ಮುಖ್ಯ ಸುದ್ದಿ
Controversy: ಲಿಂಗಾಯತ ಸ್ವತಂತ್ರ ಧರ್ಮ: ಸಾಣೇಹಳ್ಳಿ ಶ್ರೀ | ಹಿಂದೂ ಎನ್ನುವುದು ವಿಶಾಲ ಮಹಾಸಾಗರ: ವಚನಾನಂದ ಶ್ರೀ
CHITRADURGA NEWS | 08 AUGUST 2024
ಚಿತ್ರದುರ್ಗ: ಹೊಳಲ್ಕೆರೆ ಒಂಟಿ ಕಂಬದ ಮಠದ ಆವರಣದಲ್ಲಿ ಗುರುವಾರ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ 30ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಹಾಗೂ ಲಿಂಗಾಯತ ಧರ್ಮಗಳ ಕುರಿತ ಮಾತುಗಳು ಮಾರ್ಧನಿಸಿವೆ.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಿಂದೂ ಧರ್ಮದ ಕುರಿತು ಆಡಿದ ಮಾತುಗಳಿಗೆ ಅಪಸ್ವರ ಕೇಳಿ ಬಂದಿವೆ.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ತೋಟಗಾರಿಕೆ ತರಬೇತಿ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಶ್ರೀಗಳು ತಮ್ಮ ಭಾಷಣದಲ್ಲಿ, ಸಮಾಜದ ಎಲ್ಲಾ ಅನಿಷ್ಠಗಳ ನಿವಾರಣೆಗೆ ಎಲ್ಲಾ ಕ್ಷೇತ್ರಗಳಲ್ಲಿ ಬಸವಣ್ಣನವರು ದಾಪುಗಾಲು ಹಾಕಿದ್ದರು.
ವೇದ, ಪುರಾಣ, ಶಾಸ್ತ್ರ ಪ್ರಚಾರ, ಪ್ರಸಾರ ನಡೆದಿತ್ತು. ಆದರೆ, ಶರಣರು ಆ ವೇದಗಳನ್ನು ತಿರಸ್ಕಾರ ಮಾಡಿದ್ದರು.
ಇದನ್ನೂ ಓದಿ: ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ | ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿಶೇಷ ಲೇಖನ
ವೇದವೆಂಬುರು ಓದಿನ ಮಾತು, ಪುರಾಣವೆಂಬುದು ಪುಂಡರಗೋಷ್ಠಿ, ಶಾಸ್ತ್ರವೆಂಬುದು ಸಂಖ್ಯೆಯ ಸ್ತುತಿ ಎಂದು ಹೇಳುವ ಮೂಲಕ ಲಿಂಗಾಯತ ಧರ್ಮದ ಹುಟ್ಟಿಗೆ ಬಸವಾದಿ ಶರಣರು ಕಾರಣರಾದರು.
ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗ ಅಲ್ಲ ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿದು ಬಂತು 2195 ಕ್ಯೂಸೆಕ್ ನೀರು
ಹಿಂದೂ ಧರ್ಮ ಅಂದರೆ ಎಲ್ಲ ರೀತಿಯ ಅನಿಷ್ಠ, ಅನಾಚಾರ ಒಳಗೊಂಡಿರುವಂಥದ್ದು. ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಿಂಧೂ ನದಿಯ ದಡದಲ್ಲಿ ಸಿಂಧೂ ದೇಶದವರು ಎಂಬ ಅರ್ಥದಲ್ಲಿ ಹಿಂದೂ ಅನ್ನುವುದಾದರೆ, ಖಂಡಿತ ನಾವು ಹಿಂದೂ ಧರ್ಮದವರಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು ಎಂದು ಹೇಳಿದರು.
ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ಬಲವಾಗಿ ತುಂಬಿಕೊಂಡಿವೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.
ಇದನ್ನೂ ಓದಿ: ಒಂಟಿ ಕಂಬದ ಮಠದಲ್ಲಿ ಮಲ್ಲಿಕಾರ್ಜುನ ಶ್ರೀ ಸ್ಮರಣೋತ್ಸವ | ಹತ್ತಾರು ಮಠಾಧೀಶರು ಭಾಗೀ | ಯರ‍್ಯಾರು ಏನು ಹೇಳಿದ್ರು
ಇದಾದ ಬಳಿಕ ಮಾತನಾಡಿದ ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ, ಹಿಂದೂ ಧರ್ಮದ ಪರವಾಗಿ ಮಾತುಗಳನ್ನು ಆರಂಭಿಸಿದರು.
ಹಿಂದೂ ಎನ್ನುವುದು ಅತ್ಯಂತ ಸನಾತನವಾದುದು. ಯಾರು ಏನು ಬೇಕಾದರೂ ಹೇಳಬಹುದು. ಆದರೆ, ಹಿಂದೂ ಎನ್ನುವುದು ವಿಶಾಲವಾದ ಮಹಾಸಾಗರ ಎಂದರು.
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಚಿತ್ರದುರ್ಗ ರೈಲ್ವೇ ಯೋಜನೆಗೆ 150 ಕೋಟಿ
ಹಿಂದೂ ಧರ್ಮದಲ್ಲಿ ಕೇವಲ ವೈದಿಕರಿರಲಿಲ್ಲ. ಅದು ಕೇವಲ ದ್ವೈತ, ಅದ್ವೈತ ಅಲ್ಲ, ಅದು ಶಕ್ತಿ ವಿಶಿಷ್ಠಾದ್ಯವೈತ, ಜನಪದ, ಬುಡಕಟ್ಟು ಎಲ್ಲವನ್ನೂ ಒಳಗೊಂಡಿದೆ.
ಎಲ್ಲಾ ಮೂಲ ಪುರುಷರು ಇದ್ದದ್ದು ಹಿಂದೂ ಧರ್ಮದಲ್ಲೇ. ವೀರಶೈವ ಲಿಂಗಾತರ ತತ್ವಗಳು ಬೇರೆ ಬೇರೆ ಇರಬಹುದು. ಆದರೆ, ನಾವೆಲ್ಲಾ ಒಗ್ಗಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ.
ಇದನ್ನೂ ಓದಿ: ವೇದಾವತಿ ಜೊತೆಗೆ ನೇತ್ರಾವತಿ ಸಮಾಗಮ | ಎತ್ತಿನಹೊಳೆ ನೀರು ವಿವಿ ಸಾಗರಕ್ಕೆ | ಈ ವರ್ಷವೂ ಮಾರಿಕಣಿವೆ ಕೋಡಿ ಪಕ್ಕಾ
ನಿಮ್ಮ ಮಠ, ಪೀಠ, ತತ್ವಗಳು ಏನೇ ಇರಬಹುದು. ಸಾಮಾಜಿಕ, ರಾಜಕೀಯ, ಬೌದ್ಧಿಕವಾಗಿ ನಾವೆಲ್ಲಾ ಒಂದಾಗಿರಬೇಕು. ಶ್ರೀ ಮಲ್ಲಿಕಾರ್ಜುನ ಗುರುಗಳಲ್ಲಿ ಈ ರೀತಿಯ ಬೇಧಗಳಿರಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸಿದರು.