CHITRADURGA NEWS | 21 JANUARY 2026
ಚಿತ್ರದುರ್ಗ: ಹಳ್ಳಿ ಹಳ್ಳಿಗಳಲ್ಲೂ ರಂಗೇರುವ, ಪಕ್ಕಾ ಲೋಕಲ್ ಚುನಾವಣೆ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಸನ್ನಿಹಿತವಾಗಿದೆ.
ಆದರೆ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯ ವಿಶೇಷ ಅಂದ್ರೆ, ಬರೀ ಗ್ರಾಪಂ ಚುನಾವಣೆ ಅಲ್ಲ, ಜೊತೆಗೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಕೂಡಾ ನಡೆಯುವುದು..!
ಇದನ್ನೂ ಓದಿ: ನವೋದಯ ವಿದ್ಯಾಲಯ | ಫೆಬ್ರವರಿ 07ಕ್ಕೆ ಪ್ರವೇಶ ಪರೀಕ್ಷೆ
ಹೌದು, ರಾಜ್ಯ ಸರ್ಕಾರ ಇಂಥದ್ದೊಂದು ಗಂಭಿರ ಚಿಂತನೆ ನಡೆಸುತ್ತಿದೆ. ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಅವಧಿ ಕೆಲ ದಿನಗಳಲ್ಲೇ ಮುಗಿಯಲಿದ್ದು, ಚುನಾವಣಾ ಆಯೋಗ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದೇ ವೇಳೆ ಕಳೆದ ಎಂಟತ್ತು ವರ್ಷಗಳಿಂದ ಚುನಾವಣೆಯೇ ಆಗದೆ ನನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನೂ ನಡೆಸುವುದು ಆಯೋಗ ಹಾಗೂ ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ:ಬೋಧಕರ ಹುದ್ದೆಗೆ ನೇಮಕಾತಿ | ಅರ್ಜಿ ಅಹ್ವಾನ
ಈ ನಿಟ್ಟಿನಲ್ಲಿ ಸಾಕಷ್ಟು ಬಿರುಸಿನ ತಯಾರಿಗಳು ನಡೆಯುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕುರಿತ ಸುಳಿವು ನೀಡಿದ್ದು, ಗ್ರೇಟರ್ ಬೆಂಗಳೂರು ಪಾಲಿಕೆ ಜೊತೆಗೆ ಗ್ರಾಮ ಪಂಚಾಯಿತಿ ಚುನಾವಣೆಯೂ ನಡೆಯಲಿವೆ. ಇದರೊಟ್ಟಿಗೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಗ್ರಾಪಂ ಚುನಾವಣೆಗೆ ಪಕ್ಷದ ಚಿಹ್ನೆ:
ಈ ಬಾರಿಯ ಚುನಾವಣೆಗಳು ಸಾಕಷ್ಟು ವಿಶೇಷತೆಗೆ ಸಾಕ್ಷಿಯಾಗುತ್ತಿವೆ. ಈವರೆಗೆ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆ ಬಳಕೆಯಾಗದೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿತ್ತು. ಆದರೆ, ಈ ಬಾರಿ ನೇರವಾಗಿ ಪಕ್ಷದ ಚಿಹ್ನೆಯಡಿ ಗ್ರಾಪಂ ಚುನಾವಣೆ ನಡೆಸುವ ಆಲೋಚನೆಯೂ ಸರ್ಕಾರದ ಮುಂದಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 20 | ಹತ್ತಿ ರೇಟ್ ಎಷ್ಟಿದೆ?
ಆದರೆ, ಈ ಪ್ರಕ್ರಿಯೆ ಅದೆಷ್ಟು ಸರಿ, ಹಳ್ಳಿಗಳಲ್ಲಿ ಪಕ್ಷ ರಾಜಕಾರಣ ಹೇಗಾಗುತ್ತೆ. ಜನ ಒಪ್ಪುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಅಂತಿಮ ತೀರ್ಮಾನ ಕೂಡಾ ಸರ್ಕಾರ ಹಾಗೂ ಚುನಾವಣಾ ಆಯೋಗದಿಂದಲೇ ಆಗಬೇಕು.
ಬ್ಯಾಲೆಟ್ ಮೂಲಕ ಚುನಾವಣೆ:
ಈವರೆಗೆ ಗ್ರಾಮ ಪಂಚಾಯಿತಿಗೆ ಮಾತ್ರ ಬ್ಯಾಲೆಟ್ ಬಳಸಿ ಚುನಾವಣೆ ನಡೆಸಲಾಗುತ್ತಿತ್ತು. ಉಳಿದಂತೆ ಜಿಲ್ಲಾ, ತಾಲೂಕು ಪಂಚಾಯಿತಿ, ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಇವಿಎಂ ಮೂಲಕ ನಡೆಸುವುದು ಗೊತ್ತೇ ಇದೆ.
ಇದನ್ನೂ ಓದಿ: ಅಡಿಕೆ ಧಾರಣೆ | 20 ಜನವರಿ | ಇಂದಿನ ಅಡಿಕೆ ಮಾರುಕಟ್ಟೆ ವಿವರ
ಆದರೆ, ಇವಿಎಂ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿಯ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಬ್ಯಾಲೆಟ್ ಮೂಲಕ ನಡೆಸುವ ಚಿಂತನೆ ಚುನಾವಣಾ ಆಯೋಗದ ಮುಂದಿದೆ.
ಎಲ್ಲವೂ ಅಂದುಕೊಂಡಂತೆ ಆದರೆ, ಮುಂಬರುವ ಏಪ್ರಿಲ್ – ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿವೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

