ-ಹಡಗಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 6 ಕೋಟಿ, ಹೊಸದುರ್ಗ ತಾಲ್ಲೂಕು ಹೊಸದುರ್ಗ-ವಿವಿಪುರ-ಹಿರಿಯೂರು-ಧರ್ಮಪುರ ಹೆದ್ದಾರಿ ಅಭಿವೃದ್ಧಿಗೆ 6 ಕೋಟಿ, ಹಂಪಿ-ಕಮಲಾಪುರ ರಾಜ್ಯ ಹೆದ್ದಾರಿ ಅಭಿವೃದ್ಧಿ, ಮೊಳಕಲೂರು ತಾಲೂಕು, 6 ಕೋಟಿ.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ 52149 ರೂ.
ಶಿರಾ ತಾಲ್ಲೂಕು ಸಿರಾದಿಂದ ಆಂಧ್ರ ಗಡಿಭಾಗದ ರಸ್ತೆ ಪಟ್ಟನಾಯಕನಹಳ್ಳಿ ಗೇಟ್ ಮಾರ್ಗವಾಗಿ ರಸ್ತೆ ಅಭಿವೃದ್ಧಿ 6 ಕೋಟಿ, ಪಾವಗಡ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ-48 ಕುಮಟಾ-ಕಡಮಡಗಿ ಹೆದ್ದಾರಿಯ ಆಯ್ದ ಭಾಗಗಳಲ್ಲಿ ಹೆದ್ದಾರಿ ಅಭಿವೃದ್ಧಿಗೆ 6 ಕೋಟಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಇತ್ತೀಚೆಗೆ ಚಿತ್ರದುರ್ಗ ಲೊಕಸಭಾಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು, ಮುಂದಿನ ಒಂದು ವಾರದಲ್ಲಿ 562.53 ಕೋಟಿ ಮೊತ್ತಕ್ಕೆ ಕ್ಲಿಯರೆನ್ಸ್ ನೀಡಿ, ಆಡಳಿತಾತ್ಮಕ ಅನುಮೋದನೆ ನೀಡಲಿದ್ದಾರೆ ಎಂದು ಗೋವಿಂದ ಕಾರಜೋಳ ಭರವಸೆ ವ್ಯಕ್ತಪಡಿಸಿದರು.