Connect with us

ಭೀಕರ ಅಪಘಾತ | ಐದು ಜನ ಸ್ಥಳದಲ್ಲೇ ಸಾವು | ತಮಟಕಲ್ಲು ಬಳಿ ಘಟನೆ

Accident near thamatakallu

ಕ್ರೈಂ ಸುದ್ದಿ

ಭೀಕರ ಅಪಘಾತ | ಐದು ಜನ ಸ್ಥಳದಲ್ಲೇ ಸಾವು | ತಮಟಕಲ್ಲು ಬಳಿ ಘಟನೆ

CHITRADURGA NEWS | 09 MARCH 2025

ಚಿತ್ರದುರ್ಗ: ಮಟ ಮಟ ಮಧ್ಯಾಹ್ನ ಚಿತ್ರದುರ್ಗ ನಗರದ ಹೊರವಲಯದ ಹೊಸ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಮಟಕಲ್ಲು ಮೇಲ್ಸೇತುವೆ ಸಮೀಪ ಭೀಕರ ಅಪಘಾತ ಸಂಭವಿಸಿ ಐದು ಜನ ಮೃತಪಟ್ಟಿದ್ದಾರೆ.

ಬೆಳಗಾವಿ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಲಾರಿಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಮೂವರು ಪೊಲೀಸ್ Inspector ವರ್ಗಾವಣೆ

ಇನ್ನೋವಾ ಕಾರಿನಲ್ಲಿದ್ದ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆದ್ದಾರಿಯ ಬದಿಯಲ್ಲಿ ಲಾರಿ ನಿಂತಿದ್ದು, ವೇಗವಾಗಿ ಬಂದ ಇನ್ನೋವಾ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಅಪ್ಪಳಿಸಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ನಾಳೆಯಿಂದ ಒಂದು ವಾರ ವಿದ್ಯುತ್ ವ್ಯತ್ಯಯ

ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರು ಬಿಎಂಟಿಸಿ ನಿವೃತ್ತ ನೌಕರ ಜೆ.ಸಿ.ಶಾಂತಮೂರ್ತಿ(60), ವಿದ್ಯಾರಣ್ಯಪುರದ ಎನ್.ಎಸ್.ರುದ್ರಸ್ವಾಮಿ(69), ಶ್ರೀನಿವಾಸ್, ವಿದ್ಯಾರಣ್ಯಪುರದ ಚಂದ್ರಹಾಸ್(67) ಹಾಗೂ ಮಲ್ಲಿಕಾರ್ಜುನ(70) ಮೃತರು. 72 ವರ್ಷದ ಎನ್.ಬಿ.ಚಿದಂಬರಚಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು ಮೂಲದ ನಿವೃತ್ತಿಯಾಗಿರುವ ವಾಕಿಂಗ್ ಸ್ನೇಹಿತರಾಗಿದ್ದು, ಎಲ್ಲರೂ ಒಟ್ಟಿಗೆ ಉತ್ತರ ಕರ್ನಾಟಕ ಭಾಗದ ಗವಿಸಿದ್ದೇಶ್ವರ ಮಠ, ಅಂಜನಾಧ್ರಿ ಬೆಟ್ಟ ಮತ್ತಿತರೆ ದೇವಸ್ಥಾನಗಳಿಗೆ ತೆರಳಿ ದಾವಣಗೆರೆ ಮೂಲಕ ಬೆಂಗಳೂರಿಗೆ ವಾಪಾಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ: ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕೆ ಆಯ್ಕೆಪಟ್ಟಿ ಪ್ರಕಟ | ಆಕ್ಷೇಪಣೆ ಸಲ್ಲಿಸಲು ಮಾರ್ಚ್ 12 ಕೊನೆ ದಿನ

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‍ಪಿ ದಿನಕರ್ ಸೇರಿದಂತೆ ಗ್ರಾಮಾಂತರ ಠಾಣೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version