http://www.chitradurganews.com | 10 march 2024
ಚಿತ್ರದುರ್ಗ: ಮಾದಿಗರ ಸಾಂಸ್ಕøತಿಕ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಾಂಗದ ಸಾಂಸ್ಕøತಿಕ ನೆಲೆಗಳು – ಮುಕ್ತ ಸಂವಾದ ಕಾರ್ಯಕ್ರಮ ತೀವ್ರ ವಿವಾದಕ್ಕೆ ಕಾರಣವಾಯಿತು.
ಪ್ರೊ.ಸಿ.ಕೆ.ಮಹೇಶ್, ನಿವೃತ್ತ ತಹಶೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ್, ಹನುಮಂತಪ್ಪ ದುರ್ಗ ಮತ್ತಿತರರು ಸೇರಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಗುರುಪೀಠ ಹಾಗೂ ಶ್ರೀಗಳ ನಡೆಯ ಬಗ್ಗೆ ಚರ್ಚೆ ನಡೆಸಲು ರಾಜ್ಯಾದ್ಯಂತ ಮಾದಿಗ ಸಮುದಾಯದ ಮುಖಂಡರನ್ನು ಆಹ್ವಾನಿಸಲಾಗಿತ್ತು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಶೀಘ್ರದಲ್ಲೇ ವೇಳಾಪಟ್ಟಿ
ಪತ್ರಿಕಾ ಭವನದ ಮುಂಭಾಗದಲ್ಲಿ ಶಾಮಿಯಾನ ಹಾಕಿ ಅಲ್ಲಿಯೇ ಸಂವಾದ ನಡೆಸಲು ಆಯೋಜಕರು ಮುಂದಾದರು. ಇದೇ ವೇಳೆಗೆ ಸಮುದಾಯದ ಮತ್ತೊಂದು ಗುಂಪು ಮಾದಾರ ಚನ್ನಯ್ಯ ಮಠದ ಪರವಾಗಿ ಸಂವಾದ ನಡೆಯುವ ಸ್ಥಳಕ್ಕೆ ಆಗಮಿಸಿದಾಗ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಎರಡೂ ಗುಂಪುಗಳ ನಡುವೆ ತೀವ್ರ ವಾದ-ವಿವಾದಗಳು ಘಟಿಸಿದವು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಮಾಡಿದರು.
ಇದನ್ನೂ ಓದಿ: ಮತ್ತಿಘಟ್ಟ-ಚಿತ್ರದುರ್ಗ, ಸಾಸಲು ಸರ್ಕಲ್ – ಹಿರೇಬೆನ್ನೂರಿಗೆ ಸಿಸಿ ರೋಡ್
ಪೊಲೀಸರ ಮಧ್ಯಸ್ಥಿಕೆ ಹಾಗೂ ಸಮುದಾಯದ ಮುಖಂಡರ ಮಾತುಕತೆ ನಡೆದು ಸಂವಾದ ಕಾರ್ಯಕ್ರಮ ರದ್ದಾಯಿತು. ಮುಂದೆ ಮತ್ತೊಂದು ದಿನಾಂಕ ನಿಗಧಿ ಮಾಡಿ, ಬೆರೊಂದು ಸ್ಥಳದಲ್ಲಿ ಸಮುದಾಯದವರ ಎದುರಿನಲ್ಲಿ ಚರ್ಚಿಸಲು ತೀರ್ಮಾನಿಸಲಾಯಿತು.
ಈ ವೇಳೆ ಒಂದು ಗುಂಪು ಮಾದಾರ ಚನ್ನಯ್ಯ ಶ್ರೀಗಳ ಪರವಾಗಿ ಘೋಷಣೆ ಕೂಗುತ್ತಾ ಹೊರ ನಡೆಯಿತು.
ಇದೇ ವೇಳೆ ಮಠದ ವಿರುದ್ಧವಾಗಿ ಸಂವಾದ ಕಾರ್ಯಕ್ರಮ ಸಂಘಟಿಸಿದವರನ್ನು ಬಂಧಿಸಬೇಕು ಎಂದು ಮಠದ ಭಕ್ತರ ಗುಂಪು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿತು.
ಇದನ್ನೂ ಓದಿ: ಮೊದಲ ಪಟ್ಟಿಯಲ್ಲಿ ಚಿತ್ರದುರ್ಗದ ಅಭ್ಯರ್ಥಿ ಹೆಸರಿಲ್ಲ
ಸಂವಾದ ಕಾರ್ಯಕ್ರಮಕ್ಕಾಗಿ ಮಾದಾರ ಚನ್ನಯ್ಯ ಗುರುಪೀಠದ 500ಕ್ಕೂ ಹೆಚ್ಚು ಭಕ್ತರು ರಾಜ್ಯ ವಿವಿಧ ಭಾಗಗಳಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಸಮುದಾಯದ ಮುಖಂಡರಾದ ಕೆ.ಟಿ.ಶಿವಕುಮಾರ್, ರಘು, ಪ್ರಕಾಶ್ ಬೀರಾವರ, ರವಿಕುಮಾರ್ ಸೇರಿದಂತೆ ನೂರಾರು ಜನ ಮಠದ ಪರವಾಗಿ ಆಗಮಿಸಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿ ದಿನಕರ್ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

