
CHITRADURGA NEWS | 16 DECEMBER 2024
ಚಿತ್ರದುರ್ಗ: ಜಿಲ್ಲೆಯ ಜನರ ಅದೃಷ್ಟ ಎಂಬಂತೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ಮತ್ತೆ ಒಳಹರಿವು ಪ್ರಾರಂಭವಾಗಿದೆ.
ಈಗಾಗಲೇ ಮೂರು ದಿನಗಳಿಂದ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುತ್ತಿದ್ದು, ಪ್ರತಿದಿನ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇದನ್ನೂ ಓದಿ: ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಸಿಲುಕಿ ಯುವಕ ಸಾವು
ಡಿಸೆಂಬರ್ 16 ಸೋಮವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 693 ಕ್ಯೂಸೆಕ್ ನೀರು ಹರಿದು ಬಂದಿದೆ.
135 ಅಡಿ ಎತ್ತರದ ಜಲಾಶಯಕ್ಕೆ 130 ಅಡಿಗೆ ನೀರು ತಲುಪಿದರೆ ಕೋಡಿ ಬೀಳಲಿದೆ.
ಸದ್ಯ ಜಲಾಶಯದಲ್ಲಿ 128.90 ಅಡಿವರೆಗೆ ನೀರು ಬಂದಿದೆ. ಕೋಡಿ ಬೀಳಲು ಇನ್ನೂ 1.10 ಅಡಿ ಬಾಕಿ ಇದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?
30 ಟಿಎಂಸಿ ಸಾಮರ್ಥ್ಯ ಜಲಾಶಯದಲ್ಲಿ ಇಂದಿಗೆ 29.50 TMC ಅಡಿ ನೀರು ಬಂದು ಜಮಾವಣೆ ಆಗಿದೆ.
ಇನ್ನೂ ಅರ್ಧ ಟಿಎಂಸಿ ನೀರು ಬಂದರೆ ಜಲಾಶಯ ಕೋಡಿ ಬೀಳಲಿದೆ.
ಕಳೆದ ವರ್ಷ ಇದೇ ಸಂದರ್ಭಕ್ಕೆ 121.45 ಅಡಿವರೆಗೆ ನೀರಿದ್ದು, 23.23 ಟಿಎಂಸಿ ನೀರಿನ ಸಂಗ್ರಹ ಇತ್ತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
