ಮುಖ್ಯ ಸುದ್ದಿ
ಚಿತ್ರದುರ್ಗಕ್ಕೆ ಎರಡು ದಿನ ಶಾಂತಿಸಾಗರ ನೀರು ಸ್ಥಗಿತ
CHITRADURGA NEWS | 07 FEBRUARY 2025
ಚಿತ್ರದುರ್ಗ: ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಶಾಂತಿಸಾಗರ(ಸೂಳೆಕೆರೆ) ನೀರು ಸರಬರಾಜು ಯೋಜನೆಯ ಶಾಂತಿಸಾಗರ ಜಾಕ್‍ವೆಲ್ ವಿದ್ಯುತ್ ಸ್ಥಾವರದಲ್ಲಿ ಬ್ರೇಕರ್ ಅಳವಡಿಸುವ ಕೆಲಸ ಕೈಗೊಳ್ಳಬೇಕಾಗಿರುವುದರಿಂದ ಶಾಂತಿ ಸಾಗರ ನೀರು ಸರಬರಾಜು ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಇದೇ ಫೆ.09 ಮತ್ತು 10ರಂದು ಸ್ಥಗಿತಗೊಳಿಸಲಾಗುತ್ತಿದೆ.
Also Read: ಶ್ರೀರಾಮುಲುಗೆ ಪೈಪೋಟಿ ಕೊಡುವಷ್ಟು ದೊಡ್ಡ ನಾಯಕ ನಾನಲ್ಲ | ಬಿ.ವೈ.ವಿಜಯೇಂದ್ರ
ಸಾರ್ವಜನಿಕರು ತಮ್ಮ ತಮ್ಮ ಪ್ರದೇಶದಲ್ಲಿನ ಕೊಳವೆ ಬಾವಿಗಳ ನೀರನ್ನು ಮತ್ತು ಶುದ್ಧ ಕುಡಿಯುವ ನೀರನ್ನು ಉಪಯೋಗಿಸಲು ಕೋರಿದೆ.
ನೀರನ್ನು ಮಿತವಾಗಿ ಬಳಸಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.