CHITRADURGA NEWS | 20 MARCH 2026
ಚಿತ್ರದುರ್ಗ: ಬಯಲು ಸೀಮೆಯ ನೊಂದ ರೈತಾಪಿ ಜನರ ದಶಕಗಳ ಹೋರಾಟವಾಗಿರುವ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಹಾಗೂ ಸಮಗ್ರ ಕೃಷಿ ಅಭಿವೃದ್ಧಿ ಅನುಷ್ಠಾನದ ಸಾಧಕ-ಬಾಧಕಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಹತ್ವದ ಮಾತುಕತೆ ನಡೆಸಲು ಸಿರಿಗೆರೆ ಬೃಹನ್ಮಠದ ಶ್ರೀಗಳು ಯುಗಾದಿ ಹಬ್ಬದಂದೇ ದೆಹಲಿಗೆ ತೆರಳಿರುವುದು ಸ್ವಾಗತಾರ್ಹ ನಡೆಯಾಗಿದೆ ಎಂದು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟಗಾರ ಆರ್.ಶೇಷಣ್ಣಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ | ದೆಹಲಿಯಲ್ಲಿಂದು ಮಹತ್ವದ ಸಭೆ | ಯುಗಾದಿ ಬಿಟ್ಟು ದೆಹಲಿಗೆ ತೆರಳಿರುವ ತರಳಬಾಳು ಶ್ರೀ
ನೀರಾವರಿ, ರೈತರ ಸಂಕಷ್ಟಗಳು ಹಾಗೂ ನೀರು-ಪೈರು-ಕೆರೆ-ಕಟ್ಟೆ-ಕಾಲುವೆಗಳ ಮಹತ್ವವನ್ನು ಆಳವಾಗಿ ಅರಿತು, ಜನರ ನಾಡಿಮಿಡಿತಕ್ಕೆ ಸದಾ ಸ್ಪಂದಿಸುವ ರಾಜ್ಯದ ಅಪರೂಪದ ಮಠಾಧೀಶರಾದ ಸಿರಿಗೆರೆಯ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಯೋಜನೆಗೆ ಇರುವ ಜ್ವಲಂತ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಕ್ತ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ನೀಡಿ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುವರೆಂಬ ದೃಢ ನಂಬಿಕೆ ನಮ್ಮ ಜಿಲ್ಲೆಯ ಜನರದ್ದಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ ಪರವಾಗಿ ಧ್ವನಿ ಎತ್ತುವವರು ಸದನದ ಒಳಗಾಗಲಿ ಅಥವಾ ಸದನದ ಹೊರಗಾಗಲೀ, ಯಾರೇ ಆದರೂ ಅವರನ್ನು ಜಿಲ್ಲೆಯ ಜನತೆ ಮನಸ್ಪೂರ್ವಕವಾಗಿ ಶ್ಲಾಘಿಸಿ ಸದಾ ಗೌರವದಿಂದ ಕಾಣುತ್ತಾರೆ.
ಇದನ್ನೂ ಓದಿ: ವದ್ದೀಕೆರೆ ಶ್ರೀ ಕಾಲಭೈರವೇಶ್ವರ ಬ್ರಹ್ಮರಥೋತ್ಸವ ಮಾ.30ಕ್ಕೆ
ಈ ಹಿನ್ನೆಲೆಯಲ್ಲಿ ಶ್ರೀಗಳ ಮಹತ್ವದ ಹೆಜ್ಜೆಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
