ಮುಖ್ಯ ಸುದ್ದಿ
ಬಜೆಟ್ ನಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಿನ ಅನುದಾನ ನೀಡಿ | ಕರುನಾಡ ವಿಜಯಸೇನೆ ಒತ್ತಾಯ
CHITRADURGA NEWS | 21 FEBRUARY 2025
ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನೀಡಿರುವ ಎಲ್ಲಾ ಭಾಗ್ಯಗಳನ್ನು ನಿಲ್ಲಿಸಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು
Also Read: ಎಚ್.ಡಿ.ಪುರ | ಮಾರ್ಚ್ 13 ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಮಕ್ಕಳು ಹಾಗೂ ಪೋಷಕರುಗಳು ಖಾಸಗಿ ಶಾಲೆಗಳ ಮೇಲೆ ವ್ಯಾಮೋಹವಿಟ್ಟುಕೊಂಡಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ದುರಂತ.
ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಉನ್ನತ ಹುದ್ದೆಯಲ್ಲಿರುವ ಬಹುತೇಕ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿಯೇ ಓದಿರುವುದು ಎನ್ನುವುದನ್ನು ಶಿಕ್ಷಣ ಸಚಿವರು ಮರೆಯಬಾರದೆಂದು ಎಚ್ಚರಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಹಾಗಾಗಿ ಮಾ. 7 ರಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್ನಲ್ಲಿ ಶಿಕ್ಷಣಕ್ಕೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
Also Read: ಚನ್ನಗಿರಿ, ಯಲ್ಲಾಪುರದಲ್ಲಿ ಅಡಿಕೆ ಬೆಲೆ ಏರಿಕೆ | ರೈತರಲ್ಲಿ ಸಂತಸ
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಗೋಪಿನಾಥ್, ಕಾರ್ಯದರ್ಶಿ ಸಿ.ಜಗದೀಶ್, ಉಪಾಧ್ಯಕ್ಷೆ ರತ್ನಮ್ಮ, ಮುಜಾಹಿದ್, ನಿಸಾರ್ ಅಹಮದ್, ಮೋಹನ್‌ಕುಮಾರ್, ಅಣ್ಣಪ್ಪ, ಯರ್ರಿಸ್ವಾಮಿ, ಸಿ.ತಿಪ್ಪೇಸ್ವಾಮಿ, ಪಾಂಡು, ಯಶವಂತ್, ಕಮಲ, ರಾಮಾಂಜನೇಯ, ಮಧು, ಅಖಿಲೇಶ್, ಸುರೇಶ್, ಅವಿನಾಶ್, ನಾಗರಾಜಮುತ್ತು, ನಾಗೇಶ, ಹರೀಶ ಇತರರಿದ್ದರು.