ಮುಖ್ಯ ಸುದ್ದಿ
ಮೂವರು ಪೊಲೀಸ್ Inspector ವರ್ಗಾವಣೆ
CHITRADURGA NEWS | 08 MARCH 2025
ಚಿತ್ರದುರ್ಗ: ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ದಾವಣಗೆರೆ ಡಿಸಿಆರ್‍ಇ ವಿಭಾಗದ ಪಿಐ ಜೆ.ಉಮೇಶ್‍ಬಾಬು ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ನಾಳೆಯಿಂದ ಒಂದು ವಾರ ವಿದ್ಯುತ್ ವ್ಯತ್ಯಯ
ಹೊಸದುರ್ಗ ಪೊಲೀಸ್ ಠಾಣೆ ಸಿಪಿಐ ಎನ್.ತಿಮ್ಮಣ್ಣ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಸಿಐಡಿ ವಿಭಾಗದಲ್ಲಿದ್ದ ಕೆ.ಟಿ.ರಮೇಶ್ ಅವರನ್ನು ನಿಯುಕ್ತಿ ಮಾಡಲಾಗಿದೆ.
ಪಿಎಸ್‍ಐ ಹುದ್ದೆಯಿಂದ ಪಿಐ ಹುದ್ದೆಗೆ ಮುಂಬಡ್ತಿ ಹೊಂದಿ ಕರ್ನಾಟಕ ಲೋಕಾಯುಕ್ತಕ್ಕೆ ನಿಯುಕ್ತಿಗೊಂಡಿದ್ದ ಕೆ.ಸತೀಶ್ ನಾಯ್ಕ್ ಅವರನ್ನು ಚಿತ್ರದುರ್ಗದ ಬೆಸ್ಕಾಂ ಜಾಗೃತ ದಳಕ್ಕೆ ವರ್ಗಾವಣೆ ಮಾಡಲಾಗಿದೆ.