CHITRADURGA NEWS | 30 OCTOBER 2026
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿಯ ಸಂಭ್ರಮ ಡಬಲ್ ಆಗಿದೆ. ಜಿಲ್ಲೆಯ ಮೂಲದ ಇಬ್ಬರು ಸಾಧಕರನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಯ ಪಾಲಿಗೆ ಅಭಿಮಾನದ ಸಂಗತಿಯಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 30 | ಮೆಕ್ಕೆಜೋಳ, ಶೇಂಗಾ ರೇಟ್….
ಚಿತ್ರದುರ್ಗ ಮೂಲದ ಹಿರಿಯ ಪತ್ರಕರ್ತ ಡಿ.ಉಮಾಪತಿ ಹಾಗೂ ಹಿರಿಯೂರು ತಾಲೂಕು ಹರಿಯಬ್ಬೆ ಮೂಲದ ಜಿ.ಡಿ.ತಿಮ್ಮಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ ಹಾಗೂ ಅಪಾರ ಸೇವೆಯನ್ನು ಗುರುತಿಸಿ, ಚಿತ್ರದುರ್ಗ ಮೂಲದ ಹಿರಿಯ ಪತ್ರಕರ್ತರಾದ ಡಿ. ಉಮಾಪತಿ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ.
ಚಿತ್ರದುರ್ಗದ ಡಿ.ಉಮಾಪತಿ ಅವರು ದಿ. ಕೆ.ದಾಸಪ್ಪ ಹಾಗೂ ದಿ.ಹನುಮಮ್ಮ ದಂಪತಿಯ ಪುತ್ರ. ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಇವರು, ಪತ್ರಿಕೋದ್ಯಮದತ್ತ ಆಕರ್ಷಿತರಾದರು.
ಇದನ್ನೂ ಓದಿ: ಅಲೆಮಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಖ್ಯಾತ ಪತ್ರಕರ್ತ ಖಾದ್ರಿ ಶ್ಯಾಮಣ್ಣನವರ ಮಾರ್ಗದರ್ಶನದಲ್ಲಿ ‘ಕನ್ನಡ ಪ್ರಭ’ ಪತ್ರಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಪತಿ ಅವರು, ಅತ್ಯುತ್ತಮ ವರದಿಗಾರಿಕೆ ಹಾಗೂ ಅಂಕಣ ಬರಹಗಳ ಮೂಲಕ ಗುರುತಿಸಿಕೊಂಡರು.
ತದನಂತರ ‘ವಿಜಯ ಕರ್ನಾಟಕ’ ಹಾಗೂ ‘ಪ್ರಜಾವಾಣಿ’ ಪತ್ರಿಕೆಗಳಲ್ಲಿ ಹಲವು ದಶಕಗಳ ಕಾಲ ದೆಹಲಿ ಮೂಲದ ವಿಶೇಷ ಪ್ರತಿನಿಧಿಯಾಗಿ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಕುರಿತು ಪ್ರಭಾವಿ ವಿಶ್ಲೇಷಣೆಗಳನ್ನು ನೀಡಿದ್ದಾರೆ. ಪ್ರಸ್ತುತ ಇವರು ‘ಈ ದಿನ.ಕಾಮ್’ ಜಾಲತಾಣದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಂಗಭೂಮಿಯಿಂದ ಜಿ.ಡಿ.ತಿಮ್ಮಯ್ಯಗೆ ರಾಜ್ಯೋತ್ಸವ ಪ್ರಶಸ್ತಿ:
ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪುರಸ್ಕಾರ ಲಭಿಸಿದ್ದು, ಹಿರಿಯೂರು ತಾಲೂಕು ಹರಿಯಬ್ಬೇ ೮೭ ವರ್ಷದ ಜಿ.ಡಿ.ತಿಮ್ಮಯ್ಯ ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಲೋಯರ್ ಸೆಕೆಂಡರಿ ಶಿಕ್ಷಣ ಪಡೆದಿರುವ ತಿಮ್ಮಯ್ಯ ಅಭಿನಯ, ನಾಟಕಗಳ ನಿರ್ದೇಶನ, ಜಾನಪದ ಗೀತೆಗಳ ಗಾಯನ, ಹಾರ್ಮೋನಿಯಂ ವಾದನ ಸೇರಿದಂತೆ ರಂಗಭೂಮಿಗೆ ಸಂಬಂಧಿಸಿದ ಹಲವು ಕ್ಷೇತ್ರಗಳಲ್ಲಿ ಕೈ ಆಡಿಸಿ ಸೈ ಅನ್ನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗುಳೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಭಾಗದಲ್ಲೇ ಉದ್ಯೋಗಕ್ಕೆ ಆದ್ಯತೆ ನೀಡಿ | ಸಿಇಒ ಡಾ.ಆಕಾಶ್
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಸಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ತಿಮ್ಮಯ್ಯ ಅವರನ್ನು ಹರಸಿ ಬಂದಿದ್ದು, ಈಗ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಅವರ ಮುಡಿಗೇರಿದೆ.
ಕುರುಕ್ಷೇತ್ರ, ಶ್ರೀಗುರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ನಾಟಕ, ಆಶಾ ಲತಾ, ರಾಜವೀರ ಮದಕರಿ ನಾಯಕ, ಭಕ್ತ ಸುಧನ್ವ, ಆದರ್ಶ ಪ್ರೇಮ, ಶ್ರೀ ದೇವಿ ಮಹಾತ್ಮೆ ಸೇರಿದಂತೆ ಹಲವು ಪೌರಾಣಿಕ, ಸಾಮಾಜಿಕ, ಭಕ್ತಿ ಪ್ರಧಾನ ನಾಟಕಗಳಿಗೆ ನಿರ್ದೇಶನ ಮಾಡಿದ್ದು, ಕೊಳಾಳು ಶ್ರೀ ಕೆಂಚಾವಧೂತರ ಧ್ವನಿಸುರುಳಿಗೆ ಸಾಹಿತ್ಯವನ್ನೂ ರಚನೆ ಮಾಡಿದ ಹೆಗ್ಗಳಿಗೆ ಜಿ.ಡಿ.ತಿಮ್ಮಯ್ಯ ಅವರದ್ದು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

