CHITRADURGA NEWS | 04 AUGUST 2026
ಚಿತ್ರದುರ್ಗ: ಮಗು ಜನಿಸಿದ ಒಂದು ಗಂಟೆಯ ಒಳಗಾಗಿ ಸ್ತನ್ಯಪಾನ ಪ್ರಾರಂಭಿಸುವುದರಿಂದ ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಸ್ತನ್ಯಪಾನವು ಪ್ರಕೃತಿ ನೀಡಿರುವ ಮೊದಲ ಲಸಿಕೆಯಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 03 | ಮೆಕ್ಕೆಜೋಳ, ಶೇಂಗಾ ರೇಟ್
ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ಸಹಯೋಗದೊಂದಿಗೆ ನಗರದ ಬಡಮಕಾನ್ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷ ಆಗಸ್ಟ್ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ತಾಯಂದಿರಿಗೆ ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನವಜಾತ ಶಿಶುವಿಗೆ ಜೇನುತುಪ್ಪ ಅಥವಾ ಸಕ್ಕರೆ ನೀರನ್ನು ನೀಡಬಾರದು. ಮಗು ಜನಿಸಿದ ತಕ್ಷಣ ಬರುವ ಗಿಣ್ಣುಹಾಲು ಅಮೃತಕ್ಕೆ ಸಮಾನವಾಗಿದ್ದು, ಅದು ಮಗುವಿಗೆ ಜೀವನಪಯರ್ಂತ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ ಮಾತನಾಡಿ, ಯಾವುದೇ ಮೂಢನಂಬಿಕೆ ಅಥವಾ ತಪ್ಪು ತಿಳುವಳಿಕೆಗಳಿಗೆ ಕಿವಿಗೊಡದೆ, ಜನಿಸಿದ ಮಗುವನ್ನು ತಾಯಿಯ ಸನಿಹದಲ್ಲೇ ಮಲಗಿಸಬೇಕು. ಇದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚುತ್ತದೆ.
ಮಗುವಿನ ಸ್ಪರ್ಶದಿಂದ ತಾಯಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಮಗು ಹಾಲು ಚೀಪಿದಾಗ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗಿ ಗರ್ಭಕೋಶವು ಸಹಜ ಸ್ಥಿತಿಗೆ ಮರಳಲು ನೆರವಾಗುತ್ತದೆ ಹಾಗೂ ಬಾಣಂತಿಯರಲ್ಲಿ ರಕ್ತಸ್ರಾವ ಕಡಿಮೆಯಾಗುತ್ತದೆ ಎಂದು ತಿಳಿಸಿ, ಹಾಲು ಕುಡಿಸುವ ಸರಿಯಾದ ಭಂಗಿ ಹಾಗೂ ಹೊಂದಾಣಿಕೆಯ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: ಟಿ.ರಘುಮೂರ್ತಿ ಮಿನಿಸ್ಟರ್ | ಹ್ಯಾಟ್ರಿಕ್ ಗೆಲುವಿನ ಸರದಾರನಿಗೆ ಒಲಿದ ಮಂತ್ರಿ ಪಟ್ಟ
ಆಶಾ ಮೆಂಟರ್ ತಬಿತಾ ಮಾತನಾಡಿ, ಮಗುವಿಗೆ ಆರು ತಿಂಗಳವರೆಗೆ ತಾಯಿಯ ಎದೆಹಾಲು ಹೊರತುಪಡಿಸಿ ಬೇರೇನನ್ನೂ ನೀಡಬಾರದು. ಆರು ತಿಂಗಳ ನಂತರ ಪೂರಕ ಮೃದು ಆಹಾರವನ್ನು ಪ್ರಾರಂಭಿಸಿ, ಕನಿಷ್ಠ ಎರಡು ವರ್ಷದವರೆಗೆ ಎದೆಹಾಲನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿ.ಎಚ್.ಸಿ.ಓ ಭಾಗ್ಯಮ್ಮ, ವಿನ್ಸಿ, ಅಂಗನವಾಡಿ ಸಹಾಯಕಿ ಮನ್ಸೂರ, ಆಶಾ ಕಾರ್ಯಕರ್ತೆಯರಾದ ಕವಿತಾ, ಕೌಸರ್ ಹಾಗೂ ಗರ್ಭಿಣಿಯರು, ಬಾಣಂತಿಯರು ಮತ್ತು ತಾಯಂದಿರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

