
CHITRADURGA NEWS | 15 NOVEMBER 2025
ಹೊಳಲ್ಕೆರೆ: ತಾಲೂಕಿನ ರಾಮಗಿರಿ ಗ್ರಾಮದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಗುರು ಕರಿಸಿದ್ದೇಶ್ವರ ಸ್ವಾಮಿ ಕಡೇ ಕಾರ್ತಿಕ ಲಕ್ಷ ದೀಪೋತ್ಸವವನ್ನು ಡಿ. 8 ಹಾಗೂ 9 ರಂದು ನಡೆಸಲು ಗ್ರಾಮದ ಗುರು ಹಿರಿಯರು, ದೇವಾಲಯ ಸಮಿತಿ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ | 600 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ರಾಮಗಿರಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ದೇವಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಡಿ. 6 ರಂದು ಲಕ್ಷ ದೀಪೋತ್ಸವ ಸಿದ್ದತೆ ಕೈಗೊಳ್ಳಲಾಗುವುದು 7 ರಂದು ಬೆಟ್ಟಕ್ಕೆ ಅಲಂಕಾರ ನಡೆಸುವುದು. ಡಿ. 8 ಸೋಮವಾರ ಬೆಳಿಗ್ಗೆ ಸ್ವಾಮಿಗೆ ವಿಶೇಷ ಅಲಂಕಾರ ಮಹಾ ಮಂಗಳಾರತಿ ನೆರವೇರಿಸಲು ತೀರ್ಮಾನಿಸಲಾಗಿದೆ.
ಡಿ. 8 ರಂದು ರಾತ್ರಿ ಕದಳಿ ಮಂಟಪ ಸಿದ್ಧಪಡಿಸಿ ತಡರಾತ್ರಿ ಶ್ರೀ ಕರಿಸಿದ್ದೇಶ್ವರ ಸ್ವಾಮಿ , ಶ್ರೀ ಆಂಜನೇಯ ಸ್ವಾಮಿ , ಶ್ರೀ ಕರಿಯಮ್ಮ ದೇವಿಯನ್ನು ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಕರೆತಂದು ಕದಲಿ ಮಂಟಪದಲ್ಲಿ ಕೂರಿಸಲು ತೀರ್ಮಾನಿಸಲಾಗಿದೆ.
ಡಿ. 9 ರಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದ ಕಾರ್ತಿಕೋತ್ಸವಕ್ಕೆ ಆಗಮಿಸಿದ ಭಕ್ತರು ತಮ್ಮ ಹರಕೆ ತೀರಿಸಲು ಬಾಳೆಹಣ್ಣಿನ ರಾಶಿ ಹಾಕಲು ಹಾಗೂ ವಿಶೇಷ ಪೂಜೆ ಸಲ್ಲಿಸಿ ಬಾಳೆಹಣ್ಣಿನ ರಾಶಿಯನ್ನು ಪ್ರಸಾದ ವಿತರಣೆಯಾಗಿ ನೀಡಲು ತೀರ್ಮಾನಿಸಲಾಯಿತು.
ಇದನ್ನೂ ಓದಿ: 2 ದಿನ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ಸಾಕಾಣಿಕೆ ತರಬೇತಿ
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಪೋಸ್ಟ್ ಓಂಕಾರಪ್ಪ, ಸದಸ್ಯರಾದ ಮಂತ್ರಪ್ಳರ ಕುಮಾರಣ್ಣ, ಜಾನಜ್ಜರ ರವಿಕುಮಾರ್, ಕಾಟಪ್ಪ ಯಾದವ್, ಕಾಂಪೌಂಡರ್ ರುದ್ರಸ್ವಾಮಿ, ಗ್ರಾಪಂ ಸದಸ್ಯರಾದ ಹೊದಿಗೆರೆ ರಾಜಪ್ಪ, ರವಿಕುಮಾರ್, ವಿಎಸ್ ಎಸ್ ಬಿ ಎನ್ ಅಧ್ಯಕ್ಷ ಶಿವಶಂಕರ್ ನಾಯಕ್, ಮುಖಂಡರಾದ ಕೋಳಿ ತಿಪ್ಪೇಸ್ವಾಮಿ, ಆರ್.ಗಂಗಾಧರಪ್ಪ, ಷಡಾಕ್ಷರಿ ದೇವ , ಹೆಚ್.ಆರ್.ಮಧು, ಮನ ಮೋಹನ್ ಚಾರ್, ಪಾಳೆಗಾರ್ ಕುಮಾರ್, ಆರ್.ಕೃಷ್ಣಮೂರ್ತಿ, ಭಂಡಾರಿ ಸುರೇಶ್, ಸಿ.ಪಿ. ಮರುಳಯ್ತ ಗ್ರಾಮಸ್ಥರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
