ಕ್ರೈಂ ಸುದ್ದಿ
ಬೈಕ್ ಲಾರಿ ಡಿಕ್ಕಿ | ಇಬ್ಬರು ಯುವಕರು ಮೃತ
CHITRADURGA NEWS | 07 FEBRUARY 2025
ಚಿತ್ರದುರ್ಗ: ತಾಲೂಕಿನ ಗುಡ್ಡದರಂಗವ್ವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಮೃತರನ್ನು ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕು ಬಸಪ್ಪನಹಟ್ಟಿ ನಿವಾಸಿಗಾಳದ ಮಧುಸೂದನ್(29) ಹಾಗೂ ಶ್ರೀಕಾಂತ್(20) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: SRS ಕಾಲೇಜಿಗೆ ಮತ್ತೊಂದು ಗರಿ | ಬಿಸಿಎ ವಿದ್ಯಾರ್ಥಿನಿಗೆ 5ನೇ ರ್ಯಾಂಕ್
ಕಲ್ಲೆದೇವರಪುರ ಕಡೆಯಿಂದ ಚಿತ್ರದುರ್ಗ ಕಡೆಗೆ ಬರುವಾಗ ಲಾರಿ ಡಿಕ್ಕಿಯಾಗಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.