ಮುಖ್ಯ ಸುದ್ದಿ
Navratri; ನವರಾತ್ರಿ ಪ್ರಯುಕ್ತ ಚಂಡಿಕಾಹೋಮ | ಶಾಂತವೀರ ಶ್ರೀ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭಾಗೀ
CHITRADURGA NEWS | 11 OCTOBER 2024
ಚಿತ್ರದುರ್ಗ: ಕೊರಟಗೆರೆ ತಾಲೂಕಿನ ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ(Sri Annapoorneshwari ) ಮಹಾಸಂಸ್ಥಾನ ಮಠದ ನವರಾತ್ರಿ ಪ್ರಯುಕ್ತ ಚಂಡಿಕಾಹೋಮ ಹಾಗೂ ಮಹಾಯಜ್ಞದಲ್ಲಿ ಹೊಸದುರ್ಗದ ಶ್ರೀ ಜಗದ್ಗುರು ಕುಂಚಟಿಗ ಮಹಾಸಂಸ್ಥಾನ ಮಠದ(KUNCHITIGA MAHASAMSTHANA MATHA HOSADURGA) ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ, ಬೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು.
ಕ್ಲಿಕ್ ಮಾಡಿ ಓದಿ: Reservation: ಒಳಮೀಸಲು ಜಾರಿಗೆ ಪಟ್ಟು | ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ | ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಮುಖಂಡರ ಅಸಮಧಾನ
ನಂತರ ಮಾತನಾಡಿದ ಶಾಂತವೀರ ಶ್ರೀಗಳು, ನವರಾತ್ರಿ ಪೂಜೆಗಳು ಮಾನವನಿಗೆ ನವಚೈತನ್ಯವನ್ನು ನೀಡುವ ಭಕ್ತಿ ಶಕ್ತಿಯ ಸಂಗಮವಾಗಿದ್ದಾವೆ. ನಮ್ಮಲ್ಲಿ ನೆಲಸಿರುವ ದುಷ್ಟಶಕ್ತಿಗಳ ಸಂಹಾರ ಮಾಡಿ ಶಿಷ್ಟಶಕ್ತಿಗಳ ರಕ್ಷಣೆ ಹಾಗೂ ಪ್ರಚೋದನೆ ಮಾಡಬೇಕಿದೆ.
ನವರಾತ್ರಿಯ ದಿನಗಳಲ್ಲಿ ವ್ರತಾಚರಣೆ ಆರಧಾನೆ ಅನುಷ್ಠಾನ ಕೈಕೊಳ್ಳುವ ಮಾನವನ ದೇಹ, ಮನ ಭಾವ ಶುದ್ದಿಗೊಂಡು ದುರಾಚಾರ ಸ್ಥಳದಲ್ಲಿ ಸದಾಚಾರ, ದುರ್ವತನೆ ಸ್ಥಳದಲ್ಲಿ ಸದ್ವರ್ತನೆ, ದುರ್ಭಾವ ಸ್ಥಳದಲ್ಲಿ ಸದ್ಭಾವ, ಕುಮನ ಸ್ಥಳದಲ್ಲಿ ಸುಮನ ನೆಲೆಗೊಳ್ಳುತ್ತದೆ.
ವ್ರತಾಚರಣೆ ಆರಧಾನೆ ಅನುಷ್ಠಾನ ಕೈಕೊಳ್ಳುವ ಸ್ಥಳಗಳು ಸುಕ್ಷೇತ್ರವಾಗಿ ಧರ್ಮಕ್ಷೇತ್ರವಾಗಿ, ಅವಿಮುಕ್ತ ಕ್ಷೇತ್ರವಾಗಿ ಪರಿವರ್ತನೆಗೊಳ್ಳುತ್ತದೆ. ನಮ್ಮ ದೇಶದ ಸಂಸ್ಕೃತಿ ಉಳಿವಿಗಾಗಿ ಹಿರಿಯರು ಹಾಕಿಕೊಟ್ಟ ಸಂಪ್ರಾದಯಗಳಲ್ಲಿ ವೈಜ್ಞಾನಿಕತೆ ಅರ್ಥೈಸಿಕೊಳ್ಳುತ್ತ ಮುಂದಿನ ಪೀಳಿಗೆಗೆ ಧಾರೆಯೇರಿಯಬೇಕು ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: Colours kannada: ನಟ ಹುಲಿ ಕಾರ್ತಿಕ್‍ಗೆ ಇಮ್ಮಡಿ ಶ್ರೀ ಅಭಯ | ಬಡವರ ಮಕ್ಕಳು ಬೆಳೆಯಬೇಕು ಎಂದ ಶ್ರೀಗಳು
ಬೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ದೇಶ ಆಧ್ಯಾತ್ಮ ಮಾನವೀಯತೆ ಸೌಹಾರ್ದತೆಯನ್ನು ಜಗತ್ತಿಗೆ ಸಾರಿದ ಜಾಗೃತ ದೇಶ, ನಮ್ಮ ದೇಶದ ಎಲ್ಲಾ ಧಾರ್ಮಿಕ ನಾಯಕರು ಸಮಾಜದ ಸ್ವಾಸ್ಥಕ್ಕಾಗಿ ತಮ್ಮ ಬದುಕನ್ನು ಸಲ್ಲಿಸಿ ಸಮಾಜವನ್ನು ಕಟ್ಟುವ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ.
ಅವರು ಹಾಕಿಕೊಟ್ಟು ಹೋದ ಪಥದಲ್ಲಿ ಸಾಗುವುದೇ ನಮ್ಮಗಳ ಕರ್ತವ್ಯ ಕಂಗನಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ಮಠದಿಂದ ಪ್ರತಿವರ್ಷನೂ ಧಾರ್ಮಿಕ ಕಾರ್ಯ ನಡೆದಿರುವುದು ಅಭಿನಂದನ ಕಾರ್ಯ, ಮಠಗಳೆಂದರೆ ಮಮತೆ ಕಾರುಣ್ಯ ಸಮಬಾಳು, ಕಾಯಕ ದಾಸೋಹ ಶಿವಯೋಗ ಹೀಗೆ ನಾಡಿಗೆ ತಮ್ಮದೇ ಆದ ಕೊಡುಗೆ ಕೊಟ್ಟ ಮಠಗಳ ಪರಂಪರೆಯಲ್ಲಿ ಸಾಗುತ್ತಿರುವ ಅನ್ನಪೂರ್ಣೇಶ್ವರಿ ಮಠಕ್ಕೆ ಶುಭ ಕೋರಿದರು.
ಸಮಾರಂಭದಲ್ಲಿ ದಿವ್ಯಾಧ್ಯಕ್ಷತೆಯನ್ನು ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ ವಹಿಸಿದ್ದರು.
ಕ್ಲಿಕ್ ಮಾಡಿ ಓದಿ: Durgotsava; ದುರ್ಗೋತ್ಸವ ಆಚರಿಸದಿದ್ದರೆ ಹೋರಾಟ | ಕೆ.ಟಿ.ಶಿವಕುಮಾರ್
ಯಾದವ ಮಹಾಸಂಸ್ಥಾನದ ಜಗದ್ಗುರು ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಶಿವಮೊಗ್ಗದ ನಾರಾಯಣ ಗುರು ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ, ಮೇಟಿಕುರ್ಕಿಯ ಶ್ರೀ ಸಿದ್ಧಬಸವ ಸ್ವಾಮೀಜಿ, ಸಿರಗುಪ್ಪದ ಶ್ರೀ ಬಸವ ಭೂಷಣ ಸ್ವಾಮೀಜಿ, ಮಸ್ಕಿ ಇರಕಲ್ ಮಠದ ಶ್ರೀ ಬಸವ ಪ್ರಸಾದ ಸ್ವಾಮೀಜಿ, ಬಸವಕಲ್ಯಾಣದ ಮಾತೋಶ್ರೀ ಸತ್ಯಕ್ಕ ದೇವಿ ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಸೊಗಡು ಶಿವಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.