ಮುಖ್ಯ ಸುದ್ದಿ
Railway: ಕೇಂದ್ರ ಬಜೆಟ್‌ನಲ್ಲಿ ಚಿತ್ರದುರ್ಗ ರೈಲ್ವೇ ಯೋಜನೆಗೆ 150 ಕೋಟಿ
CHITRADURGA NEWS | 07 AUGUST 2024
ಚಿತ್ರದುರ್ಗ: ಕೇಂದ್ರ ಬಜೆಟ್‌ನಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ನೇರ ರೈಲು (Railway) ಮಾರ್ಗಕ್ಕೆ 150 ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಈ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರಿಸುವಾಗಿ ರೈಲ್ವೇ ಯೋಜನೆಗೆ ವಲಯವಾರು ಅನುದಾನ ಹಂಚಿಕೆ ಮಾಡಲಿದ್ದು ನೇರ ರೈಲು ಮಾರ್ಗಕ್ಕೆ 150 ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ವೇದಾವತಿ ಜೊತೆಗೆ ನೇತ್ರಾವತಿ ಸಮಾಗಮ | ಎತ್ತಿನಹೊಳೆ ನೀರು ವಿವಿ ಸಾಗರಕ್ಕೆ | ಈ ವರ್ಷವೂ ಮಾರಿಕಣಿವೆ ಕೋಡಿ ಪಕ್ಕಾ
ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವೆ 191 ಕಿ.ಮೀ ಉದ್ದದ ನೇರ ರೈಲು ಮಾರ್ಗವನ್ನು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದೆ.
ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಉಚಿತವಾಗಿ ಅಗತ್ಯ ಭೂಮಿ ಹಾಗೂ ಶೇ.50 ರಷ್ಟು ನಿರ್ಮಾಣ ವೆಚ್ಚವನ್ನು ಹಂಚಿಕೊಳ್ಳುತ್ತಿದೆ. ಒಟ್ಟಾರೆ ಯೋಜನೆಯ ವೆಚ್ಚ ರೂ.2,142.35 ಕೋಟಿಯಾಗಲಿದ್ದು, ಮಾರ್ಚ್ 2024 ರವರೆಗೆ ರೂ.359.32 ಕೋಟಿ ವೆಚ್ಚ ಮಾಡಲಾಗಿದೆ.
ಇದನ್ನೂ ಓದಿ: ಏಳು ದಿನ ವಿದ್ಯುತ್ ವ್ಯತ್ಯಯ | ಬೆಸ್ಕಾಂ ಮಾಹಿತಿ
2024-25 ರ ರೈಲ್ವೆ ಬಜೆಟ್‌ನಲ್ಲಿ 150 ಕೋಟಿ ಅನುದಾನವನ್ನು ಈ ಯೋಜನೆಗಾಗಿ ಒದಗಿಸಲಾಗಿದೆ ಎಂದಿದ್ದಾರೆ.
2024 ಏಪ್ರಿಲ್ 1ರ ಮಾಹಿತಿಯಂತೆ ಕರ್ನಾಟಕ ರಾಜ್ಯದಲ್ಲಿ ಅಂದಾಜು 47,016 ಕೋಟಿ ವೆಚ್ಚದ 21 ಹೊಸ ಮಾರ್ಗಗಳು ಹಾಗೂ 10 ಡಬ್ಲಿಂಗ್ ಕಾಮಗಾರಿಗಳು ಸೇರಿ ಒಟ್ಟು 3,840 ಕಿ.ಮೀ ಉದ್ದದ 31 ಮೂಲಸೌಲಭ್ಯ ಯೋಜನೆಗಳು ವಿವಿಧ ಹಂತದ ಪ್ಲಾನಿಂಗ್/ಅನುಮೋದನೆ/ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಿದ ಒಳಹರಿವು | ಜಲಾಶಯದ ಇಂದಿನ ನೀರಿನ ಮಟ್ಟ
ಇದರಲ್ಲಿ 1,302 ಕಿ.ಮೀ ಉದ್ದದ ಮಾರ್ಗದ ಕೆಲಸ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ ಮತ್ತು ಮಾರ್ಚ್ 2024 ರವರೆಗೆ ರೂ.17,382 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ.