CHITRADURGA NEWS | 12 MARCH 2025
ಚಿತ್ರದುರ್ಗ: ನಗರದ ಮುಖ್ಯವಾದ ಭಾಗವೇ ಆಗಿರುವ ಜಿಲ್ಲಾ ಪಂಚಾಯಿತಿ ಪಕ್ಕದಲ್ಲೇ ಹಾದು ಹೋಗುವ, ನ್ಯಾಯಾಧೀಶರ ವಸತಿ ಗೃಹಗಳಿರುವ ರಸ್ತೆ ಡಾಂಬಾರು ಕಾಣದೇ ಧೂಳುಮಯವಾಗಿದೆ.
ಮಳೆಗಾಲದಲ್ಲಂತೂ ಇಲ್ಲಿ ಓಡಾಡುವುದೇ ದುಸ್ತರ. ಈ ಸಮಸ್ಯೆ ನಗರದ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವುದೇಕೆ ಎನ್ನುವ ಪ್ರಶ್ನೆ ಮೂಡುತ್ತದೆ.
ಇದನ್ನೂ ಓದಿ: ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಪತಿರಾಯ | ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಈಗ ಬೇಸಿಗೆಯಲ್ಲಂತೂ ಈ ರಸ್ತೆಯಲ್ಲಿ ಮೂಗು, ಮುಖ ಮುಚ್ಚಿಕೊಂಡು ಓಡಾಡಬೇಕಾಗಿದೆ. ಮದುವೆ, ಕಚೇರಿ ಮತ್ತಿತರೆಡೆಗೆ ಹೊರಟು ಈ ರಸ್ತೆಯಲ್ಲಿ ಹೋದರೆ ಧೂಳುಮಯವಾಗಬೇಕಾಗುತ್ತದೆ.
ಈ ಬಗ್ಗೆ ಗಮನ ಸೆಳೆದಿರುವ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ರಸ್ತೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದು, ನಗರಸಭೆ, ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ | ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದತಿ ಮುಂದುವರಿಕೆ
ಈ ಬಗ್ಗೆ ಪತ್ರಿಕೆಗಳಲ್ಲಿ ಹಲವು ಸಲ ಬರೆದು ನಗರಸಭೆ, ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ನಗರದ ಪ್ರಮುಖ ವ್ಯಕ್ತಿಗಳು, ಶ್ರೀಮಂತರು, ಟೀಚರ್ಸ್ ಕಾಲೋನಿ ನಿವಾಸಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಹೊಸ ಹೊಸ ಬಡಾವಣೆಗಳಾಗಿವೆ. ಆದರೂ ಈ ರಸ್ತೆಗೆ ಡಾಂಬರು ಭಾಗ್ಯ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ.
ಇದೇ ರಸ್ತೆಯಲ್ಲಿ ಸರ್ಕಾರ ಕಾಲೇಜುಗಳು, ಅಮೃತ ಆಯುರ್ವೇದಿಕ್ ಕಾಲೇಜುಗಳಿವೆ. ದಿನವೂ ನೂರಾರು ವಿದ್ಯಾರ್ಥಿಗಳು ಓಡಾಡುತ್ತಾರೆ.
ಇದನ್ನೂ ಓದಿ: ಪಿಎಂಶ್ರೀ ಯೋಜನೆಯಡಿ ಜಿಲ್ಲೆಗೆ 9.50 ಕೋಟಿ ರೂ. ಅನುದಾನ | ಲೋಕಸಭೆಯ ಮಾಹಿತಿ
ವಿದ್ಯಾರ್ಥಿಗಳು, ಈ ಕೆಟ್ಟ ರಸ್ತೆಯಲ್ಲಿ, ಧೂಳು ತುಂಬಿದ ರಸ್ತೆಯಲ್ಲಿ, ಗಾಡಿಗಳನ್ನು ಚಲಾಯಿಸಿಕೊಂಡು, ಬಿಸಿಲಲ್ಲಿ ನಡೆದು ಹೋಗುವುದನ್ನು ನೋಡಿದರೆ ಪಾಪ ಎನ್ನಿಸುತ್ತದೆ ಎಂದು ಎಚ್.ಕೆ.ಎಸ್.ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಂತು ಕೆಸರು ತುಂಬಿ, ಗದ್ದೆಯಾಗುವ ಈ ರಸ್ತೆಯಲ್ಲಿ ಜನ ಬಿದ್ದು ಎದ್ದು ಹೋಗಬೇಕಾಗುತ್ತದೆ.
ನ್ಯಾಯಾಧೀಶರ ವಸತಿಗೃಹಗಳು ಇಲ್ಲೇ ಇದ್ದು, ನ್ಯಾಯಾಧೀಶರುಗಳ ಕಾರುಗಳು ಸಂಚಾರ ಮಾಡುವುದು ಗೊತ್ತಿದ್ದರೂ ನಗರಸಭೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ.
ಇದನ್ನೂ ಓದಿ: ಉಚಿತ Mo-jo-Kit | ಪತ್ರಕರ್ತರಿಂದ ಅರ್ಜಿ ಆಹ್ವಾನ
ಕನಿಷ್ಠ ಪಕ್ಷ ನ್ಯಾಯಾಧೀಶರು ಓಡಾಡುವ ರಸ್ತೆಗಳನ್ನೂ ಸರಿ ಮಾಡದಿದ್ದರೆ ಹೇಗೆ ಎನ್ನುವ ಪ್ರಶ್ನೆ ನಗರದ ನಾಗರೀಕರಲ್ಲಿ ಮನೆ ಮಾಡಿದೆ.
ಇಲ್ಲಿ ಉತ್ತಮ ರಸ್ತೆ ನಿರ್ಮಾಣವಾದರೆ ನೂರಾರು ವಿದ್ಯಾರ್ಥಿಗಳು, ನ್ಯಾಯಾಧೀಶರು, ಟೀಚರ್ಸ್ ಕಾಲೋನಿ, ನೀಲಾದ್ರಿ ಬಡಾವಣೆಯವರೆಗೂ ಹಬ್ಬಿರುವ ವಸತಿಗೃಹಗಳ ನಿವಾಸಿಗಳು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಚಿತ್ರದುರ್ಗದ ಅಭಿವೃದ್ಧಿ ಎಂದರೇ ಕೇವಲ ಮುಖ್ಯ ರಸ್ತೆಯ ಅಭಿವೃದ್ಧಿಯಲ್ಲ. ನಗರದ ಒಳಗಿನ ಮುಖ್ಯ ರಸ್ತೆಗಳನ್ನೂ ಅಭಿವೃದ್ಧಿಪಡಿಸಬೇಕು.
ಇದನ್ನೂ ಓದಿ: ಹಕ್ಕಿ ಜ್ವರ ಭೀತಿ | ಮುನ್ನೆಚ್ಚರಿಕೆ ಕ್ರಮಕ್ಕೆ ADC ಸೂಚನೆ
ಟೀಚರ್ಸ್ ಕಾಲೋನಿ, ನೀಲಾದ್ರಿ ನಿವಾಸಿಗಳು ಕಟ್ಟುವ ಕಂದಾಯ ಹಣದಲ್ಲಾದರೂ ಸ್ವಲ್ಪ ಹಣ ಖರ್ಚು ಮಾಡಿ, ಇವರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕಾಗಿದೆ.