ಟಾರ್ಗೆಟ್ ಟೆನ್ ಥೌಸಂಡ್ ತಂಡದ ಸಿದ್ಧರಾಜು ಜೋಗಿ | ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆ

ಸಿದ್ಧರಾಜು ಜೋಗಿ

CHITRADURGA NEWS | 27 APRIL 2025

ಚಿತ್ರದುರ್ಗ: ಟಾರ್ಗೆಟ್‌ ಟೆನ್‌ ಥೌಸಂಡ್‌ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ ತಂಡದ ನಾಯಕ ಸಿದ್ಧರಾಜು ಜೋಗಿ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ವತಿಯಿಂದ ಕಾಯಕರತ್ನ ಪ್ರಶಸ್ತ್ರಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ನಾಗರಾಜ್‌ ಸಂಗಂ ಹಾಗೂ ಕಾರ್ಯದರ್ಶಿ ಪಿ.ಲೋಕೇಶ್‌ ತಿಳಿಸಿದ್ದಾರೆ.

Also Read: ದ್ವಿತೀಯ PUC ಮರು ಮೌಲ್ಯಮಾಪನ | ಚೈತನ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಟಾರ್ಗೆಟ್‌ ಟೆನ್‌ ತೌಸಂಡ್‌ ತಂಡದ ಸಿದ್ದರಾಜು ಜೋಗಿಯವರ ತಂಡ 2016ರಲ್ಲಿ ಚಿತ್ರದುರ್ಗದ ವಿವಿಧೆಡೆಗಳಲ್ಲಿ ಸಸಿಗಳನ್ನು ನಡುವ ಕಾರ್ಯಕ್ಕೆ ಮುಂದಾಗಿತ್ತು ಇದಕ್ಕೆ ನಗರದ ಜನತೆಯೂ ಸಹಾ ಸಹಕಾರವನ್ನು ನೀಡಿದ್ದರ ಫಲವಾಗಿ ಇಂದು ಸುಮಾರು ೪೦ ಸಾವಿರ ಸಸಿಗಳನ್ನು ನಗರದ ವಿವಿಧ ಬಡಾವಣೆ, ಶಾಲಾ-ಕಾಲೇಜುಗಳ ಆವರಣ, ರಸ್ತೆಗಳ ಬದಿಗಳಲ್ಲಿ, ನಡೆವುದರ ಮೂಲಕ ಅವುಗಳ ಬೆಳವಣಿಗೆಗೆ ವಾರದಲ್ಲಿ ಒಂದು ದಿನ ಇದಕ್ಕಾಗಿ ಮೀಸಲಿಟ್ಟು ಅವುಗಳನ್ನು ಬೆಳಸಿದ್ದಾರೆ.

ಇದರ ಅಂಗವಾಗಿ ಚಿತ್ರದುರ್ಗದಲ್ಲಿ ಟಾರ್ಗೆಟ್‌ 10 ಥೌಜೆಂಡ್ ಎಂಬ ಗ್ರೂಪ್ ಮಾಡಿಕೊಂಡು ಸಸಿಗಳನ್ನು ನೆಟ್ಟು ಅವುಗಳನ್ನು ಬೆಳಸುತ್ತಿದ್ದಾರೆ ಇವರ ಕಾಯಕವನ್ನು ಗುರುತಿಸಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ 2025ನೇ ಸಾಲಿಗೆ ಇವರನ್ನು ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

Also Read: ಲೋಕಾಯುಕ್ತ ದೂರಿನಲ್ಲಿ ಷಡ್ಯಂತ್ರ | ದೂರು ದಾಖಲಿಸಿಕೊಳ್ಳಲು ತಿಮ್ಮರಾಜು ಪತ್ನಿ ಮನವಿ | ಇಡೀ ದಿನ ಏನೇನಾಯ್ತು ?

ಈ ಪ್ರಶಸ್ತಿ ಪ್ರಧಾನ ಸಮಾರಂಭ ಮೇ.1 ರಂದು ಬಾಗಲಕೋಟೆಯ ರಬಕವಿ ಗ್ರಾಮದಲ್ಲಿ ಬೆಳಗ್ಗೆ 11ಕ್ಕೆ ನಡೆಯಲಿದೆ.

ಈ ಹಿಂದೆ ಇದೇ ರೀತಿಯ ಪ್ರಶಸ್ತಿಗೆ ಚಿತ್ರದುರ್ಗದಿಂದ ಟೈಗರ್ ತಿಪ್ಪೇಸ್ವಾಮಿ, ಕೆ.ಎಸ್.ಆರ್.ಟಿ.ಸಿಯ ಚಾಲಕ ಶಾಂತಕುಮಾರ್ ಹಾಗೂ ಕೋಟೆ ವಾಯು ವಿಹಾರದ ಅಧ್ಯಕ್ಷರಾದ ಸತ್ಯಣ್ಣ ರವರಿಗೆ ಪ್ರಧಾನ ಮಾಡಲಾಗಿತ್ತು.

ಮೇ 1 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಪದಾಧಿಕಾರಿಗಳು ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ನಾಗರಾಜ್ ಸಂಗಂ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version