
CHITRADURGA NEWS | 27 February 2026
ಚಿತ್ರದುರ್ಗ: ಚಿತ್ರದುರ್ಗ ನಗರದ ಹಳೆ ಬೆಂಗಳೂರು ರಸ್ತೆಯಲ್ಲಿರುವ ಜಿ.ಟಿ.ಟಿ.ಸಿ ಕಟ್ಟಡದಲ್ಲಿರುವ ಎನ್.ಐ.ಇ.ಎಲ್.ಐ.ಟಿ(ನ್ಯಾಷಿನಲ್ ಇನ್ಸಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರಮೇಷನ್ ಟೆಕ್ನಾಲಜಿ) ಎಕ್ಸ್‍ಟೆನ್ಶನ್ ಕೇಂದ್ರದಲ್ಲಿ ಇದೇ ಮಾರ್ಚ್ 11ರಂದು ಬೆಳಿಗ್ಗೆ 09 ಗಂಟೆಗೆ ಒಪ್ಪಂದದ ಆಧಾರದ ಮೇಲೆ ಎರಡು ಬೋಧಕ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ತೋಟಗಾರಿಕೆ ಇಲಾಖೆ ಬಳಿ ಹೊಸ ಡಿಸಿ ಕಚೇರಿಗೆ ಅನುಮತಿ | 6.30 ಎಕರೆಯಲ್ಲಿ ಜಿಲ್ಲಾಡಳಿತ ಭವನ

ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ, ಐಟಿ ವಿಷಯದಲ್ಲಿ ಬಿಇ, ಬಿ-ಟೆಕ್, ಸ್ನಾತಕೋತ್ತರ ಪದವಿ, ಎಂ.ಸಿ.ಎ. ಅಥವಾ ಬಿಸಿಎ ಪದವಿಗಳಲ್ಲಿ ವಿದ್ಯಾರ್ಹತೆ ಹೊಂದಿರುವವರು, ಇತ್ತೀಚಿನ ಬಯೋಡೇಟಾ, ವಿದ್ಯಾಭ್ಯಾಸದ ಸ್ವಯಂ-ದೃಢೀಕೃತ ಪ್ರತಿ ಹಾಗೂ ಎಲ್ಲಾ ಮೂಲ ದಾಖಲೆಗಳ ಒಂದು ಸೆಟ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.
ಆಸಕ್ತರು ಆಡಳಿತಾಧಿಕಾರಿ ಡಾ.ರಾಣಾಶರ್ಮಾ ಮೊಬೈಲ್ ಸಂಖ್ಯೆ 9864020005 ಹಾಗೂ 9995427802 ಕರೆ ಮಾಡಬಹುದು. ವೆಬ್‍ಸೈಟ್ http://www.nielit.gov.in/calicut ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
