CHITRADURGA NEWS | 21 NOVEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯ ಬಹುತೇಕ ಭರ್ತಿಯಾಗಿದೆ. ಅಧಿಕೃತವಾಗಿ ಕೋಡಿ ಮೂಲಕ ನೀರು ಹರಿಯಲು ಇನ್ನೊಂದು ಟಿಎಂಸಿ ಅಡಿ ನೀರು ಬೇಕಾಗಿದೆ.
135 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ 130 ಅಡಿಗೆ ನೀರು ಬಂದರೆ ಕೋಡಿಯಲ್ಲಿ ನೀರು ಹರಿಯಲಿದೆ.
ಇದನ್ನೂ ಓದಿ: ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ | ನ.24 ರಂದು ಸಮಾಲೋಚನಾ ಸಭೆ
ಸದ್ಯ ಜಲಾಶಯದಲ್ಲಿ 128.25 ಅಡಿವರೆಗೆ ನೀರು ಬಂದಿದೆ. ಈ ಕ್ಷಣಕ್ಕೆ ಜಲಾಶಯದಲ್ಲಿ 28.95 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇನ್ನು 1.05 ಟಿಎಂಸಿ ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗಲಿದೆ. ಅಡಿ ಲೆಕ್ಕೆದಲ್ಲಿ ಜಲಾಶಯಕ್ಕೆ ಇನ್ನು 1.75 ಅಡಿವರೆಗೆ ನೀರು ಬರಬೇಕಿದೆ.
ಈಗಾಗಲೇ ಕೋಡಿಯಲ್ಲಿ ನೀರು ಬಂದು ಜಮಾವಣೆಯಾಗಿದೆ. ಕೋಡಿ ಬಳಿ ಇನ್ನೂ 1.75 ಅಡಿಯಷ್ಟು ಮೇಲೆ ಬಂದರೆ ನೀರು ಮೇಲೆ ಹರಿಯಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಹೆಚ್ಚಳ
ನವೆಂಬರ್ 21 ಗುರುವಾರ ನಡೆದ ಮಾಪನದ ವೇಳೆ ವಿವಿ ಸಾಗರ ಜಲಾಶಯಕ್ಕೆ 577 ಕ್ಯೂಸೆಕ್ ನೀರು ಹರಿದು ಬಂದಿದೆ. ಒಳಹರಿವು ಇದೇ ಪ್ರಮಾಣದಲ್ಲಿ ಮುಂದುವರೆದರೆ ಮಳೆ ಬಾರದಿದ್ದರೂ ಡಿಸೆಂಬರ್ ತಿಂಗಳಲ್ಲಿ ಜಲಾಶಯ ಕೋಡಿ ಹರಿಯಲಿದೆ ಎನ್ನಲಾಗುತ್ತಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

