ಹೊಸದುರ್ಗ
ಜಯಸುವರ್ಣಪುರಕ್ಕೆ ಡಾ.ಬಸವಕುಮಾರ ಸ್ವಾಮೀಜಿ | ಶಿವಾನುಭವ ಗೋಷ್ಠಿಯಲ್ಲಿ ಭಾಗೀ
CHITRADURGA NEWS | 09 MARCH 2025
ಹೊಸದುರ್ಗ: ತಾಲ್ಲೂಕಿನ ಜಯಸುವರ್ಣಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಶಿವಾನಭವ ಗೋಷ್ಠಿ ಹಾಗೂ ನಿರ್ಮಾಣ ಹಂತದಲ್ಲಿರುವ ಜಯಲಿಂಗೇಶ್ವರ ದೇವಸ್ಥಾನದ ಕಟ್ಟಡವನ್ನು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ವೀಕ್ಷಣೆ ಮಾಡಿದರು.
Also Read: ಭೀಕರ ಅಪಘಾತ | ಐದು ಜನ ಸ್ಥಳದಲ್ಲೇ ಸಾವು | ತಮಟಕಲ್ಲು ಬಳಿ ಘಟನೆ
ಶಿವಾನಭವ ಗೋಷ್ಠಿ ಮಾತನಾಡಿದ ಶ್ರೀಗಳು, ಸರಿಸುಮಾರು 56 ವರ್ಷಗಳ ಕಾಲ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವನ್ನು ತಮ್ಮ ಸಮಾಜ ಸೇವಾ ದೃಷ್ಟಿಯಿಂದ ನೋಡಿ, ಮಠದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಾಡನ್ನು ಸುತ್ತಿ ಮಠ ಮತ್ತು ಭಕ್ತರ ಮನಸ್ಸುಗಳನ್ನು ಕಟ್ಟುತ್ತಾ ಸಾಗಿದ ಜಯದೇವ ಜಗದ್ಗುರುಗಳವರು ಭಕ್ತಪ್ರೇಮಿಗಳು.
ಸದಾ ಸಮಾಜಮುಖಿ ಕಾರ್ಯಗಳನ್ನೇ ಮಾಡುತ್ತಾ ಸಾಗಿದ್ದಾರೆ. ಭಕ್ತರಿಂದ ಪಡೆದದ್ದನ್ನು ಭಕ್ತರಿಗಾಗಿಯೇ ಮೀಸಲಿಟ್ಟಿದ್ದರು. ಸಮಾಜದ ನೂರಾರು ಯೋಜನೆಗಳಿಗೆ ದೇಣಿಗೆ ನೀಡಿದ್ದಾರೆ. ಬಡಮಕ್ಕಳ ವಿದ್ಯಾರ್ಜನೆಗಾಗಿ ಉಚಿತ ಜಯದೇವ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ್ದು ಅಮೋಘ ಕಾರ್ಯ ಎಂದು ತಿಳಿಸಿದರು.
ಜಯದೇವ ಸ್ವಾಮಿಗಳವರು ಒಂದು ಕಡೆ ನಿಲ್ಲದೆ ಸದಾ ಸಂಚಾರಿಯಾಗಿ ಭಕ್ತರ ಸಮಸ್ಯೆಗಳನ್ನು ಆಲಿಸುತ್ತಾ, ಸಾಧ್ಯವಾದರೆ ಪರಿಹರಿಸುತ್ತಾ ನಡೆದ ಪರಿ ಅನುಪಮವಾದದ್ದು.
Also Read: ವಿಜೃಂಭಣೆಯಿಂದ ಜರುಗಿದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ
12ನೇ ಶತಮಾನದಲ್ಲಿ ಬಸವಣ್ಣನವರ ಸಮಾಜ ಸುಧಾರಣೆಯ ಕೆಲಸಗಳನ್ನು ಮೆಚ್ಚಿ ರಾಜ್ಯ, ಹೊರ ರಾಜ್ಯ, ಹೊರ ದೇಶಗಳಿಂದ ಅಮರಗಣಂಗಳು ಸೇರಿದಂತೆ, ಜಯದೇವ ಗುರುಗಳ ಸಮಾಜ ಸೇವೆಯನ್ನು ಮೆಚ್ಚಿದವರು ಅನೇಕ.
ಈ ಹಿಂದೆ ತಿರುನಾಳ್ ಪಾಳ್ಯವಾಗಿದ್ದ ಈ ಗ್ರಾಮವು ಜಯದೇವ ಗುರುಗಳ ಪಾದಸ್ಪರ್ಶದಿಂದ ಭಕ್ತರ ಅನೇಕ ಸಂಕಷ್ಟಗಳು ದೂರವಾದವು ಎಂಬ ನಂಬಿಕೆಯ ಫಲವಾಗಿ ಜಯಸುವರ್ಣಪುರವೆಂದು ಹೊಸ ನಾಮಂಕಿತ ಪಡೆದದ್ದು, ಜಯದೇವ ಜಗದ್ಗುರುಗಳ ಮೇಲಿನ ನಿಮ್ಮ ಭಕ್ತಿಯ ದ್ಯೋತಕವಾಗಿದೆ. ಅದು ಸ್ತುತ್ಯಾರ್ಹ ಕಾರ್ಯ.
ಜಯದೇವ ಗುರುಗಳ ನಂತರ ಜಯವಿಭವ ಮುರುಘರಾಜೇಂದ್ರ ಸ್ವಾಮಿಗಳು ಈ ಗ್ರಾಮಕ್ಕೆ ಆಗಮಿಸಿ ಭಕ್ತರ ಅಪೇಕ್ಷೆಯಂತೆ ಕಾಶಿಯಿಂದ ಒಂದು ಲಿಂಗವನ್ನು ತರಿಸಿ, ಪ್ರತಿಷ್ಠಾಪಿಸಿ, ಅಲ್ಲಿ ಧರ್ಮಕಾರ್ಯಗಳು ನಡೆಯುವಂತೆ ಮಾಡಿದ್ದು ಈ ಗ್ರಾಮದಲ್ಲಿ ಧರ್ಮ ಕಾರ್ಯಕ್ಕೆ ಅನುವಾಯಿತು.
Also Read: Kannada Novel: 23. ಜಂಗಮಯ್ಯರ ಗೃಹ ನಿರ್ಮಾಣ
ಅಂದಿನ ದೇವಾಲಯವು ಶಿಥಿಲಾವಸ್ಥೆಯಲ್ಲಿರುವುದನ್ನು ಕಂಡು ಮುಂದಿನ ಪೀಳಿಗೆಯಿಂದ ಧರ್ಮ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಲಿ ಎನ್ನುವ ದೃಷ್ಟಿಯಿಂದ ಭಕ್ತರಿಂದ ವಂತಿಕೆಯನ್ನು ಪಡೆದು ನೂತನ ದೇವಾಲಯವನ್ನು ಕಟ್ಟಿಸಿ, ಆ ಮೂಲಕ ಮೂರುದಿನಗಳ ದಾಸೋಹ, ಕಾಯಕ, ಶರಣ ಸಂಸ್ಕೃತಿ, ಮುರುಘಾಪರಂಪರೆಯ ಚರಿತ್ರೆಯನ್ನು ಮೆಲುಕು ಹಾಕಲು ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಮಾದರಿ ನಡೆಯಾಗಿದ್ದು, ನಿಮ್ಮ ಈ ಎಲ್ಲ ಕಾರ್ಯಕ್ಕೆ ಶ್ರೀಮಠ ಬೆಂಬಲವಾಗಿ ನಿಲ್ಲುತ್ತದೆ ಎಂದು ನುಡಿದರು.
ಈ ವೇಳೆ ಜಯಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಗೌರವಾಧ್ಯಕ್ಷ ಜೆ.ಆರ್. ಶಿವಲಿಂಗರಾಜಪ್ಪ, ಅಧ್ಯಕ್ಷ ಜೆ.ಎಚ್.ಅಶೋಕ್, ಉಪಾಧ್ಯಕ್ಷ ಜೆ.ಬಿ. ಶ್ರೀನಿವಾಸ್, ಖಜಾಂಚಿ ಜೆ.ಎಸ್.ಪರಮೇಶ್ವರಪ್ಪ, ಜೆ.ಆರ್. ಸದಾಶಿವಪ್ಪ, ಅವರುಗಳು ಗ್ರಾಮದ ಇತಿಹಾಸ, ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ನಿರ್ದೇಶಕರುಗಳು, ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
ಸೇವಾ ಸಮಿತಿಯ ಕಾರ್ಯದರ್ಶಿ ಜೆ.ಯು. ಸುಹಾಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Also Read: ಮೂವರು ಪೊಲೀಸ್ Inspector ವರ್ಗಾವಣೆ
ಶಿಬಾನುಭವ ಗೋಷ್ಠಿಗೂ ಮುನ್ನ ಗ್ರಾಮದವರು ಪಾದಯಾತ್ರೆಯ ಮೂಲಕ ದೇವಾಲಯದ ಆವರಣಕ್ಕೆ ಶ್ರೀಗಳನ್ನು ಬರಮಾಡಿಕೊಂಡರು.