
CHITRADURGA NEWS | 06 JULY 2026
ಚಿತ್ರದುರ್ಗ: 2026-27ನೇ ಸಾಲಿಗೆ ಜಿಲ್ಲೆಯ ವಿವಿಧ ನಗರ ಪ್ರದೇಶಗಳ ಸಮಸ್ಯಾತ್ಮಕ ವಾರ್ಡ್‍ಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ಕಾರ್ಯವನ್ನು ನಡೆಸಲು ಅನುಷ್ಟಾನ ಮಾರ್ಗಸೂಚಿ ಪ್ರಕಾರ ಕೇವಲ 100 ದಿನಗಳ ಅವಧಿಗೆ ಮಾತ್ರ ತಾತ್ಕಾಲಿಕವಾಗಿ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು. ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 06 | ಮೆಕ್ಕೆಜೋಳ, ರಾಗಿ ರೇಟ್…
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರ-10, ಚಳ್ಳಕೆರೆ ನಗರ-5, ಹಿರಿಯೂರು ನಗರ-5, ಹೊಸದುರ್ಗ ನಗರ-5, ಹೊಳಲ್ಕೆರೆ ನಗರ-5 ರಂತೆ ನಗರ ಸ್ವಯಂ ಸೇವಕರು ನಗರ ಪ್ರದೇಶಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆಯನ್ನು ನಡೆಸಲು, ಪ್ರತಿದಿನ ಕಡ್ಡಾಯವಾಗಿ 100 ಮನೆಗಳಿಗೆ ಭೇಟಿ ನೀಡಿ, ಒಳಾಂಗಣ ಮತ್ತು ಹೊರಾಂಗಣದ ಕೃತಕ ನೀರಿನ ಸಂಗ್ರಹಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆಗೆ ನಡೆಸಲು ದಿನ ಒಂದಕ್ಕೆ ರೂ.400/-ಗಳಂತೆ ಆಯ್ಕೆಗೊಂಡ ಸೇವಕರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಲಾಗುವುದು.
ಈ ಸಮೀಕ್ಷೆಗೆ ಸೇರ ಬಯಸುವವರು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಆಗಿರಬೇಕು. ತಮ್ಮ ಸ್ವ-ವಿವರಗಳೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಬ್ಯಾಂಕ್ ಪಾಸ್ ಪುಸ್ತಕದ ಮೊದಲನೇ ಪುಟ ಜೆರಾಕ್ಸ್, ಮತ್ತು ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಗಳೊಂದಿಗೆ ಇದೇ ಜುಲೈ.14ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ ಚಿತ್ರದುರ್ಗ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾಗಳ ಕಚೇರಿ ಆವರಣದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆಗೆ ಖುದ್ದು ಹಾಜರಾಗಬೇಕು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ 2028 ವೇಳೆಗೆ ಸಿವಿಲ್ ಕಾಮಗಾರಿ ಪೂರ್ಣ | ಸಚಿವ ರಾಮಲಿಂಗಾರೆಡ್ಡಿ
ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡುವುದಿಲ್ಲ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ರೋಗವಾಹಕಗಳ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

