
CHITRADURGA NEWS | 28 October 2024
ಚಿತ್ರದುರ್ಗ: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ ಚಿತ್ರದುರ್ಗದಲ್ಲಿ ಕೇಬಲ್ ಡಕ್ಟ್ ಮತ್ತು ಕೇಬಲ್ ಮರು ವ್ಯವಸ್ಥೆಯ ರಚನೆ ಕಾರ್ಯ, 66/11 ಕೆ.ವಿ ಪಂಡರಹಳ್ಳಿ ವಿ.ವಿ ಕೇಂದ್ರದಲ್ಲಿ ಕಂಡಕ್ಟರ್ ಬದಲಿ ಕೆಲಸ, 220/66/11 ಕೆ.ವಿ ಚಿತ್ರದುರ್ಗದಲ್ಲಿ 220 ಕೆ.ವಿ ಬಸ್ ಹತ್ತಿರ ಹಾಟ್ ಸ್ಪಾಟ್ ವೀಕ್ಷಣೆಯ ಕಾರ್ಯಕ್ಕಾಗಿ ವಿ.ವಿ ಕೇಂದ್ರಗಳಿಗೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ(Power Cut)ವಾಗಲಿದೆ.
ಕ್ಲಿಕ್ ಮಾಡಿ ಓದಿ: APMC; ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಧಾರಣೆ ಎಷ್ಟಿದೆ?
ವಿ.ವಿ ಕೇಂದ್ರ ಮತ್ತು ವಿ.ವಿ ಕೇಂದ್ರದಿಂದ ಹೊರ ಹೊಮ್ಮುವ 66/11 ಕೆ.ವಿ ಮಾರ್ಗಗಳಾದ ಚಿತ್ರದುರ್ಗ, ಪಂಡರಹಳ್ಳಿ, ಹಿರೆಗುಂಟನೂರು, ವಿಜಾಪುರ, ಭರಮಸಾಗರ, ಸಿರಿಗೆರೆ, ಮಾದನಾಯಕನಹಳ್ಳಿ, ತುರುವನೂರು ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಆಡಚಣೆಯಾಗುವ ಪ್ರದೇಶಗಳು :
ಚಿತ್ರದುರ್ಗ ನಗರ, ಕೆಳಕೋಟೆ, ಬ್ಯಾಂಕ್ ಕಾಲೋನಿ, ಗೋನೂರು, ಬೆಳಘಟ್ಟ, ಜಿ.ಆರ್ ಹಳ್ಳಿ, ವಿದ್ಯಾನಗರ, ಸೀಬಾರ, ಸಿ.ಜಿ.ಹಳ್ಳಿ, ಜೆ.ಸಿ.ಆರ್ ಬಡಾವಣೆ, ಚಂದ್ರವಳ್ಳಿ, ಪಿ.ಕೆ.ಹಳ್ಳಿ, ಮಿಲ್ಫ್ ಏರಿಯಾ, ಕೆ.ಕ್ಯೂ.ಎಸ್.ಎಸ್.ಬಿ, ಯೂನಿವರ್ಸಿಟಿ, ಕಾಪರ್ ಮೈನ್, ಕ್ಯಾದಿಗೆರೆ, ಜೆ.ಎನ್.ಕೋಟೆ, ಕಸವರಹಟ್ಟಿ, ಪಲ್ಲವಗೆರೆ, ಇಂಡಸ್ಟ್ರಿಯಲ್ ಏರಿಯಾ, ಕೋಟೆ, ಜಿಲ್ಲಾ ಪಂಚಾಯತ್, ಸಜ್ಜನಕೆರೆ, ದಂಡಿನಕುರುಬರಹಟ್ಟಿ, ಕೆನ್ನೆಡಲು ,ಅಗ್ನಿಹಾಳು, ಹುಲ್ಲೂರು, ಪಂಡರಹಳ್ಳಿ, ಜಾನುಕೊಂಡ, ಸಿದ್ದಾಪುರ, ಗೊಡಬನಾಳು, ಸೊಂಡೆಕೊಳ, ಸೋಲ್ಲಾಪುರ, ಕುರುಬರಹಳ್ಳಿ, ಬೆಟ್ಟದನಾಗೇನಹಳ್ಳಿ, ಮಹದೇವನಕಟ್ಟೆ, ಸಿಂಗಾಪುರ, ಕಕ್ಕೆರು, ಹಿರೆಗುಂಟನೂರು, ಭೀಮಸಮುದ್ರ, ವಿಜಾಪುರ, ಭರಮಸಾಗರ, ಸಿರಿಗೆರೆ, ಮಾದನಾಯಕನಹಳ್ಳಿ, ತುರುವನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳು ವಿದ್ಯುತ್ ವ್ಯತ್ಯಯವಾಗಲಿದೆ.
ಕ್ಲಿಕ್ ಮಾಡಿ ಓದಿ: Dam: ವಿವಿ ಸಾಗರ ಜಲಾಶಯ ಬಹುತೇಕ ಭರ್ತಿ | ಕೋಡಿಯಲ್ಲಿ ಜಮಾವಣೆಯಾದ ನೀರು
ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆವಿಕಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
