CHITRADURGA NEWS | 24 MARCH 2026
ಚಿತ್ರದುರ್ಗ: ನಗರದ ವಾಸವಿ ಶಾಲೆ ಬಳಿಯಲ್ಲಿನ ತ್ಯಾಗರಾಜ ಬೀದಿಯಲ್ಲಿರುವ ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನ ಶತಮಾನ ಪೂರೈಸಿರುವುದರಿಂದ (1926-2026) ಮಾ.26 ರಿಂದ 28 ರವರೆಗೆ ಮೂರು ದಿನಗಳ ಕಾಲ ಶ್ರೀ ರಾಮೋತ್ಸವ ಸಂಭ್ರಮಾಚರಣೆ ಹಾಗೂ ಶ್ರೀ ರಾಮನವಮಿ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮೋತ್ಸವದ ಶತಮಾನೋತ್ಸವ ಸಮಿತಿ ತಿಳಿಸಿದೆ.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 24 | ಹತ್ತಿ ರೇಟ್…
ಶ್ರೀ ರಾಮೋತ್ಸವದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಅರುಣ್‌ಕುಮಾರ್ ಈ ಬಗ್ಗೆ ಮಾಹಿತಿ ನೀಡಿ ಈ ದೇವಸ್ಥಾನ ನಿರ್ಮಾಣವಾಗಿ ಇಂದಿಗೆ 100 ವರ್ಷವಾಗಿದೆ. ಈ ಹಿನ್ನಲೆಯಲ್ಲಿ 100ನೇ ವರ್ಷದ ಶ್ರೀ ರಾಮೋತ್ಸವ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ಭಜನೆ, ದಾಸಗಾನ ವೈಭವ” ಭಕ್ತಿ ಗೀತೆಗಳ ಗಾಯನ, ಹರಿಕಥಾ ಕಾರ್ಯಕ್ರಮ, “ಶ್ರೀ ಸೀತಾರಾಮಚಂದ್ರರ ಉತ್ಸವಮೂರ್ತಿಗಳ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಮಾ.26 ರ ಸಂಜೆ ಕಾರ್ಯಕ್ರಮವನ್ನು ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಉದ್ಘಾಟಿಸಲಿದ್ದು, ಪತಂಜಲಿ ಆಸ್ಪತ್ರೆಯ ಡಾ|ಎಂ.ಮುಕುಂದರಾವ್ ಭಾಗವಹಿಸಲಿದ್ದಾರೆ. ಸಂಜೆ 6 ಘಂಟೆಗೆ ಶ್ರೀ ಪಾಂಡುರಂಗ ಭಜನಾ ಮಂಡಳಿಯವರಿಂದ ಭಜನೆ 6.30ಕ್ಕೆ ಬ್ರಹ್ಮ ಚೈತನ್ಯ ಭಜನಾ ಮಂಡಳಿಯವರಿಂದ ಭಜನೆ 7 ಕ್ಕೆ ಸಾವಿರ ಹಾಡಿನ ಸರದಾರ ಡಾ. ಆರ್.ಪಿ. ಕುಲಕರ್ಣಿಯವರಿಂದ “ದಾಸಗಾನ ವೈಭವ” ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಾ. 27ರ ಸಂಜೆಯ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ನೇರವೇರಿಸಲಿದ್ದು, ಬಿಜೆಪಿ ಮುಖಂಡ ಎಂ.ಸಿ. ರಘುಚಂದನ್ ಭಾಗವಹಿಸಲಿದ್ದಾರೆ. ಸಂಜೆ 6 ಘಂಟೆಗೆ ಶ್ರೀ ಬೃಂದಾವನ ಭಜನಾ ಮಂಡಳಿಯವರಿಂದ ಭಜನೆ, 6.30ಕ್ಕೆ ಸರಸ್ವತಿ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಲಿದ್ದು, 7.30ಕ್ಕೆ ಕೀರ್ತನ ಕಲಾಸಿರಿ ಡಾ. ಬೇಲೂರು ವಸಂತಲಕ್ಷ್ಮಿ ಇವರಿಂದ “ಸೀತಾರಾಮ ಕಲ್ಯಾಣ ಹರಿಕಥಾ ಕಾರ್ಯಕ್ರಮ ನಡೆಯಲಿದೆ.
ಮಾ.28ರ ಶನಿವಾರ ಬೆಳಿಗ್ಗೆ 9.30ಕ್ಕೆ “ಶ್ರೀ ಸೀತಾರಾಮಚಂದ್ರರ ಉತ್ಸವಮೂರ್ತಿಗಳ ಮೆರವಣಿಗೆಯ ಉದ್ಘಾಟನೆಯನ್ನು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್ ನೇರವೇರಿಸಲಿದ್ದು, ಮೆರವಣಿಗೆ ದೇವಾಲಯದಿಂದ ಆರಂಭವಾಗಿ ಐಯ್ಯಣ್ಣನಪೇಟೆ, ಚಿಕ್ಕಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ದೊಡ್ಡಪೇಟೆ, ಜೈನ್ ದೇವಸ್ಥಾನ, ವಾಸವಿಸ್ಕೂಲ್ ರಸ್ತೆಯ ಮೂಲಕ ವಾಪಾಸ್ ದೇವಸ್ಥಾನ ತಲುಪಲಿದೆ. ತದ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಮಾ.26 ರಿಂದ ದೇಸಿ ತಳಿಗಳ ವೈವಿಧ್ಯತೆ ಪ್ರದರ್ಶನ
ಸಂಜೆ 6 ಗಂಟೆಗೆ ಶ್ರೀ ವಾಸವಿ ಭಜನಾ ಮಂಡಳಿಯವರಿಂದ ಭಜನೆ 6.30ಕ್ಕೆ ಶ್ರೀ ಸಪ್ತಗಿರಿ ಭಜನಾ ಮಂಡಳಿಯವರಿಂದ ಭಜನೆ 7ಕ್ಕೆ ಅಭಯ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ ಸಂಜೆ 7.30ಕ್ಕೆ ಸ್ಥಳಿಯ ಕಲಾವಿದರಾದ ಶ್ರೀ ಶಾರದ ಮೆಲೋಡೀಸ್‍ರವರಿಂದ ಶ್ರೀಕಾಂತ್ ಅವರ ನೇತೃತ್ವದಲ್ಲಿ ಭಕ್ತಿ ಗೀತೆಗಳ ಗಾಯನ, ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
