ಮುಖ್ಯ ಸುದ್ದಿ
SRS ಕಾಲೇಜಿಗೆ ಮತ್ತೊಂದು ಗರಿ | ಬಿಸಿಎ ವಿದ್ಯಾರ್ಥಿನಿಗೆ 5ನೇ ರ್ಯಾಂಕ್
CHITRADURGA NEWS | 07 FEBRUARY 2025
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾನಿಲಯದ 2023-24ನೇ ಶೈಕ್ಷಣಿಕ ವರ್ಷದ ಪದವಿ ವಿಭಾಗದ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, SRS ಪ್ರಥಮ ದರ್ಜೆ ಕಾಲೇಜಿಗೆ ಈ ವರ್ಷವೂ ರ್ಯಾಂಕ್ ಲಭಿಸಿದೆ.
ಇಲ್ಲಿನ ಪದವಿ ವಿದ್ಯಾರ್ಥಿನಿ ನಾಜಿಯಾ ಕೌಸರ್ ಆರ್.ಎಸ್. ಬಿಸಿಎ ಅಂತಿಮ ಪದವಿಯಲ್ಲಿ ಶೇ.93 ರಷ್ಟು ಅಂಕ ಗಳಿಸಿ 5ನೇ ರ್ಯಾಂಕ್ ಗಳಿಸಿದ್ದಾರೆ.
ಇದನ್ನೂ ಓದಿ: B.Ed ಫಲಿತಾಂಶ | SRS ಕಾಲೇಜಿಗೆ ಮೂರು ರ್ಯಾಂಕ್
ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ರವಿ, ಪ್ರಾಂಶುಪಾಲರಾದ ಜಿ.ಪಿ.ನಂದನ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.