
CHITRADURGA NEWS | 26 JULY 2024
ಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿಯ ಚಿತ್ರದುರ್ಗ ನಿವಾಸಕ್ಕೆ ಶುಕ್ರವಾರ ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಕಾಲಿಗೆ ನಮಸ್ಕರಿಸಿದ ವಿನೋದ್ ರಾಜ್ ಅವರು ರೇಣುಕಾಸ್ವಾಮಿ ಪತ್ನಿಗೆ ತನ್ನ ತಾಯಿ ಹಿರಿಯ ನಟಿ ಲೀಲಾವತಿ ಹೆಸರಿನಲ್ಲಿ ₹ 1 ಲಕ್ಷ ಆರ್ಥಿಕ ನೆರವು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನೋದ್ ರಾಜ್, ‘ರೇಣುಕಾ ಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಮನೆಗೆ ಆಧಾರವಾಗಿದ್ದ ಮಗನ ಕಳೆದುಕೊಂಡು ನೋವಿನಲ್ಲಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಒಂದು ಜೀವ ತೆಗೆಯಲು ಯಾರಿಗೂ ಹಕ್ಕು ಇಲ್ಲ. ಮಾನವೀಯತೆ ಎಲ್ಲಿ ಹೋಗಿದೆ ಅನ್ನೋದು ಪ್ರಶ್ನೆ’ ಎಂದರು.
‘ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಈ ಕಾರಣಕ್ಕೆ ಕಲಾವಿದರು ಒಳ್ಳೆಯದನ್ನೇ ಜನರಿಗೆ ಕೊಡುವ ಕೆಲಸ ಮಾಡಬೇಕು. ನಾವು ಏನು ಮಾಡಿದರು ಜನ ನೋಡುತ್ತಾರೆ. ನಾವು ವಿವೇಕದಿಂದ ಮಾತಾಡಬೇಕು, ಒಳ್ಳೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಇದನ್ನೂ ಓದಿ: ನಟ ದರ್ಶನ್ ಮನೆಗೆ ಬರೋ ವಿಚಾರ | ರೇಣುಕಾಸ್ವಾಮಿ ತಂದೆ ಫಸ್ಟ್ ರಿಯಾಕ್ಷನ್
‘ನಮ್ಮ ತನ ಕಳೆದುಕೊಂಡಾಗ ಇಂತ ಕೆಲಸಗಳು ಆಗುತ್ತವೆ. ಆದಷ್ಟು ನಾವು ಸಮಾಜದಲ್ಲಿ ಇದ್ದೇವೆ ಎಂದು ಬದುಕಬೇಕು. ಜನಗಳ ಮಧ್ಯೆ ಬದುಕುವುದು ಹೇಗೆ ಎಂಬುದನ್ನು ಕಲಾವಿದರು ತಿಳಿಯಬೇಕು. ಈ ವಿಚಾರದಲ್ಲಿ ಹಿಂದಿನ ತಲೆಮಾರಿನ ನಟರನ್ನು ನೋಡಿ ನಾವು ಕಲಿಬೇಕು. ಮಾಧ್ಯಮಗಳು ತಿದ್ದಿ ಬುದ್ಧಿ ಹೇಳುವ ಕೆಲಸ ಮಾಡುತ್ತಿವೆ. ಮಾಧ್ಯಮಗಳು ಯಾರಿಗೂ ಶತ್ರು ಅಲ್ಲ’ ಎಂದರು.

‘ಜೈಲಿನಲ್ಲಿ ದರ್ಶನ್ ಅವರ ಜತೆ ಹೆಚ್ಚಾಗಿ ಮಾತಾಡಲು ಅವಕಾಶ ಕೊಡಲಿಲ್ಲ. ಸಂಕಟ ವ್ಯಕ್ತಪಡಿಸಿದರು ಅಷ್ಟೇ ಇನ್ನೇನು ಮಾತಾಡಿಲ್ಲ. ತಬ್ಬಿಕೊಂಡು ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದರು. ನನ್ನ ನೋಡಿ ಭಾವುಕರಾಗಿ ಕಣ್ಣೀರು ಹಾಕಿದರು. ದರ್ಶನ್ ಒಂದು ರೀತಿಯ ನೋವು, ಆದ್ರೆ ಇವ್ರ ಕುಟುಂಬದವರದ್ದು ಭಯಂಕರ ನೋವು. ಮನೆಯಲ್ಲಿನ ಕಷ್ಟಗಳನ್ನು ನೋಡಿ ಕಣ್ಣೀರು ಬಂತು ನನಗೆ’ ಎಂದು ಭಾವುಕರಾದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
