
CHITRADURGA NEWS | 26 FEBRUARY 2026
ಚಿತ್ರದುರ್ಗ: ಫೆಬ್ರವರಿ 28 ರ ಸಂಜೆಯ ಆಕಾಶದಲ್ಲಿ ಚಮತ್ಕಾರ ಸಂಭವಿಸಲಿದೆ. ಆ ದಿನದಂದು ಗ್ರಹಗಳ ಪರೇಡ್ ಅಂದರೆ ಒಂದೇ ಸಾಲಿನಲ್ಲಿ 6 ಗ್ರಹಗಳನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್. ಟಿ.ಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಎರಡು ದಿನ ಚಿತ್ರದುರ್ಗಕ್ಕೆ ನೀರು ಸ್ಥಗಿತ | ಸೂಳೆಕೆರೆ ಮುಖ್ಯ ಕಾಲುವೆ ಕಾಮಗಾರಿ ಹಿನ್ನೆಲೆ
ಅಂದು ಪಶ್ಚಿಮ ದಿಗಂತದ ಕಡೆ ಕಣ್ಣು ಹಾಯಿಸಿದರೆ, ದಿಗಂತದಲ್ಲಿ ಬುಧ, ಹೊಳೆಯುವ ಶುಕ್ರ, ಕೆಂಪುಬಣ್ಣದ ಶನಿಗ್ರಹ, ತುಸು ಎತ್ತರದಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಗುರುಗ್ರಹಗಳನ್ನು ನೋಡಬಹುದಾಗಿದೆ.
ಈ ಅಪರೂಪದ ಜೋಡಣೆಯು ಬರಿಗಣ್ಣಿಗೆ ಒಂದು ರೇಖೆಯಂತೆ ಕಂಡರೂ, ವಾಸವದಲ್ಲಿ ಗ್ರಹಗಳು ಬಾಹ್ಯಾಕಾಶದಲ್ಲಿ ತಮ್ಮದೇ ಆದ ಕಕ್ಷೆಗಳಲ್ಲಿರುತ್ತವೆ. ಈ ಘಟನೆಯನ್ನು ಸಂಜೆ 6.30 ರಿಂದ 8 ಗಂಟೆಯವರೆಗೂ ಅರ್ಧ ಗಂಟೆಗಳ ಕಾಲ ನೋಡಬಹುದಾಗಿದೆ.
ಇದನ್ನೂ ಓದಿ: ಹೊಳಲ್ಕೆರೆ | ನ್ಯಾಯಾಲಯ ಆವರಣದಲ್ಲಿ ಕ್ಯಾಂಟೀನ್ ನಡೆಸಲು ದರಪಟ್ಟಿ ಆಹ್ವಾನ
ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳನ್ನು ಬೈನಾಕ್ಯುಲರ್ ಇಲ್ಲವೇ ಉತ್ತಮ ದೂರದರ್ಶಕಗಳ ಮೂಲಕವೇ ನೋಡಬೇಕು. ಮತ್ತೆ ಈ ಘಟನೆ ನೋಡಲು 2040 ರ ತನಕ ಕಾಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

