ಹೊಸದುರ್ಗ
ಶ್ರೀ ದಶರಥ ರಾಮೇಶ್ವರ ಸ್ವಾಮಿ | ವಿಜೃಂಭಣೆಯಿಂದ ಜರುಗಿದ ರಥೋತ್ಸವ

CHITRADURGA NEWS | 20 MARCH 2024
ಹೊಸದುರ್ಗ: ತಾಲ್ಲೂಕಿನ ಪ್ರಸಿದ್ಧ ದೊಡ್ಡ ವಜ್ರ ಪುಣ್ಯ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ದಶರಥ ರಾಮೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಇದನ್ನೂ ಓದಿ: ಸಾಲಗಾರರ ಕಾಟಕ್ಕೆ ಗೃಹಣಿ ಆತ್ಮಹತ್ಯೆ
ರಥೋತ್ಸವದ ಪೂರ್ವಭಾವಿಯಾಗಿ ಮಂಗಳವಾರ ಶ್ರೀ ವೀರಭದ್ರಸ್ವಾಮಿಗೆ ಕೆಂಡ, ದಾಸೋಹ ಸೇವೆ ನೆಡೆಯಿತು. ಸಂಜೆ ಶ್ರೀ ದಶರಥ ರಾಮೇಶ್ವರ ಸ್ವಾಮಿ, ಕಂಚೀವರದ ಸ್ವಾಮಿ, ದಸೂಡಿ ಅಂಜನೇಯ ಸ್ವಾಮಿಯವರೊಂದಿಗೆ ನೂರಾ ಒಂದು ಎಡೆ ಸೇವೆ ಸಲ್ಲಿಸಲಾಗಿತು.
ಭವ್ಯ ಮನೋಹರವಾದ ಪುಣ್ಯಕ್ಷೇತ್ರದಲ್ಲಿ, ಬೆಳಗಿನಜಾವದ ಮುಸ್ಸಂಜೆಯ ರಮಣೀಯ ನೋಟದಲ್ಲಿ, ಪ್ರಶಾಂತವಾದ ಪ್ರಕೃತಿ ಮಡಿಲಲ್ಲಿ, ಹಕ್ಕಿಗಳ ಚಿಲಿಪಿಲಿಯ ಕೂಗಿನಲ್ಲಿ, ಹಸಿರು ನಿಸರ್ಗದ ಕಾನನದಲ್ಲಿ, ಹಕ್ಕಿ-ಪಕ್ಷಿಗಳ ಕಲರವದೊಂದಿಗೆ ಕಣ್ಣು ಕುಕ್ಕುವ ಹಚ್ಚ ಹಸಿರಿನ ನೋಟದಲ್ಲಿ, ಧಾರ್ಮಿಕತೆ, ಸಾಂಸ್ಕøತಿಕ ತವರಿನಲ್ಲಿ, ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸುವ.
ಇದನ್ನೂ ಓದಿ: ವರದಕ್ಷಣೆ ಪಡೆದ ಆರೋಪ | 5 ವರ್ಷ ಜೈಲು, 4.70 ಲಕ್ಷ ದಂಡ
ಪ್ರೇಕ್ಷಣೀಯ ಪುಣ್ಯ ಕ್ಷೇತ್ರದಲ್ಲಿ, ಬುಧವಾರ ಮುಂಜಾನೆ ಬ್ರಾಹ್ಮೀ ಮಹೂರ್ತದಲ್ಲಿ ದೇವಾಲಯದಿಂದ ಶ್ರೀ ದಶರಥ ಮಹಾರಾಜರನ್ನು ರಾಜಗಾಭಿರ್ಯದಿಂದ ವಾದ್ಯ ಗೋಷ್ಠಿ ಯೊಂದಿಗೆ ಪರಿವಾರದ ದೇವರುಗಳಾದ ಶ್ರೀ ಕಂಚಿವರದರಾಜ ಸ್ವಾಮಿ ಹಾಗೂ ದಸೂಡಿ ಶ್ರೀ ಅಂಜನೇಯಸ್ವಾಮಿ ಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಅಲಂಕೃತ ರಥವನ್ನು ಏರಿ ಕುಳಿತ ನಂತರ ಕಂಚೀವರದ ಸ್ವಾಮಿ ಹಾಗೂ ಅಂಜನೇಯ ಸ್ವಾಮಿಯು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಮಸ್ಕರಿಸಿದ ನಂತರ ಉತ್ಸವಕ್ಕೆ ಚಾಲನೆ ದೊರೆಯಿತು.
ಇದನ್ನೂ ಓದಿ: ಮತದಾನ ಪ್ರಮಾಣ ಶೇ.5 ರಷ್ಟು ಹೆಚ್ಚಿಸಲು ಪಣ
ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಬೃಹತ್ ಹೂ ಮಾಲೆಗಳಿಂದ ರಥವು ಸಿಂಗಾರಗೊಂಡಿತ್ತು .ರಥೋತ್ಸವ ನಂತರ ಕಂಚೀವರದರಾಜ ಸ್ವಾಮಿಗೆ ಮುಳ್ಳು ಪಾದುಕೆ ಸೇವೆ ಜರುಗಿತು.
