By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ರಂಗೋಲಿ ಸ್ಪರ್ಧೆ ಕಾರ್ಯಕ್ರಮ
    ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ | ಡಾ.ಬಸವಕುಮಾರ ಶ್ರೀ 
    18 hours ago
    ಕೃಷಿ ಹೊಂಡ
    ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
    1 day ago
    ಮುರುಘಾ ಮಠ
    ಮುರುಘಾ ಮಠ | ಬಸವ ಜಯಂತಿ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
    1 day ago
    ನಗರದ ಕೆಳಕೋಟೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
    ಚಿತ್ರದುರ್ಗದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಯೋಜನೆ | ಶಾಸಕ‌ ಕೆ.ಸಿ.ವೀರೇಂದ್ರ (ಪಪ್ಪಿ)
    1 day ago
    ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
    1 day ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    3 days ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    7 days ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    2 weeks ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    3 weeks ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    3 weeks ago
  • ತಾಲೂಕು
    ತಾಲೂಕುShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    5 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    1 week ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ |17 ಏಪ್ರಿಲ್‌ |ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್‌
    3 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ
    4 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
    1 week ago
    arecanut price list
    ಅಡಿಕೆ ಧಾರಣೆ | 10 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌ ?
    1 week ago
    arecanut price list
    ಅಡಿಕೆ ಧಾರಣೆ | 9 ಏಪ್ರಿಲ್‌ | ಸಾಗರ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಏರಿಕೆ
    2 weeks ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 20 | ವೃತ್ತಿ ಮತ್ತು ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಆರೋಗ್ಯದಲ್ಲಿ ಎಚ್ಚರ
    22 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 19 | ಆಕಸ್ಮಿಕ ಧನಲಾಭ, ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 18 | ಆಸ್ತಿ ವಿಚಾರಗಳಲ್ಲಿ ಸಹೋದರರೊಂದಿಗೆ ವಿವಾದಗಳು, ಆರ್ಥಿಕ ಅನುಕೂಲತೆ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 17 | ಕೈಗೊಂಡ ಕೆಲಸಗಳಲ್ಲಿ ವಿಳಂಬ, ದೂರದ ಪ್ರಯಾಣದಲ್ಲಿ ಎಚ್ಚರ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 16 | ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು, ಹಠಾತ್ ಪ್ರಯಾಣದ ಸೂಚನೆ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 18 | ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 17 | ಮೆಕ್ಕೆಜೋಳ, ರಾಗಿ ರೇಟ್…
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 16 | ಹತ್ತಿ ರೇಟ್ ಎಷ್ಟಿದೆ?
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 15 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
    6 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 13 | ಮೆಕ್ಕೆಜೋಳ ರೇಟ್…
    1 week ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    1 week ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    3 weeks ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    4 weeks ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    1 month ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    1 month ago
  • ಹಿರಿಯೂರು
    ಹಿರಿಯೂರುShow More
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    1 week ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    2 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    2 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    2 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    3 months ago
  • ಹೊಸದುರ್ಗ
    ಹೊಸದುರ್ಗShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    5 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    1 week ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • Life Style
    Life StyleShow More
    gaining weight
    ನೀವು ಕಡಿಮೆ ತಿಂದರೂ ತೂಕ ಹೆಚ್ಚಾಗುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತಾ?
    20 hours ago
    kidney problems
    ಕಿಡ್ನಿ ಸಮಸ್ಯೆ ಇರುವವರು ಈ 4 ಅಂಶಗಳನ್ನು ಸಮತೋಲನದಲ್ಲಿಡಬೇಕು
    21 hours ago
    Metabolism
    ಚಯಾಪಚಯ ಕ್ರಿಯೆ ನಿಧಾನವಾಗುತ್ತಿದ್ದರೆ ನಿಮ್ಮ ಚರ್ಮದ ಮೇಲೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಂತೆ
    2 days ago
    eat fruits to stay healthy
    ಆರೋಗ್ಯವಾಗಿರಲು ಹಣ್ಣುಗಳನ್ನು ತಿನ್ನುವ ಸರಿಯಾದ ವಿಧಾನ ತಿಳಿದುಕೊಳ್ಳಿ
    2 days ago
    sweets
    ನಿಮ್ಮಲ್ಲಿ ಸಿಹಿ ತಿಂಡಿಗಳ ಹಂಬಲ ಹೆಚ್ಚಾಗಲು ಕಾರಣವೇನು ಗೊತ್ತಾ?
    3 days ago
Reading: ಮಕ್ಕಳ ಹಕ್ಕುಗಳು, ಯೋಜನೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಅಗತ್ಯ | ಡಾ.ಕೆ.ಟಿ.ತಿಪ್ಪೇಸ್ವಾಮಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಮಕ್ಕಳ ಹಕ್ಕುಗಳು, ಯೋಜನೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಅಗತ್ಯ | ಡಾ.ಕೆ.ಟಿ.ತಿಪ್ಪೇಸ್ವಾಮಿ

News Desk Chitradurga News
Last updated: 13 January 2026 21:25
News Desk Chitradurga News
3 months ago
Share
ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ
ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ
SHARE

CHITRADURGA NEWS | 14 JANUARY 2026

ಚಿತ್ರದುರ್ಗ: ಹದಿನೆಂಟು ವರ್ಷದೊಳಗಿನ ಮಕ್ಕಳು ಹಾಗೂ ವಿಕಲಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು, ಯೋಜನೆಗಳು ಹಾಗೂ ಹಕ್ಕುಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿರುವ ಕುರಿತು ಹೆಚ್ಚಿನ ತಿಳುವಳಿಕೆ ಇರುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ಇದನ್ನೂ ಓದಿ: ಜಲಸಂರಕ್ಷಕ | ಜಲಋಷಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರರು | ಲೇಖನ

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ “ಜಿಲ್ಲೆಯ ಗ್ರಾಮೀಣ, ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 35,971 ಜನರು ವಿಕಲಚೇತನರು ಇದ್ದು, ಇದರಲ್ಲಿ 10,884 ಮಂದಿ 18 ವರ್ಷದ ವಿಕಲಚೇತನ ಮಕ್ಕಳಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆ, ಕಾನೂನು, ಕಾರ್ಯಕ್ರಮಗಳ ಪರಿಚಯ ಬಹಳ ಮುಖ್ಯ. ಒಂದು ವೇಳೆ ಮಕ್ಕಳ ಕಾನೂನುಗಳ ಮಾಹಿತಿ ಇಲ್ಲದಿದ್ದರೆ ಅರ್ಹ ಫಲಾನುಭವಿಗಳಿಗೆ ಮಾಹಿತಿ ಕೊರತೆಯಿಂದಾಗಿ ಅನೇಕ ಸೌಲಭ್ಯಗಳಿಂದ ವಂಚನೆಯಾಗಲಿದ್ದಾರೆ. ಕಾನೂನು ಮತ್ತು ನೀತಿಗಳ ಪ್ರಕ್ರಿಯೆ ಕೊರತೆಯಾದಾಗ, ಒಂದು ಪ್ರಕರಣದ ಸಂಭವಿಸಿದಾಗ ಅದನ್ನು ನಿರ್ವಹಣೆ ಮಾಡುವಾಗ ಲೋಪದೋಷಗಳು ಆಗುವ ಸಂಭವ ಇರುತ್ತದೆ ಎಂದು ತಿಳಿಸಿದರು.

ಗ್ರಾಮೀಣ, ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ವಿಕಲಚೇತನರ ಸಬಲೀಕರಣಕ್ಕಾಗಿ ಹಾಗೂ ವಿಕಲಚೇತನರು ಹಾಗೂ 18 ವರ್ಷದ ಒಳಗಿನ ಮಕ್ಕಳ ಜೊತೆಗೆ ನೀವು ಕಾರ್ಯನಿರ್ವಹಿಸುತ್ತಿದ್ದು, ಅಂತಹ ಮಕ್ಕಳ ಸಂಬಂಧಿತ ಕಾಯ್ದೆಗಳು, ನೀತಿಗಳು, ಪ್ರಸ್ತುತ ದಿನಗಳಲ್ಲಿ ಆಗಿರುವ ಬದಲಾವಣೆಗಳು ಕುರಿತು ನಿಮ್ಮಗಳ ಸಾಮಾಥ್ರ್ಯ ಅಭಿವೃದ್ಧಿ ತರಬೇತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬುದು ಗಮನಕ್ಕೆ ಬಂದಿದ್ದು, ಈ ಹಿನ್ನಲೆಯಲ್ಲಿ ಪ್ರಸ್ತಕ ವರ್ಷದ ಕ್ರಿಯಾ ಯೋಜನೆಯಲ್ಲಿ ರಾಜ್ಯದ ಎಲ್ಲ ಎಂ.ಆರ್.ಡ್ಲ್ಯೂ, ವಿ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂಗಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಕಾನೂನುಗಳ ಕುರಿತು ತರಬೇತಿಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಗಣಿತ ಗಣಕ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆ ನಂಬರ್ ಒನ್

ಸರ್ಕಾರದ ಎಲ್ಲ ಇಲಾಖೆಗಳು ಅಭಿವೃದ್ಧಿ ಅನುದಾನದಲ್ಲಿ ಶೇ.5ರಷ್ಟು ಅನುದಾನವನ್ನು ವಿಕಲಚೇತನರಿಗಾಗಿಯೇ ಬಳಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವರ್ಷಕೊಮ್ಮೆ ಕನಿಷ್ಟ ಒಂದು ಬಾರಿಯಾದರೂ ವಿಕಲಚೇತನರ ಗ್ರಾಮಸಭೆ ನಡೆಸಬೇಕು ಎಂದು ತಿಳಿಸಿದ ಅವರು, ಒಬ್ಬ ಮನುಷ್ಯನ ಸಬಲೀಕರಣದಲ್ಲಿ ಮಾಹಿತಿ ತಿಳುವಳಿಕೆಯೇ ಮೊದಲ ಮೆಟ್ಟಿಲು. 

ಹಾಗಾಗಿ ಗ್ರಾಮೀಣ, ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಸಾಮಥ್ರ್ಯದ ಅಭಿವೃದ್ಧಿಗೆ ಸಮಯ ನಿಗದಿ ಹಾಗೂ ಅನುದಾನ ಮೀಸಲಿಡುವಂತೆ ವಿಕಲಚೇತನರ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಆಯೋಗ ಶಿಫಾರಸ್ಸು ಮಾಡಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಗ್ರಾಮ ಮಟ್ಟದಲ್ಲಿ ಜಾರಿಗೆ ತರುವಲ್ಲಿ ಅಗತ್ಯ ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಹಕ್ಕುಗಳನ್ನು ಜಾರಿಗೆ ತರುವಲ್ಲಿ ಹಿಂದೇಟು ಹಾಕಬಾರದು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಕಾವಲು ಸಮಿತಿ ರಚಿಸಲಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಮಕ್ಕಳ ಕಾವಲು ಸಮಿತಿ ಸಭೆ ನಡೆಸಬೇಕು ಎಂದು ತಿಳಿಸಿದ ಅವರು, ಮಹಿಳಾ ಮತ್ತು ಮಕ್ಕಳ ರಕ್ಷಣೆಗಾಗಿ ರಚಿಸಲಾಗಿರುವ ಸಮಿತಿ ಸಭೆಗಳನ್ನು ನಿಯಮಿತವಾಗಿ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿಗಳ ಸಹಕಾರದೊಂದಿಗೆ ನಡೆಸಬೇಕು ಎಂದು ವಿಆರ್‍ಡಬ್ಲ್ಯೂಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ಜಾಗತಿಕ ಲಿಂಗಾಯತ ಮಹಾಸಭಾದ 2026ರ ಕ್ಯಾಲೆಂಡರ್ ಬಿಡುಗಡೆ

ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ಜೆ.ವೈಶಾಲಿ ಮಾತನಾಡಿ, ಅಂಗವಿಕಲರ ಪುನರ್ವಸತಿ ಯೋಜನೆಯಡಿ ಜಿಲ್ಲೆಯ ಗ್ರಾಮೀಣ, ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು, ತಳಮಟ್ಟದಲ್ಲಿರುವ ವಿಕಲಚೇತನರಿಗೆ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ವಿಕಲಚೇತನರಿಂದಲೇ ವಿಕಲಚೇತನರಿಗೆ ಅವರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವ ಉದ್ದೇಶದಿಂದ ಅಂಗವಿಕಲರ ಪುನರ್ವಸತಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ವಿಕಲಚೇತನರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರನ್ನಾಗಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಈ ನಿಟ್ಟಿನಲ್ಲಿ ಇಲಾಖೆಯ ಬೆನ್ನೆಲುಬಾಗಿ ಜಿಲ್ಲೆಯ ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು, ವಿಕಲಚೇತನ ಮಕ್ಕಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಸಮನ್ವಯವನ್ನು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ, ಸಂಪನ್ಯೂಲ ವ್ಯಕ್ತಿ ಡಾ.ಕೆ.ರಾಘವೇಂದ್ರ ಭಟ್ ಅವರು ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ ಕುರಿತು ತರಬೇತಿ ನೀಡಿದರು.

ಇದನ್ನೂ ಓದಿ: ಅಡಿಕೆ ಧಾರಣೆ | 13 ಜನವರಿ | ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ಮಾರ್ಕೇಟ್‌ ರೇಟ್‌

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗಂಗಪ್ಪ, ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ.ಶೀಲಾ, ಪ್ರಭಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ವಿ.ವೀಣಾ ಹಾಗೂ ಜಿಲ್ಲೆಯ ಎಂ.ಆರ್.ಡ್ಲ್ಯೂ, ವಿ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂಗಳು ಇದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Children's RightsChitradurgaChitradurga newsDr. K.T. ThippeswamyProjectsಚಿತ್ರದುರ್ಗಚಿತ್ರದುರ್ಗ ನ್ಯೂಸ್ಡಾ.ಕೆ.ಟಿ.ತಿಪ್ಪೇಸ್ವಾಮಿಮಕ್ಕಳ ಹಕ್ಕುಗಳುಯೋಜನೆಗಳು
Share This Article
Facebook Email Print
Previous Article FIR ಖಾಸಗಿ ಬಸ್‌ – ಬೈಕ್‌ ನಡುವೆ ಅಪಘಾತ | ಇಬ್ಬರು ಮೃತ
Next Article ದಿನ ಭವಿಷ್ಯ ದಿನ ಭವಿಷ್ಯ | ಜನವರಿ 14 | ಹಠಾತ್ ಧನ ಲಾಭ, ಶುಭ ಸುದ್ದಿ, ಗೃಹೋಪಯೋಗಿ ಉಪಕರಣ ಖರೀದಿ
Leave a Comment

Leave a Reply Cancel reply

Your email address will not be published. Required fields are marked *

ರಂಗೋಲಿ ಸ್ಪರ್ಧೆ ಕಾರ್ಯಕ್ರಮ
ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ | ಡಾ.ಬಸವಕುಮಾರ ಶ್ರೀ 
ಮುಖ್ಯ ಸುದ್ದಿ
gaining weight
ನೀವು ಕಡಿಮೆ ತಿಂದರೂ ತೂಕ ಹೆಚ್ಚಾಗುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತಾ?
Life Style
kidney problems
ಕಿಡ್ನಿ ಸಮಸ್ಯೆ ಇರುವವರು ಈ 4 ಅಂಶಗಳನ್ನು ಸಮತೋಲನದಲ್ಲಿಡಬೇಕು
Life Style
ದಿನ ಭವಿಷ್ಯ
ದಿನ ಭವಿಷ್ಯ | ಏಪ್ರಿಲ್ 20 | ವೃತ್ತಿ ಮತ್ತು ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಆರೋಗ್ಯದಲ್ಲಿ ಎಚ್ಚರ
Dina Bhavishya
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up