ಮುಖ್ಯ ಸುದ್ದಿ
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಚುನಾವಣೆ | ಕಾರೇಹಳ್ಳಿ ಉಲ್ಲಾಸ್ ಪುನರಾಯ್ಕೆ
CHITRADURGA NEWS | 08 FEBRUARY 2025
ಚಿತ್ರದುರ್ಗ: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಟಡೆದ ಚುನಾವಣೆಯಲ್ಲಿ ಯುವ ಮುಖಂಡ ಕಾರೇಹಳ್ಳಿ ಉಲ್ಲಾಸ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಳೆದ ಹಲವು ದಿನಗಳಿಂದ ನಡೆದ ಪ್ರಕ್ರಿಯೆಯಲ್ಲಿ ಕಾರೇಹಳ್ಳಿ ಉಲ್ಲಾಸ್ 17703 ಮತಗಳನ್ನು ಪಡೆದಿದ್ದಾರೆ. 6512 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಇದನ್ನೂ ಓದಿ: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಶನಿವಾರದ ಹತ್ತಿ ರೇಟ್ ಎಷ್ಟಿದೆ?
ಚುನಾವಣೆಯಲಿ ಗೆದ್ದ ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಉಲ್ಲಾಸ್ ಅವರನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಉಲ್ಲಾಸ್, ಕಾಂಗ್ರೆಸ್ ಕಾರ್ಯಕರ್ತರ ನೊಂದಣಿ ಮಾಡಿಸಿದ್ದು, ಆನಂತರ ಒಂದು ತಿಂಗಳ ಕಾಲ ಚುನಾವಣೆ ನಡೆಸಲಾಗಿದೆ. 30 ದಿನಗಳ ಕಾಲ ಯುವ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಕಡೆಗಳಲ್ಲಿ ಓಡಾಡುವ ಮೂಲಕ ಸದಸ್ಯತ್ವ ಮಾಡಿಸಿ ಜಿಲ್ಲಾಧ್ಯಕ್ಷನಾಗಲು ಸಹಕಾರ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಚಿತ್ರದುರ್ಗಕ್ಕೆ ಎರಡು ದಿನ ಶಾಂತಿಸಾಗರ ನೀರು ಸ್ಥಗಿತ
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.