ಮುಖ್ಯ ಸುದ್ದಿ
Colours kannada: ನಟ ಹುಲಿ ಕಾರ್ತಿಕ್‍ಗೆ ಇಮ್ಮಡಿ ಶ್ರೀ ಅಭಯ | ಬಡವರ ಮಕ್ಕಳು ಬೆಳೆಯಬೇಕು ಎಂದ ಶ್ರೀಗಳು
CHITRADURGA NEWS | 11 OCTOBER 2024
ಚಿತ್ರದುರ್ಗ: ಕಲರ್ಸ್ ಕನ್ನಡ (Colours kannada) ಖಾಸಗಿ ವಾಹಿನಿಯ ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಭೋವಿ ಸಮುದಾಯಕ್ಕೆ ನೋವಾಗುವಂತೆ ಮಾತನಾಡಲಾಗಿದೆ ಎಂದು ಆರೋಪಿಸಿ ಹಾಸ್ಯನಟ ಹುಲಿ ಕಾರ್ತಿಕ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು.
ಇದರ ಬೆನ್ನಲ್ಲೆ ನಟ ಹುಲಿ ಕಾರ್ತಿಕ್, ಶಿವು, ನಂದೀಶ್ ಚಿತ್ರದುರ್ಗದಲ್ಲಿರುವ ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಇದನ್ನೂ ಓದಿ: ಸಂಘಟಿತರಾದರೆ ಸಾಮಾಜಿಕ ನ್ಯಾಯ, ಮೀಸಲಾತಿ ಸಾಧ್ಯ | ಶಾಂತವೀರ ಶ್ರೀ
ಅಂದಿನ ನಮ್ಮ ಪ್ರಸಂಗದಲ್ಲಿ ಹೊಂಡ ಎನ್ನುವ ಧ್ವನಿವರ್ಧಕ ಅಥವಾ ಸಭಾಂಗಣದ ಅತಿಯಾದ ಶಬ್ದದಿಂದ ಅಪಾರ್ಥವಾಗಿ ಬಿಂಬಿತವಾಗಿದೆ. ನನ್ನ ಹಾಗೂ ವಾಹಿನಿಯ ಉದ್ದೇಶ ಎಲ್ಲರನ್ನೂ ನಗಿಸುವುದೇ ಹೊರತು, ಯಾರ ಮನಸ್ಸಿಗೂ ಘಾಸಿ ಮಾಡುವುದು, ನೋವು ಮಾಡುವುದಲ್ಲ.
ಸರಿಯಾಗಿ ಕೇಳದೆ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬಂತೆ ಬಿಂಬಿತವಾಗಿದೆ. ಆದರೆ, ಕಾರ್ಯಕ್ರಮದಲ್ಲಿ ಬಳಕೆಯಾದ ಶಬ್ದ ಬೇರೆಯಿದೆ ಎಂದು ವೀಡಿಯೋ, ಸ್ಕ್ರಿಪ್ಟ್‍ಗಳನ್ನು ಶ್ರೀಗಳಿಗೆ ತೋರಿಸಿದರು.
ಇದನ್ನೂ ಓದಿ: ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಮರೆಮಾಚಲು ಜಾತಿ ಗಣತಿಯ ಅಸ್ತ್ರ | ಸಿ.ಟಿ.ರವಿ
ಭೋವಿ ಸಮುದಾಯಕ್ಕೆ ನೋವಾಗುವಂತೆ ಎಂದೂ ವರ್ತಿಸಿಲ್ಲ. ಒಂದು ವೇಳೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಕಾರ್ತಿಕ್ ತಿಳಿಸಿದರು.
ನಾವೆಲ್ಲಾ ಬಡವರ ಮಕ್ಕಳು. ಈಗ ಅವಕಾಶಗಳು ಸಿಗುತ್ತಿವೆ. ಬಹಳ ಕಷ್ಟಪಟ್ಟು ಮೇಲೆ ಬರುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ದೂರು ದಾಖಲಾಗಿರುವುದು ಬಹಳ ಕಷ್ಟವಾಗಿದೆ ಎಂದು ತಮ್ಮ ಪರಿಸ್ಥಿತಿ ವಿವರಿಸಿದರು.
ಪ್ರತಿಕ್ರಿಯಿಸಿದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಡವರ ಮಕ್ಕಳು ಬೆಳೆಯಬೇಕು, ಇದಕ್ಕೆ ಯಾವುದೇ ರೀತಿಯ ಅಡ್ಡಿ ಬರಬಾರದು. ಕಲಾವಿದರಾದರಿಗೆ ಯಾವುದೇ ಜಾತಿ, ಧರ್ಮ ಇಲ್ಲ ಎಲ್ಲರನ್ನು ಸಹಾ ಒಂದೇ ರೀತಿಯಲ್ಲಿ ನೋಡಲಾಗುತ್ತದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಅಕ್ಟೋಬರ್ 10ರ ಮಾರುಕಟ್ಟೆಯಲ್ಲಿ ಹತ್ತಿ ರೇಟ್
ವಾಹಿನಿಯ ಕಾರ್ಯಕ್ರಮದಲ್ಲಿ ವಡ್ಡ ಎಂಬ ಶಬ್ದ ಬಳಕೆಯಾಗಿದೆ ಎಂದು ನಮ್ಮ ಸಮಾಜದವರು ದೂರು ನೀಡಿದ್ದಾರೆ. ಇದರಿಂದ ಮನನೊಂದ ಹುಲಿ ಕಾರ್ತಿಕ್ ಮಠಕಕೆ ಬಂದು ನಮ್ಮನ್ನು ಭೇಟಿಯಾಗಿ ನೋವು ಹಂಚಿಕೊಂಡಿದ್ದಾರೆ. ಅಂದು ನಡೆದ ವಿಚಾರವನ್ನು ವಿವರವಾಗಿ ತಿಳಿಸಿದ್ದಾರೆ. ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ ಇದನ್ನು ಇಲ್ಲಿಗೆ ಬಿಡುವುದು ಸೂಕ್ತ ಎಂದರು.
ಕಾಮಿಡಿ ಕಾರ್ಯಕ್ರಮದಲ್ಲಿ ಹೊಂಡ ಎಂಬ ಪದ ಬಳಕೆಯಾಗಿದೆ. ಆದರೆ, ಅದು ಕೇಳಿಸುವಾಗ ವಡ್ಡ ಎಂದಂತಾಗಿದೆ. ಇದನ್ನು ಖಂಡಿಸಿ ನಮ್ಮ ಶಿಷ್ಯ ವರ್ಗ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾರ್ತಿಕ್ ಆಗಮಿಸಿ ಕ್ಷಮೆಯನ್ನೂ ಕೋರಿದ್ದಾರೆ. ನಮ್ಮ ಕಾಯಕ ನಗಿಸುವುದು, ನೋಯಿಸುವುದಲ್ಲ ಎಂದಿದ್ದಾರೆ ಎಂದರು.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್‍ನ್ಯೂಸ್ | ಅ.20 ರಂದು ಬೃಹತ್ ಉದ್ಯೋಗ ಮೇಳ
ಕಾರ್ತಿಕ್ ನಿಷ್ಕಲ್ಮಷ ಹೃದಯದವರು. ಬಡತನದಿಂದ ಬಂದವರು, ಬಡವರ ಮಕ್ಕಳು ಬಳೆಯಬೇಕು, ಬಾಳಬೇಕು, ಮೆರೆಯಬೇಕು ಎನ್ನುವುದು ನಮ್ಮ ಗುರುಪೀಠದ ಆಶಯವಾಗಿದೆ. ಇಂತಹ ಪ್ರತಿಭೆಗಳಿಗೆ ನಮ್ಮ ಗುರುಪೀಠ ಪ್ರೋತ್ಸಾಹ ನೀಡುತ್ತದೆಯೇ ಹೊರತು ಚಿವುಟುವ ಕೆಲಸ ಮಾಡುವುದಿಲ್ಲ. ಅವರ ಜೊತೆಗೆ ನಮ್ಮ ಮಠ ಇದೆ ಎಂದು ಧೈರ್ಯ ತುಂಬಿದರು.
ಈ ವೇಳೆ ಹುಲಿ ಕಾರ್ತಿಕ್ ಗುರುಗಳನ್ನು ಭೇಟಿಯಾಗಿ ಮಾತನಾಡಿದ ನಂತರ ನಮ್ಮ ಮನಸ್ಸಿನಲ್ಲಿದ್ದ ನೋವು ಮಾಯವಾಗಿ ಮನಸ್ಸು ಹರುರಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒಳಮೀಸಲು ಜಾರಿಗೆ ಪಟ್ಟು | ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ | ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಮುಖಂಡರ ಅಸಮಧಾನ
ಮತ್ತೋರ್ವ ಕಲಾವಿದ ಶಿವು ಮಾತನಾಡಿ, ಗುರುಗಳು ನಮಗೆ ಅಭಯ ನೀಡಿದ್ದಾರೆ. ನಮ್ಮ ಶಿಷ್ಯರ ಕಡೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆಶೀರ್ವದಿಸಿದ್ದಾರೆ. ಮಠಕ್ಕೆ ಭೇಟಿ ನೀಡಿದಾಗ ಶ್ರೀಗಳು ಪ್ರೀತಿ ತೋರಿಸಿದ್ದಾರೆ ಎಂದು ತಿಳಿಸಿದರು.
ನಟ ಹುಲಿಕಾರ್ತಿಕ್ ಭೋವಿ ಶ್ರೀಗಳ ಜೊತೆಗಿನ ಮಾತುಕತೆ ವೀಡಿಯೋ ಇಲ್ಲಿದೆ
ಈ ವೇಳೆ ವಿವಿಧ ಮಠಾಧೀಶರು, ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ವಿ.ಎಸ್.ಹಳ್ಳಿ ಚಂದ್ರಶೇಖರ್, ರಾಘವೇಂದ್ರ ಇದ್ದರು.