
CHITRADURGA NEWS | 17 JULY 2025
ಚಿತ್ರದುರ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2025-26ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಲಿಬ್, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಎಂ.ಎ, ಎಂ.ಕಾಂ, ಎಂ.ಎ, ಎಂ.ಸಿ.ಜೆ, ಎಂ.ಲಿಬ್, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಮತ್ತು ಪಿಜಿ ಡಿಪ್ಲೊಮಾ, ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‍ಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಪ್ರವೇಶಾತಿ ಪ್ರಕ್ರಿಯೆಯು ಈಗಾಗಲೇ 2025ರ ಜುಲೈ 01 ರಿಂದ ಪ್ರಾರಂಭವಾಗಿರುತ್ತದೆ.
ಇದನ್ನೂ ಓದಿ: ಜು.18 | ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ

ಆಸಕ್ತ ವಿದ್ಯಾರ್ಥಿಗಳು ವಿವಿಧ ಪದವಿ, ಕೋರ್ಸ್‍ಗಳ ಪ್ರವೇಶಾತಿಗೆ ಆನ್‍ಲೈನ್ ಅಡ್ಮಿಷನ್ ಪೋರ್ಟ್‍ಲ್ https://ksouportal.com/views/studentHome.aspx ನಲ್ಲಿ ಆನ್‍ಲೈನ್ ಮೂಲಕ ಪ್ರವೇಶಾತಿಯ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ, ತದನಂತರ ಚಿತ್ರದುರ್ಗ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ಖುದ್ದಾಗಿ ಭೇಟಿ ನೀಡಿ ಆನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕವನ್ನು ಪಾವತಿಸಿ, ಪ್ರವೇಶಾತಿ ಪಡೆಯಬಹುದಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರು ಮತ್ತು ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ, ಕೆಎಸ್‍ಆರ್‍ಟಿಸಿ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ.
ಅಲ್ಲದೇ ಕೋವಿಡ್-19 ನಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ಪೂರ್ಣ ಪ್ರಮಾಣದ ದೃಷ್ಠಿಹೀನ ವಿದ್ಯಾರ್ಥಿಗಳಿಗೆ (ಬಿ.ಇಡಿ, ಎಂ.ಬಿ.ಎ ಕೋರ್ಸುಗಳನ್ನು ಹೊರತುಪಡಿಸಿ) ಪೂರ್ಣ ಶುಲ್ಕದ ವಿನಾಯಿತಿ ಇರುತ್ತದೆ. ಅಲ್ಲದೇ ಎರಡು ಶೈಕ್ಷಣಿಕ ಕೋರ್ಸ್‍ಗಳನ್ನು ಏಕಕಾಲದಲ್ಲಿ ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರಶಿಕ್ಷಣ ಕ್ರಮದಲ್ಲಿ ಓದಲು ಅವಕಾಶವಿರುತ್ತದೆ.
ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿಯ ಅಂತಿಮ ದಿನಾಂಕದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಮಲ್ಲಾಪುರ ಸರ್ಕಾರಿ ಶಾಲೆಯಲ್ಲಿ ತಪ್ಪಿದ ಅನಾಹುತ | ಬೆಂಕಿಗೆ ಕಾರಣವಾದ ಗ್ಯಾಸ್ ಲೀಕೇಜ್
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ವೀಕ್ಷಿಸುವುದು ಅಥವಾ ಮೊಬೈಲ್ ಸಂಖ್ಯೆ 9738014893, 7204352581, 9008905457, 8310111244, 9972499704, 8277205613 ಗೆ ಕರೆ ಮಾಡವುದು ಅಥವಾ ಖುದ್ದಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಚಿತ್ರದುರ್ಗ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಬಿ.ಆರ್.ರಾಧಿಕಾ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
