CHITRADURGA NEWS | 12 February 2026
ಚಿತ್ರದುರ್ಗ: ನಗರದ ಐತಿಹಾಸಿಕ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಪ್ರಸ್ತಾವಿತ ಮಹಿಳಾ ಕಾಲೇಜು ನಿರ್ಮಾಣದ ನಿರ್ಧಾರವನ್ನು ಕೈಬಿಡಬೇಕು ಮತ್ತು ಕಾಲೇಜಿನ ಪರಿಸರವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಹಳೆಯ ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 11 ಫೆಬ್ರವರಿ | ಯಾವ ಅಡಿಕೆ ಎಷ್ಟು ರೇಟ್ ಇಲ್ಲಿದೆ ಡೀಟೇಲ್ಸ್
ಸುಮಾರು 75 ವರ್ಷಗಳ ಇತಿಹಾಸವಿರುವ ಈ ಕಾಲೇಜು ಮಧ್ಯ ಕರ್ನಾಟಕದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ. ಕಾಲೇಜಿನ ಆವರಣದಲ್ಲಿ ದಶಕಗಳಷ್ಟು ಹಳೆಯದಾದ ಅಪರೂಪದ ಮರಗಳು ಮತ್ತು ಜೀವವೈವಿಧ್ಯವಿದ್ದು, ಇದು ವಿಜ್ಞಾನ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ. ಈಗ ಇಲ್ಲಿ ಮತ್ತೊಂದು ಕಾಲೇಜು ನಿರ್ಮಾಣ ಮಾಡಲು ಹೊರಟಿರುವುದು ಅವೈಜ್ಞಾನಿಕವಾಗಿದ್ದು, ಇದರಿಂದ ಹಸಿರು ಪರಿಸರ ನಾಶವಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳಾ ಶಿಕ್ಷಣಕ್ಕೆ ವಿರೋಧವಿಲ್ಲ:
“ನಾವು ಮಹಿಳಾ ಶಿಕ್ಷಣ ಅಥವಾ ಮಹಿಳಾ ಕಾಲೇಜು ನಿರ್ಮಾಣಕ್ಕೆ ವಿರೋಧಿಗಳಲ್ಲ. ಆದರೆ ಒಂದು ಶೈಕ್ಷಣಿಕ ಸಂಸ್ಥೆಯ ಮೂಲಸೌಕರ್ಯವನ್ನು ಕಿತ್ತುಕೊಂಡು ಮತ್ತೊಂದು ಸಂಸ್ಥೆ ಕಟ್ಟುವುದು ಸರಿಯಲ್ಲ. ಸರ್ಕಾರ ಮಹಿಳಾ ಕಾಲೇಜಿಗೆ ಬೇರೆಡೆ ಸೂಕ್ತ ಭೂಮಿ ಗುರುತಿಸಲಿ” ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಪ್ರಮುಖ ಬೇಡಿಕೆಗಳು
ಪಾರಂಪರಿಕ ಕಟ್ಟಡ ಘೋಷಣೆ:
ವಿಜ್ಞಾನ ಕಾಲೇಜಿನ ಹಳೆಯ ಕಟ್ಟಡವನ್ನು ‘ಹೆರಿಟೇಜ್ ಬಿಲ್ಡಿಂಗ್’ ಎಂದು ಘೋಷಿಸಬೇಕು.ಚುನಾವಣಾ ಕಾರ್ಯಕ್ಕೆ ಅಡ್ಡಿ: ಮತ ಎಣಿಕೆ ಮತ್ತು ಚುನಾವಣಾ ಕೆಲಸಗಳಿಗೆ ಕಾಲೇಜನ್ನು ಬಳಸುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು.
ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್ | ರೈಲ್ ಒನ್ ಆಪ್ ಬಿಡುಗಡೆ | ಇದರ ವಿಶೇಷತೆ ಏನು… ಇಲ್ಲಿದೆ ಮಾಹಿತಿ
ಕೇಂದ್ರೀಯ ವಿದ್ಯಾಲಯ ಸ್ಥಳಾಂತರ:
ಕಾಲೇಜು ಆವರಣದಲ್ಲಿರುವ ಕೇಂದ್ರೀಯ ವಿದ್ಯಾಲಯವನ್ನು ಕೂಡಲೇ ಸ್ಥಳಾಂತರಿಸಿ, ಸಂಪೂರ್ಣ ಆವರಣವನ್ನು ವಿಜ್ಞಾನ ಕಾಲೇಜಿನ ಅಭಿವೃದ್ಧಿಗೆ ಬಳಸಬೇಕು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ರಾಮಾನಾಯ್ಕ್, ಹಳೆ ವಿದ್ಯಾರ್ಥಿಗಳಾದ ಶಂಕರ್, ಪರಿಸರವಾದಿ ಸ್ವಾಮಿ, ಸಲೀಂ, ರವೀಂದ್ರ, ನಾಗರಾಜ್ ಸಂಗಂ, ಡಾ. ದೀಕ್ಷಿತ್, ತರುಣ್, ಮಾರುತಿ, ಪ್ರವೀಣ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
