CHITRADURGA NEWS | 13 MAY 2026
ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಚುನಾವಣಾ ಮತದಾನಕ್ಕೆ ಪ್ರತ್ಯೇಕ ಬೂತ್ ಸ್ಥಾಪಿಸಲು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಇದನ್ನೂ ಓದಿ: ರುಡ್‍ಸೆಟ್ ಸಂಸ್ಥೆಯಿಂದ ಸ್ವಯಂ ಉದ್ಯೋಗ ತರಬೇತಿ
ಬಿ.ದುರ್ಗ ಹೋಬಳಿಗೆ ಸೇರಿದ ಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಲಂಬಾಣಿ ಸಮುದಾಯದವರೇ ಹೆಚ್ಚಾಗಿದ್ದು, 100 – 120 ಮನೆಗಳಿದ್ದು, ೫೦೦ – 800 ರಷ್ಟು ಜನಸಂಖ್ಯೆಯಿದೆ. ತಾಂಡದಲ್ಲಿ ಪ್ರಾಥಮಿಕ ಶಾಲೆಯಿರುವುದರಿಂದ ಮಜುರೆ ಗ್ರಾಮವಾಗಿ ಪರಿಗಣಿಸಲಾಗಿದ್ದು, ಜನಸಂಖ್ಯೆ ಮತ್ತು ಮನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಗಂಜಿಗಟ್ಟೆ ಲಂಬಾಣಿ ತಾಂಡವನ್ನು ಕಂದಾಯ ಗ್ರಾಮವಾಗಿ ಪರಿಗಣಿಸಿ ಪ್ರತ್ಯೇಕ ಮತದಾನದ ಬೂತ್ ಸ್ಥಾಪಿಸುವಂತೆ ಒತ್ತಾಯಿಸಿದರು.
ಗಂಜಿಗಟ್ಟೆ ಲಂಬಾಣಿಹಟ್ಟಿ ಕುಗ್ರಾಮವಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಈ ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ನಾಗರೀಕ ಮೂಲಭೂತ ಸೌಲಭ್ಯಗಳಿಂದ ದೂರ ಉಳಿದಿರುವ ಲಂಬಾಣಿಹಟ್ಟಿ ಗಣಿಬಾಧಿತ ಪ್ರದೇಶವಾಗಿದ್ದು, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಪ್ರತ್ಯೇಕ ಮತದಾನದ ಬೂತ್ ಸ್ಥಾಪಿಸಿ ಗಣಿಬಾಧಿತ ಪ್ರದೇಶಕ್ಕೆ ಒಳಪಡಿಸುವಂತೆ ಗಣಿಬಾಧಿತ ಸಮಿತಿ ಸಂಸ್ಥಾಪಕ ರಮೇಶ್ ಬಿ.ದುರ್ಗ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ 13 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್ ಎಷ್ಟಿದೆ?
ಪ್ರತಿಭಟನೆಯಲ್ಲಿ ರಮೇಶ್‍ನಾಯ್ಕ, ಗೋವರ್ಧನ್, ವೆಂಕಟೇಶ್, ಜಿ.ಸಿ.ತಿಪ್ಪೇಸ್ವಾಮಿ, ರಘು, ಉಮೇಶ್, ಶಿವನಾಯ್ಕ, ಯೋಗೇಶ್, ಕರ್ನಾಟಕ ನರೇನಹಳ್ಳಿ ಅರುಣ್‍ಕುಮಾರ್, ತಿಪ್ಪೇಸ್ವಾಮಿ, ಶಿವಕುಮಾರ್, ಕೃಷ್ಣನಾಯ್ಕ, ಮಂಜುಳಬಾಯಿ, ಕರಿಬಸವ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
