By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಈ 5 ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆಯಂತೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಈ 5 ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆಯಂತೆ

Life Style

ಈ 5 ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆಯಂತೆ

News Desk Chitradurga News
Last updated: 21 May 2025 18:34
News Desk Chitradurga News
1 month ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 22 may 2025

ಸಾಮಾನ್ಯವಾಗಿ ಜನರು ತಮ್ಮ ಮನೆಯನ್ನು ಅಲಂಕರಿಸಲು ಗಿಡಗಳನ್ನು ನೆಡುತ್ತಾರೆ. ಆದರೆ ಕೆಲವು ವಿಶೇಷ ಗಿಡಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದು ಕೆಲವರಿಗೆ ತಿಳಿದಿಲ್ಲ. ಕೆಲವು ಸಸ್ಯಗಳು ಮನೆಯ ಗಾಳಿಯನ್ನು ಶುದ್ಧೀಕರಿಸುವುದಲ್ಲದೆ, ಅವುಗಳ ಸರಿಯಾದ ಬಳಸುವುದರಿಂದ ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಮುಖವು ನೈಸರ್ಗಿಕವಾಗಿ ಹೊಳೆಯಬೇಕೆಂದು ನೀವು ಬಯಸಿದರೆ, ನಿಮ್ಮಮನೆಯಲ್ಲಿರುವ ಈ 5 ಸಸ್ಯಗಳನ್ನು ಮುಖಕ್ಕೆ ಬಳಸಿ.

ಅಲೋವೆರಾ

ಅಲೋವೆರಾ ಸೌಂದರ್ಯ ಹೆಚ್ಚಿಸಲು ಬಳಸುವ ಬಹಳ ಪ್ರಸಿದ್ಧ ಸಸ್ಯವಾಗಿದೆ. ಇದರ ಎಲೆಗಳ ಒಳಗೆ ಕಂಡುಬರುವ ಜೆಲ್ ಚರ್ಮಕ್ಕೆ ವರದಾನವೆಂದೇ ಹೇಳಬಹುದು.

ಹಾಗಾಗಿ ಅಲೋವೆರಾ ಎಲೆಯನ್ನು ಕತ್ತರಿಸಿ ಅದರಿಂದ ಜೆಲ್ ಅನ್ನು ಹೊರತೆಗೆಯಿರಿ. ಈ ಜೆಲ್ ಅನ್ನು ನೇರವಾಗಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಮೊಡವೆ, ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಚರ್ಮವನ್ನು ತಂಪಾಗಿಸುತ್ತದೆ ಮತ್ತು ತೇವಗೊಳಿಸುತ್ತದೆ.

ತುಳಸಿ

ತುಳಸಿಯನ್ನು ದೇವರೆಂದು ಪರಿಗಣಿಸಲಾಗುತ್ತದೆ. ಆದರೆ ಅದರ ಔಷಧೀಯ ಗುಣಗಳು ಸಹ ಬೇರೆ ಯಾವುದಕ್ಕಿಂತ ಕಡಿಮೆಯಿಲ್ಲ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.  ಹಾಗಾಗಿ ತುಳಸಿ ಎಲೆಗಳನ್ನು ಪುಡಿಮಾಡಿ ಪೇಸ್ಟ್ ಮಾಡಿ. ಈ ಪೇಸ್ಟ್‌ಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ.10-15 ನಿಮಿಷಗಳ ನಂತರ ತೊಳೆಯಿರಿ. ಇದು ಮುಖದಲ್ಲಿರುವ ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ಸ್ವಚ್ಛಗೊಳಿಸುತ್ತದೆ. ದದ್ದು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ.

ಪುದೀನ

ಪುದೀನವು ಮುಖವನ್ನು ತಂಪಾಗಿಸುತ್ತದೆ ಮತ್ತು ಚರ್ಮವನ್ನು ತಾಜಾವಾಗಿರಿಸುತ್ತದೆ. ವಿಶೇಷವೆಂದರೆ ಇದು ಬೇಸಿಗೆಯಲ್ಲಿ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪುದೀನ ಎಲೆಗಳನ್ನು ಪುಡಿಮಾಡಿ ಸ್ವಲ್ಪ ರೋಸ್ ವಾಟರ್ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ, ನಿಧಾನವಾಗಿ ತೊಳೆಯಿರಿ. ಇದು ಚರ್ಮವನ್ನು ತಂಪಾಗಿಸುತ್ತದೆ. ಎಣ್ಣೆಯುಕ್ತ ಚರ್ಮವನ್ನು ಹೊಂದಿರುವ ಜನರಿಗೆ ಇದು ತುಂಬಾ ಪ್ರಯೋಜನಕಾರಿ.

ಬೇವು

ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ . ಇದು ಮುಖವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.  ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ.ಈ ನೀರನ್ನು ತಣ್ಣಗಾಗಿಸಿ ಮತ್ತು ನಿಮ್ಮ ಮುಖವನ್ನು ತೊಳೆಯಲು ಅಥವಾ ಸಿಂಪಡಿಸಲು ಬಳಸಿ. ಅಲ್ಲದೇ ಈ ಎಲೆಗಳನ್ನು ಪೇಸ್ಟ್ ಮಾಡಿ ಕೂಡ ಮುಖಕ್ಕೆ ಹಚ್ಚಬಹುದು. ಇದು ಮೊಡವೆಗಳು, ಕಲೆಗಳು ಮತ್ತು ದದ್ದುಗಳನ್ನು ಕಡಿಮೆ ಮಾಡುತ್ತದೆ . ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BeautyChitradurgaChitradurga newsChitradurga UpdatesfaceHomeKannada Latest NewsKannada Newsneemplanttulsiಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಗಿಡಚಿತ್ರದುರ್ಗಚಿತ್ರದುರ್ಗ ನ್ಯೂಸ್ತುಳಸಿಬೇವುಮನೆಮುಖಸೌಂದರ್ಯ
Share This Article
Facebook Email Print
Previous Article RCB ಗೆಲುವಿಗಾಗಿ ಅಭಿಮಾನಿಯಿಂದ ಸೈಕಲ್ ಯಾತ್ರೆ 
Next Article ಬೇಸಿಗೆಯಲ್ಲಿ ಮಕ್ಕಳಿಗೆ ಮಜ್ಜಿಗೆ ಕುಡಿಸುವುದರಿಂದ ಆಗುವ ಪ್ರಯೋಜನಗಳು
Leave a Comment

Leave a Reply Cancel reply

Your email address will not be published. Required fields are marked *

ಯೋಗಶಾಸ್ತ್ರದ ನಿರಂತರ ಅನುಷ್ಠಾನದಿಂದ ಜೀವನೋತ್ಸಾಹ | ಇಮ್ಮಡಿ ಸಿದ್ದರಾಮೇಶ್ವರ ಶ್ರೀ
ಮುಖ್ಯ ಸುದ್ದಿ
ಮಾಹಿತಿ ಹಕ್ಕು ಕಾಯ್ದೆ | ಶುಲ್ಕ ಪರಿಷ್ಕರಣೆಗೆ ಪ್ರಸ್ತಾವನೆ | ಆಯುಕ್ತ ರುದ್ರಣ್ಣ ಹರ್ತಿಕೋಟೆ
ಮುಖ್ಯ ಸುದ್ದಿ
ಅರ್ಜಿ ಅಹ್ವಾನ
ಜೂನ್ 30ರವರೆಗೆ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ
ಮುಖ್ಯ ಸುದ್ದಿ
ವಿದ್ಯುತ್ ವ್ಯತ್ಯಯ
ನಾಳೆ ವಿದ್ಯುತ್ ವ್ಯತ್ಯಯ | ಚಿತ್ರದುರ್ಗ ಸೇರಿದಂತೆ ಈ ತಾಲೂಕಿನಲ್ಲಿ ಕರೆಂಟ್ ಇರಲ್ಲ..
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up