ಮುಖ್ಯ ಸುದ್ದಿ
ಪಿಎಂಶ್ರೀ ಯೋಜನೆಯಡಿ ಜಿಲ್ಲೆಗೆ 9.50 ಕೋಟಿ ರೂ. ಅನುದಾನ | ಲೋಕಸಭೆಯ ಮಾಹಿತಿ
CHITRADURGA NEWS | 11 MARCH 2025
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಲು ಪಿ.ಎಂ.ಶ್ರೀ ಯೋಜನೆಯಡಿ 2023-24 ಹಾಗೂ 2024-25 ನೇ ಸಾಲಿಗೆ ರೂ.9.50 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಲೋಕಸಭೆ ಅಧಿವೇಶನದಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಕೇಳಿದ ಪ್ರಶ್ನೆಗೆ ಕೆಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌದರಿ ಉತ್ತರ ನೀಡಿದ್ದಾರೆ.
Also Read: ಉಚಿತ Mo-jo-Kit | ಪತ್ರಕರ್ತರಿಂದ ಅರ್ಜಿ ಆಹ್ವಾನ
ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಪಿ.ಎಂ.ಶ್ರೀ ಯೋಜನೆಯಡಿ ಎಷ್ಟು ಅನುದಾನ ಬಿಡುಗಡೆಯಾಗಿದೆ ? ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ವಿವರ ಕೊಡುವಂತೆ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಕೇಳಿದ್ದರು.
ನೂತನ ಸಂಸತ್ ಭವನದಲ್ಲಿ ಸೋಮವಾರ ಲೋಕಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಗೋವಿಂದ ಎಂ.ಕಾರಜೋಳ
ಸರ್ಕಾರಿ ಶಾಲೆಗಳ ಮೂಲ ಸೌಲಭ್ಯಗಳನ್ನು ಉನ್ನತೀಕರಿಸಲು ಹಾಗೂ ಸರ್ಕಾರಿ ಶಾಲೆಗಳು ವಿಜ್ಞಾನ ಪ್ರಯೋಗಾಲಯಗಳನ್ನು ಹೊಂದಲು, ಸ್ಮಾರ್ಟ್ ಶಾಲೆಗಳಾಗಿ ಮಾರ್ಪಾಡು ಮಾಡಲು, ಗ್ರಂಥಾಲಯ, ಪೀಠೋಪಕರಣಗಳ ಅಳವಡಿಕೆ, ಆಟದ ಮೈದಾನದ ಅಭಿವೃದ್ದಿ ಡಿಜಿಟಲ್ ಕಲಿಕಾ ಸಾಮಗ್ರಿಗಳ ಅಳವಡಿಕೆ, ಪರಿಸರ ಸ್ನೇಹಿ ಶಾಲೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮೆಡಿಸಿನಲ್ ಗಾರ್ಡನ್‌ಗಳ ನಿರ್ಮಾಣದಂತಹ ಅವಕಾಶಗಳು ಪಿ.ಎಂ.ಶ್ರೀ ಶಾಲೆ ಯೋಜನೆಯಡಿ ಸೇರಿವೆ.
ದಿಜಿಟಲ್ ಶಿಕ್ಷಣ, ನಾಯಕತ್ವ ಕೌಶಲ್ಯಗಳು, ಮತ್ತು ಏಕಭಾರತ ಶ್ರೇಷ್ಠ ಭಾರತ, ಹೆರಿಟೇಜ್ ನಡಿಗೆಮ ಕಲಿಕಾ ಹಬ್ಬ, ಕಲೋತ್ಸವ, ಸಾಂಸ್ಕೃತಿಕ ನಿನಾದದಂತಹ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಪಿ.ಎಂ.ಶ್ರೀ ಯೋಜನೆಯು ಗಮನ ಹರಿಸುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.
Also Read: ಹಕ್ಕಿ ಜ್ವರ ಭೀತಿ | ಮುನ್ನೆಚ್ಚರಿಕೆ ಕ್ರಮಕ್ಕೆ ADC ಸೂಚನೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭರಮಸಾಗರ, ಕೊಂಡ್ಲಹಳ್ಳಿ, ಕುರುಬರಹಳ್ಳಿ, ಕವಾಡಿಗರಹಟ್ಟಿ, ಚಳ್ಳಕೆರೆ, ಕಾಮಸಮುದ್ರ, ಹೊಳಲ್ಕೆರೆ, ಹೆಚ್,ಡಿ,ಪುರ, ಯಲ್ಲಾಭೋವಿಹಟ್ಟಿ, ಮೊಳಕಾಲ್ಮೂರು, ಕೋನಾಪುರ, ಸರ್ಕಾರಿ ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಸಚಿವರು ತಿಳಿಸಿದ್ದಾರೆ.