ಮುಖ್ಯ ಸುದ್ದಿ
CEIR Software: ಕಳ್ಳತನವಾಗಿದ್ದ 70 ಮೊಬೈಲ್ ಪತ್ತೆ | ಸೈಬರ್ ಪೊಲೀಸರ ಕಾರ್ಯಕ್ಕೆ ಶ್ಲಾಘನೆ
CHITRADURGA NEWS | 16 OCTOBER 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದು ಹೋಗಿದ್ದ 70 ಮೊಬೈಲ್ ಫೋನ್‍ಗಳನ್ನು ಸೈಬರ್ ಪೊಲೀಸರು ಪತ್ತೆ ಮಾಡಿ ಮಾಲಿಕರಿಗೆ ಹಸ್ತಾಂತರ ಮಾಡಿದ್ದಾರೆ.
ಚಿತ್ರದುರ್ಗದ CEN ಪೊಲೀಸರು, CEIR (softwere) ತಂತ್ರಾಂಶದ ನೆರವಿನಿಂದ 10.50 ಲಕ್ಷ ರೂ. ಮೌಲ್ಯದ 70 ಮೊಬೈಲ್‍ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಹಸ್ತಾಂತರ ಮಾಡಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿಗಳ ದಾಳಿ | ಚಿಕಿತ್ಸೆ ಫಲಿಸದೆ ಮೃತಪಟ್ಟ ಬಾಲಕ
ಕರ್ನಾಟಕದಲ್ಲಿ 48, ಕೇರಳಾದಲ್ಲಿ 14, ಆಂಧ್ರಪ್ರದೇಶದಲ್ಲಿ 6, ಮಹಾರಾಷ್ಟ್ರದಲ್ಲಿ 2 ಮೊಬೈಲ್‍ಗಳು ಪೊಲೀಸರ ತನಿಖೆ ವೇಳೆ ಪತ್ತೆಯಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಎಎಸ್‍ಪಿ ಕುಮಾರಸ್ವಾಮಿ, ಸಿಇಎನ್ ಠಾಣೆಯ ಡಿವೈಎಸ್‍ಪಿ ಉಮೇಶ್ ಈಶ್ವರ ನಾಯ್ಕ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ಧಾರಣೆ ಎಷ್ಟಿದೆ ?
ಮೊಬೈಲ್ ಪತ್ತೆಗೆ ಶ್ರಮಿಸಿದ ಎಎಸ್‍ಐ ಎನ್.ವೆಂಕಟೇಶ್, ಎಚ್‍ಸಿ ಮಲ್ಲಿಕಾರ್ಜುನ, ಜಯರಾಂ, ಸಿಪಿಸಿ ಭೀಮನಗೌಡ ಪಾಟೀಲ್, ಗಗನ್ ದೀಪ್ ಪವಾರ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.