Connect with us

Reservation: ಒಳಮೀಸಲು ಜಾರಿಗೆ ಪಟ್ಟು | ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ | ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಮುಖಂಡರ ಅಸಮಧಾನ

madiga mukandara sabhe

ಮುಖ್ಯ ಸುದ್ದಿ

Reservation: ಒಳಮೀಸಲು ಜಾರಿಗೆ ಪಟ್ಟು | ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ | ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಮುಖಂಡರ ಅಸಮಧಾನ

CHITRADURGA NEWS | 11 OCTOBER 2024

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟದಲ್ಲೇ ಒಳಮೀಸಲು ಜಾರಿ ಮಾಡುವುದಾಗಿ ಚಿತ್ರದುರ್ಗದಲ್ಲಿ ನಡೆದ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಘೋಷಣೆ ಮಾಡಲಾಗಿತ್ತು.

ಆದರೆ, ಈಗ ಸುಪ್ರೀಂ ಕೋರ್ಟ್ ಒಳಮೀಸಲು ಜಾರಿಯ ಅಧಿಕಾರ ರಾಜ್ಯ ಸರ್ಕಾರಗಳಿಗೂ ಇದೆ. ಒಳಮೀಸಲಾತಿ ಜಾರಿ ಮಾಡಬೇಕು ಎಂದು ತೀರ್ಪು ನೀಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ದಲಿತ ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಅಕ್ಟೋಬರ್ 10ರ ಮಾರುಕಟ್ಟೆಯಲ್ಲಿ ಹತ್ತಿ ರೇಟ್

ಈ ನಿಟ್ಟಿನಲ್ಲಿ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮಾಜದ ಮುಖಂಡರ ಸಭೆ ನಡೆದಿದ್ದು, ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಗಿದೆ.

ಒಳಮೀಸಲಾತಿ ಜಾರಿಯಾಗುವವರೆಗೂ ಬ್ಯಾಕ್‍ಲಾಗ್ ಹುದ್ದೆ ಅಥವಾ ಹೊಸ ನೇಮಕಾತಿ ಮಾಡುವುದು ಸಮಾನ ಪ್ರಾತಿನಿಧ್ಯ ಕಿತ್ತುಕೊಳ್ಳವ ತಂತ್ರವಾಗುತ್ತದೆ. ಇದನ್ನು ರಾಜ್ಯದ ಮಾದಿಗ ಸಮಾಜ ಖಂಡಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೆ ತಂದು ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆ, ನೌಕರಿ ಹಂಚುವುದೇ ಸಾಮಾಜಿಕ ನ್ಯಾಯದ ಮೊದಲ ಪಾಠ ಎಂಬುದನ್ನು ಕಾಂಗ್ರೆಸ್ ಮಾರೆಮಾಚುತ್ತಿದೆ ಎಂದರು.

ಒಳಮೀಸಲಾತಿ ಜಾರಿ ಮುನ್ನವೇ ಹೊಸ ಹುದ್ದೆ, ಬ್ಯಾಕ್‍ಲ್ಯಾಗ್ ಹುದ್ದೆ ನೇಮಕಾತಿ ತರಾತುರಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಮಾದಿಗ ವಿರೋಧಿಯಾಗಿದೆ. ಈ ಸರ್ಕಾರಕ್ಕೆ ಸಾಮಾಜಿಕ ಬದ್ದತೆ ಇದ್ದರೆ ಒಳಮೀಸಲಾತಿ ಜಾರಿ ಮಾಡಿ ನಂತರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹ ಮಾಡಲಾಯಿತು.

ಇದನ್ನೂ ಓದಿ: ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಮರೆಮಾಚಲು ಜಾತಿ ಗಣತಿಯ ಅಸ್ತ್ರ | ಸಿ.ಟಿ.ರವಿ

ಚಿತ್ರದುರ್ಗ ಜಿಲ್ಲೆಯ ಎಲ್ಲಾ ದಲಿತ, ಅಂಬೇಡ್ಕರ್‍ವಾದಿ, ಮಾದಿಗ ಸಂಘಟನೆಗಳು ಒಳಗೊಂಡಂತೆ ಅಡಕ್ ಸಮಿತಿ ರಚಿಸುವ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ ಹಾಗೂ ಹುಲ್ಲೂರು ಕುಮಾರ್ ಅವರಿಗೆ ವಹಿಸಲಾಯಿತು.

ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಿ ಸಿದ್ದರಾಮಯ್ಯಗೆ ಒಳಮೀಸಲಾತಿ ಜಾರಿ ಮಾಡಲು ಗಡುವು ವಿಧಿಸಲು ತೀರ್ಮಾನಿಸಲಾಗಿದೆ. ಈ ಸಮಾವೇಶದಲ್ಲಿ ಹಿರಿಯ ಹೋರಾಟಗಾರರು, ಬರಹಗಾರರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಬಿಎಸ್ಪಿ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು, ಸಚಿವರು, ಸಂಸದರು ಹಾಗೂ ಮಾದಿಗ ಜನಾಂಗದ ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ತರಲು ತೀರ್ಮಾನಿಸಲಾಯಿತು.

ವಿದ್ಯಾರ್ಥಿಗಳು, ನೌಕರರು, ಕೃಷಿಕರು, ಪ್ರತ್ಯೇಕವಾಗಿ ವಾಟ್ಸಾಪ್ ಗ್ರೂಪ್ ರಚಿಸಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಆರಂಭಿಸುವ ಮೂಲಕ ಹೋರಾಟದ ತೀವ್ರತೆಗೆ ಮಾದಿಗ ಜನಾಂಗವನ್ನು ಸಜ್ಜುಗೊಳಿಸುವಂತೆ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅವರಿಗೆ ಜವಾಬ್ದಾರಿ ವಹಿಸಲಾಯಿತು.

ಇದನ್ನೂ ಓದಿ: ಸಂಘಟಿತರಾದರೆ ಸಾಮಾಜಿಕ ನ್ಯಾಯ, ಮೀಸಲಾತಿ ಸಾಧ್ಯ | ಶಾಂತವೀರ ಶ್ರೀ

ಒಳಮೀಸಲಾತಿ ಜಾರಿ ವಿರೋಧಿ ರಾಜಕಾರಣಿಗಳಿಗೆ ಪ್ರವೇಶವಿಲ್ಲವೆಂಬ ನಾಮಫಲಕಗಳನ್ನು ಎಲ್ಲಾ ಕಾಲೋನಿಗಳಲ್ಲಿ ಹಾಕಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಆದಿಜಾಂಭವ ಅಭಿವೃದ್ದಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶ್‍ಮೂರ್ತಿ, ದೊಡ್ಡಘಟ್ಟ ಲಕ್ಷ್ಮಣ್, ನರಸಿಂಹರಾಜು, ತಾಪಂ ಮಾಜಿ ಅಧ್ಯಕ್ಷ ತಿರಾಂಪುರದ ಪೆನ್ನಣ್ಣ, ರಾಜ್ಯ ನಾಯಕರಾದ ಅಂಬಣ್ಣ ಹಾರೋಲಿಕರ್, ಬಸವರಾಜ್ ಕೌತಳ್, ಸಾಮಾಜಿಕ ಸಂಘರ್ಷ ಸಮಿತಿ ಕೆ.ಕುಮಾರ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಮೂರಾರ್ಜಿ, ಸಾಹಿತಿ ಕೋಡಿಹಳ್ಳಿ ಸಂತೋμï, ದಲಿತ ನಾಯಕ ಶಂಕರ್ ಕೊಟ್ಟ, ಹರಿಹರ ಎಚ್.ಆರ್.ಮಲ್ಲೇಶ್, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ, ಹುಲ್ಲೂರು ಕುಮಾರ್, ಜೈಭೀಮ್ ಯುವಕ ಸಂಘದ ಯಲ್ಲಪ್ಪ, ಕೆ.ಪಿ.ಶ್ರೀನಿವಾಸ್, ಹೆಗ್ಗೆರೆ ಮಂಜುನಾಥ್, ಕಲಾವಿದ ಮಾರುತೇಶ್ ಇತರರಿದ್ದರು.

ನವಯಾನ ಬುದ್ದ ಸಂಘ ಟಿ.ರಾಮು, ಭೀಮನಕೆರೆ ಶಿವಮೂರ್ತಿ, ಬಿಬಿಎಸ್ಪಿ ಅಧ್ಯಕ್ಷ ಪ್ರಕಾಶ್, ಭೀಮ್ ಆರ್ಮಿ ಅಧ್ಯಕ್ಷ ಸಿ.ಎಲ್.ಅವಿನಾಶ್, ರಾಜೇಂದ್ರ ನಗರದ ಶಿವರಾಜ್, ಕುಂಚಿಗನಾಳ್ ಮಹಲಿಂಗಪ್ಪ, ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ನಿವೃತ್ತ ಪರಿಶಿಷ್ಟ ವರ್ಗದ ಜಿಲ್ಲಾಧಿಕಾರಿ ದಯಾನಂದ, ಬಿಜೆಪಿ ಮುಖಂಡ ಮೂರಾರ್ಜಿ, ಹಗ್ಗೆರೆ ಶಂಕರಪ್ಪ, ಮಾಜಿ ಕೌನ್ಸಿಲ್ ಚಳ್ಳಕೆರೆ ಶಿವಮೂರ್ತಿ, ಪಾಡಿಗಟ್ಟೆ ಸುರೇಶ್, ಪತ್ರಕರ್ತ ಕಿರಣ್, ಪೆÇ್ರೀ.ಆರನಕಟ್ಟೆ ರಂಗನಾಥ್, ಲಾಯರ್ ಚಂದ್ರಪ್ಪ, ಬಿಸ್ನಹಳ್ಳಿ ಜಯಪ್ಪ, ಭೀಮಾಯಾತ್ರೆ ಅಧ್ಯಕ್ಷ ರವೀಂದ್ರ, ಇಂಗಾಳದಾಳ್ ರಘು ಇತರರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version