Connect with us

    ಯರೇಹಳ್ಳಿಯಲ್ಲಿ ಚಲಾವಣೆಯಾಗಿದ್ದು 24 ಮತಗಳು ಮಾತ್ರ..!

    ಯರೇಹಳ್ಳಿ

    ಲೋಕಸಮರ 2024

    ಯರೇಹಳ್ಳಿಯಲ್ಲಿ ಚಲಾವಣೆಯಾಗಿದ್ದು 24 ಮತಗಳು ಮಾತ್ರ..!

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 APRIL 2024

    ಚಿತ್ರದುರ್ಗ: ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನ ನಡುವೆ ಗುಡ್ಡಗಳ ನಡುವೆ ಸಿಲುಕಿಕೊಂಡಂತಿರುವ ಯರೇಹಳ್ಳಿ ಗ್ರಾಮದ ಜನ ಮತದಾನ ಬಹಿಷ್ಕಾರ ಮಾಡುವ ತೀರ್ಮಾನ ಮಾಡಿದ್ದರು.

    ಅದರಂತೆ, ಗುರುವಾರ ಸಂಜೆ ಗ್ರಾಮಕ್ಕೆ ಮತಯಂತ್ರಗಳನ್ನು ಹೊತ್ತೊಯ್ದ ಬಸ್ಸಿನ ಬಳಿಯೂ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು.

    ಇದನ್ನೂ ಓದಿ: ಮದುವೆ ಮಂಟಪದಿಂದ ಮತಗಟ್ಟೆಗೆ ಬಂದ ನವ ದಂಪತಿಗಳು | ಮಾಂಗಲ್ಯ ಧಾರಣೆ ನಂತರ ಮತದಾನ

    ಇಂದು ದೇಶದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಯರೇಹಳ್ಳಿ ಗ್ರಾಮದ ಜನ ಮತದಾನ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದು ಕುಳಿತಿದ್ದರು. ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

    ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹಾಗೂ ಉಪವಿಭಾಗಾಧಿಕಾರಿ ಕಾರ್ತಿಕ್ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ ಜನರ ಮನವೊಲಿಸಿದ್ದರು.

    ಇದನ್ನೂ ಓದಿ: ಬಿಸಿಲಿನ ತಾಪ ಲೆಕ್ಕಿಸದ ಮತದಾರ | ಮಠಾಧೀಶರಿಂದ ಮತ ಚಲಾವಣೆ | ಬೆಳಗಿನಿಂದ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು ?

    ಆದರೆ, ದಿನದ ಕೊನೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದಾಗ ಯರೇಹಳ್ಳಿಯಲ್ಲಿ ಚಲಾವಣೆ ಆಗಿರುವುದು ಕೇವಲ 24 ಮತಗಳು ಎಂದು ಗೊತ್ತಾಗಿದೆ.

    ಇಲ್ಲಿ 24 ಮತಗಳು ಚಲಾವಣೆ ಆಗಿರುವುದರಿಂದ ಮರು ಮತದಾನದ ಸಾಧ್ಯತೆ ಕಡಿಮೆ. ಆದರೆ, ಗ್ರಾಮದ ಸಮಸ್ಯೆಯನ್ನು ಬಗೆಹರಿಸಲು ಜನ ಪಟ್ಟು ಹಿಡಿದಿರುವುದು ಚುನಾವಣೆ ಬಹಿಷ್ಕಾರದ ಮೂಲಕ ಬೆಳಕಿಗೆ ಬಂದಂತಾಗಿದೆ.

    ಮತದಾನ ಬಹಿಷ್ಕಾರಕ್ಕೆ ಕಾರಣವೇನು:

    ಚಿತ್ರದುರ್ಗದಿಂದ ಇಂಗಳದಾಳು ಮಾರ್ಗವಾಗಿ ಕುರುಮರಡಿಕೆರೆ ದಾಟಿ ಸಾಗಿದಾಗ ಗುಡ್ಡಗಳ ನಡುವೆ ಯರೇಹಳ್ಳಿ ಸಿಗುತ್ತದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಡೆಯ ಗ್ರಾಮ. ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಕೊಳಾಳು ಮಾರ್ಗದಲ್ಲಿ ಬಂದಾಗಲೂ ಒಂದು ಗುಡ್ಡ ಹತ್ತಿ ಇಳಿದು, ಹಳ್ಳ ದಾಟಿದರೆ ಯರೇಹಳ್ಳಿ ದರ್ಶನವಾಗುತ್ತದೆ.

    ಇದನ್ನೂ ಓದಿ: ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ಸಾವು 

    ಈ ಕುಗ್ರಾಮ ಯರೇಹಳ್ಳಿಗೆ ಇಂದಿಗೂ ಮೊಬೈಲ್ ನೆಟ್‍ವರ್ಕ್ ಇಲ್ಲ. ಪೋನ್ ಮಾಡುವುದಾದರೆ ಪಕ್ಕದ ಗುಡ್ಡ ಅಥವಾ ಎತ್ತರದ ಪ್ರದೇಶದ ಜಮೀನಿಗೆ ಹೋಗಬೇಕು.

    ಕೆಲವರು ಗ್ರಾಮದ ಪಕ್ಕದ ಜಮೀನೊಂದರಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನಿಟ್ಟು ಮೊಬೈಲ್ ನೆಟ್‍ವರ್ಕ್ ಸಿಗುವ ಪಾಯಿಂಟ್ ಮಾಡಿಕೊಂಡು, ಸಂಜೆ ಹೊತ್ತು ಅಲ್ಲಿಗೆ ಹೋಗಿ ಮಾತನಾಡಿಕೊಂಡು ಬರುವ ಪದ್ಧತಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಎಸ್ಸಿ ಆಗ್ರಿ ಪ್ರವೇಶ ಪರೀಕ್ಷೆಗೆ ಪ್ರಾಯೋಗಿಕ ತರಬೇತಿ

    ಮೊಬೈಲ್ ನೆಟ್‍ವರ್ಕ್ ಸಿಗದ ಕಾರಣಕ್ಕೆ ಸಾಕಷ್ಟು ಸಮಸ್ಯೆಗಳಾಗಿವೆ. ಊರಿಂದ ಹೊರಗೆ ಹೋದವರು ಆಕಸ್ಮಿಕವಾಗಿ ಏನಾದರೂ ಆದರೆ, ಮನೆಗೆ ವಿಷಯ ಮುಟ್ಟಿಸಲು ಪಕ್ಕದ ಊರಿನವರಿಗೆ ಪೋನ್ ಮಾಡಿ ಅಲ್ಲಿಂದ ಕಳಿಸುವ ಸ್ಥಿತಿಯಿದೆ.

    ಇನ್ನೂ, ಸುಮಾರು 20 ವರ್ಷಗಳಿಗಿಂತ ಹಿಂದೆ ಇಲ್ಲಿ ವಿದ್ಯುತ್ ಸಮಸ್ಯೆಯಾಗಿ ಮನೆಯ ಮೀಟರ್‍ಗಳೆಲ್ಲಾ ಸುಟ್ಟು ಹೋಗಿದ್ದವು. ಒಂದಿಷ್ಟು ಮನೆಗಳು ಸುಟ್ಟು ಹೋಗಿದ್ದವು.

    ಇದನ್ನೂ ಓದಿ: KAS ಪರೀಕ್ಷೆಗೆ ಉಚಿತ ತರಬೇತಿ

    ಆನಂತರ ಈ ಗ್ರಾಮಕ್ಕೆ ಸರಿಯಾದ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಇಂದಿಗೂ ನೀರಾವರಿಗೆ ಬಳಸುವ ವಿದ್ಯುತ್ತನ್ನೇ ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ರಾತ್ರಿ ವೇಳೆ ಇಲ್ಲಿ ವಿದ್ಯುತ್ ಇರುವುದಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಿದೆ. ಬೇಸಿಗೆ ಸಂದರ್ಭದಲ್ಲಿ ಮಲಗುವುದು ಕಷ್ಟ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top